ನವದೆಹಲಿ: ರಿಲಯನ್ಸ್ ಜಿಯೋ ಸಂಸ್ಥೆಯು ವಿಡಿಯೋ ಕಾಲಿಂಗ್ಗಾಗಿ ಜಿಯೋ ಮೀಟ್ ಆಪ್ ಬಿಡುಗಡೆ ಮಾಡಿದೆ. ಈ ಆಪ್ ಜೂಮ್ ಗೂಗಲ್ ಮೀಟ್ ಮತ್ತು ಸ್ಕೈಪ್ನಂತೆ ಸೌಲಭ್ಯ ಹೊಂದಿದ್ದು ಅದಕ್ಕಿಂತ ಹೆಚ್ಚಿನ ಸುರಕ್ಷತೆ ಹೊಂದಿದೆ ಎನ್ನಲಾಗಿದೆ.
ಜಿಯೋ ಮೀಟ್ನಲ್ಲಿ 100 ಜನರೊಂದಿಗೆ ಒಂದೇ ಸಮಯದಲ್ಲಿ ಸಭೆ ನಡೆಸಬಹುದು. ಸಭೆ ನಡೆಯುವುದಕ್ಕೆ ಮೊದಲೇ ಶೆಡ್ಯುಲ್ ಮಾಡಿಡಬಹುದಾಗಿದೆ. ಬೇರೆ ವಿಡಿಯೋ ಕಾಲಿಂಗ್ ಆಪ್ಗಳಿಗಿಂತ ಹೆಚ್ಚು ಜನರನ್ನು ಇದರಲ್ಲಿ ವಿಡಿಯೋ ಕಾಲ್ ಮೂಲಕ ಸಂರ್ಪಸ ಬಹುದಾಗಿದೆ.
ಎನ್ಕ್ರಿಪ್ಷನ್ ಕೂಡ ಮಾಡಲಾಗಿದ್ದು, ಹೆಚ್ಚಿನ ಸುರಕ್ಷತೆ ನೀಡಲಾಗಿದೆ. ಯಾವ ಸಮಯದಲ್ಲಾದರೂ ನೇರವಾಗಿ ಕಾಲ್ನಲ್ಲಿ ಸೇರಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ. ಕರೆಯಲ್ಲಿರುವಾಗಲೇ ಸ್ಕಿ›ೕನ್ ಶೇರ್ ಮಾಡುವ ಅವಕಾಶವನ್ನು ನೀಡಲಾಗಿದೆ.