ಪಟನಾ: ಬಿಹಾರ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಬಾಕಿ ಇದೆ. ಬಿಹಾರದಲ್ಲಿ ಬಿಜೆಪಿ-ಜೆಡಿಯು ಜಂಟಿಯಾಗಿ ಚುನಾವಣೆ ಎದುರಿಸಲಿದ್ದು ನಿನ್ನೆಯಷ್ಟೇ ಬಿಜೆಪಿ ತನ್ನ ಪಾಲಿನ 121 ಸೀಟ್ಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದೀಗ ಜೆಡಿಯು ಕೂಡ ತನ್ನ 115 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಆಗಸ್ಟ್ನಲ್ಲಿ ರಾಷ್ಟ್ರೀಯ ಜನತಾ ದಳ್ (ಆರ್ಜೆಡಿ)ದಿಂದ ಜೆಡಿಯುಗೆ ಸೇರಿದ್ದ ತೇಜ್ ಪ್ರತಾಪ್ ಯಾದವ್ ಮಾವ ಚಂದ್ರಿಕಾ ರೈ ಅವರು ಪಾರ್ಸಾ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಇದನ್ನೂ ಓದಿ: ಈ ಊರಲ್ಲಿ ಒಕ್ಕಲಿಗರು ಬಿಟ್ಟು ಬೇರೆ ಸಮುದಾಯ ವಾಸಕ್ಕೆ ಬಂದ್ರೆ ಆಪತ್ತು ಖಚಿತ: ಇದು ನಿಗೂಢ ಗ್ರಾಮವಂತೆ..!?
ಒಟ್ಟು 243 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 121ರಲ್ಲಿ ಬಿಜೆಪಿ ಮತ್ತು 122ರಲ್ಲಿ ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಜೆಡಿಯು ತನ್ನ ಪಾಲಿನೆ 122 ಸೀಟ್ಗಳಲ್ಲಿ 7 ಕ್ಷೇತ್ರಗಳನ್ನು ಹಿಂದುಸ್ತಾನ್ ಅವಾಮಿ ಮೋರ್ಚಾಗೆ ಬಿಟ್ಟುಕೊಟ್ಟಿದ್ದು, ಆ ಪಕ್ಷ ಕೂಡ ಶೀಘ್ರದಲ್ಲೇ ಲಿಸ್ಟ್ ಬಿಡುಗಡೆ ಮಾಡಲಿದೆ.
ಈ ಬಾರಿಯೂ ಬಿಜೆಪಿ-ಜೆಡಿಯು ಮೈತ್ರಿ ಗೆದ್ದರೆ ಬಿಹಾರದಲ್ಲಿ ಮತ್ತೊಮ್ಮೆ ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ. (ಏಜೆನ್ಸೀಸ್)