ನ್ಯೂಸ್

ಪಂಚರತ್ನ ರಥಯಾತ್ರೆ ಬಿಜೆಪಿ-ಕಾಂಗ್ರೆಸ್​​ನ ಯಾತ್ರೆಗಿಂತ ಭಿನ್ನ; ಹೇಗೆ ಎಂದು ವಿವರಿಸಿದ ಕುಮಾರಸ್ವಾಮಿ!

ಬೆಂಗಳೂರು: 'ಕಾಂಗ್ರೆಸ್‌ ಮತ್ತು ಬಿಜೆಪಿಯ ಕಾರ್ಯಕ್ರಮಗಳಿಗಿಂತಲೂ ನಮ್ಮ ಪಂಚರತ್ನ ರಥಯಾತ್ರೆ ಬಹಳ ಭಿನ್ನವಾಗಿರುತ್ತೆ' ಎಂದು ಮಾಜಿ ಮುಖ್ಯಮಂತ್ರಿ ಎಚ್​ಡಿಕೆ ಹೇಳಿದ್ದಾರೆ.

'ನಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂಬುದನ್ನು ಹೇಳುತ್ತಾ ಹೋಗುತ್ತೇವೆ. ನಾವು ಯಾರ ಬಗ್ಗೆಯೂ ಆರೋಪ ಮಾಡುತ್ತಾ ಯಾತ್ರೆ ಮಾಡುವುದಿಲ್ಲ. ಬದಲಾಗಿ ನಮ್ಮ ಕಾರ್ಯಕ್ರಮಗಳನ್ನ ಜನರಿಗೆ ತಿಳಿಸುತ್ತೇವೆ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿವರಿಸಿದರು.

ಈ ಬಾರಿಯ ಅಧಿವೇಶನದ ಬಗ್ಗೆ ಮಾತನಾಡುತ್ತಾ 'ಅಧಿವೇಶನದಲ್ಲಿ ಭಾಗವಹಿಸುವುದು ನನಗೆ ಕಷ್ಟ ಆಗಲಿದೆ. ಹೀಗಾಗಿ ನಾನು ಯಾವ ವಿಷಯಗಳನ್ನು ಪ್ರಸ್ತಾಪ ಮಾಡಬೇಕೆಂದು ನಮ್ಮ ಪಕ್ಷದ ಶಾಸಕರಿಗೆ ತಿಳಿಸುತ್ತೇನೆ. ಈ ಬಾರಿ ನಾವು ಪಕ್ಷದಲ್ಲಿರುವ ಅಸಮಧಾನಿತರ ಮನವೂಲಿಕೆ ಮಾಡುತ್ತೇವೆ' ಎಂದು ತಮ್ಮ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.