More

    ರಸ್ತೆ ಗುಂಡಿಗಳಲ್ಲಿ ಪಟಾಕಿ ಸಿಡಿಸಿ ದೀಪಾವಳಿ ಆಚರಣೆ; ಬಿಬಿಎಂಪಿ, ಜನಪ್ರತಿನಿಧಿಗಳ ವಿರುದ್ದ ವಿಶಿಷ್ಟ ಪ್ರತಿಭಟನೆ

    ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯ ವಹಿಸಿರುವ ಬಿಬಿಎಂಪಿ ಹಾಗೂ ಜನಪ್ರತಿನಿಧಿಗಳ ವಿರುದ್ದ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶ್ರೀನಗರ ಪೈಪ್ ಲೈನ್ ರಸ್ತೆಯಲ್ಲಿನ ರಸ್ತೆಗುಂಡಿಗಳಲ್ಲಿ ಪಟಾಕಿ ಹಚ್ಚಿ, ದೀಪಾವಳಿ ಆಚರಿಸುವ ಮೂಲಕ ಕೆಪಿಸಿಸಿ ವಕ್ತಾರ ಡಾ. ಶಂಕರ್ ಗುಹಾ ದ್ವಾರಕನಾಥ್ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

    ನಗರದ ರಸ್ತೆಗುಂಡಿಗಳಿಂದ ದಿನದಿಂದ ದಿನಕ್ಕೆ ಅನಾಹುತಗಳು ಹೆಚ್ಚಾಗುತ್ತಿದ್ದು ವಾಹನ ಸವಾರರು ಪ್ರತೀ ದಿನ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಅನೇಕ ಜೀವಗಳು ಬಲಿಯಾದರೂ ಸರ್ಕಾರ ಹಾಗೂ ಬಿಬಿಎಂಪಿ ಎಚ್ಚತ್ತುಕೊಳ್ಳದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ. ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸ್ಥಳೀಯರು ರಸ್ತೆಯ ಗುಂಡಿಗಳಲ್ಲಿ ಭೂಚಕ್ರ, ಹೂಕುಂಡ, ಪಟಾಕಿಯನ್ನು ಹಚ್ಚಿ ತಮ್ಮ ಆಕ್ರೋಶ ಹೊರಹಾಕಿದರು.

    ಪ್ರತಿಭಟನೆಯ ನೇತೃತ್ವ ವಹಿಸಿರುವ ಕೆಪಿಸಿಸಿ ವಕ್ತಾರ ಶಂಕರ್ ಗುಹಾ ದ್ವಾರಕನಾಥ್ ಮಾತನಾಡಿ, ಇದು ದೀಪಾವಳಿ ಅಲ್ಲ ಗುಂಡಿಗಳ ಹಾವಳಿ. ರಸ್ತೆ ತುಂಬ ಗುಂಡಿಗಳೇ ತುಂಬಿ ಹೋಗಿದೆ. ಇಳಿಜಾರಿನ ರಸ್ತೆಯಲ್ಲಿ ಗುಂಡಿ ಮುಚ್ಚಿದೆ ಇರುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.

    ಶಾಸಕರು, ಸಂಸದರು ಎಲ್ಲರೂ ಬಿಜೆಪಿಯವರೆ ಇದ್ದಾರೆ. ಕೇಂದ್ರದಲ್ಲೂ ಅವರದೇ ಸರ್ಕಾರವಿದ್ದರೂ, ಯಾವುದೇ ಪ್ರಗತಿಪರ ಕೆಲಸಗಳು ನಡೆಯುತ್ತಿಲ್ಲ. ಗುಂಡಿ ಮುಚ್ಚಬೇಕಾದ ತುರ್ತು ಕೆಲಸವನ್ನು ಸಹಿತ ಮಾಡದೆ ಬಿಜಪಿಯವರು ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ನಿರತರಾಗಿದ್ದಾರೆ. ಜನರ ನೋವಿಗೆ, ಜನರ ತೊಂದರೆಗಳಿಗೆ ಸ್ಪಂದಿಸದ ಇವರು ಭಾಷಣಗಳಲ್ಲಿ ಮಾತ್ರ ಜನಸ್ಪಂದನೆ ಎಂದರೆ ಏನೂ ಪ್ರಯೋಜನವಿಲ್ಲ ಎಂದು ಕಿಡಿಕಾರಿದ್ದಾರೆ.

    ತಮ್ಮ ಕ್ಷೇತ್ರದಲ್ಲಿ ಸಮಸ್ಯೆಗಳಿದ್ದರೂ ಸಂಸದ ತೇಜಸ್ವಿ ಸೂರ್ಯ ಹಾಗೂ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಯಾವುದೇ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಒಂದೇ ಮನೆಯಲ್ಲಿ ಡಬಲ್ ಅಧಿಕಾರವನ್ನು ಹೊಂದಿರುವ ಇವರು ಕ್ಷೇತ್ರದ ಜನರ ಯಾವುದೇ ಸಮಸ್ಯೆಗಳು ತಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಡಬಲ್ ಎಂಜಿನ್ ಸರ್ಕಾರದಿಂದ ಜನರ ಸಮಸ್ಯೆಗಳು ಡಬಲ್ ಆಗುತ್ತಿದೆ ಹೊರತು ಪರಿಹಾರವಾಗುತ್ತಿಲ್ಲ. ಉದ್ಯಾನ ನಗರಿ ಎಂದು ಹೆಸರುವಾಸಿಯಾಗಿದ್ದ ಬೆಂಗಳೂರು ಇಂದು ಅನೇಕ ಸಮಸ್ಯೆಗಳಿಗೆ ಹೆಸರುವಾಸಿಯಾಗುತ್ತಿದೆ. ಶಾಸಕರಿಗೆ ಎಷ್ಟು ಸಲ ಮನವಿ ಮಾಡಿದರೂ ಸಮಸ್ಯೆ ಬಗೆಹರಿಸಿಲ್ಲ.ಈಗ ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದೇವೆ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಹೇಳಿದರು.

    ಪಂಚರತ್ನ ರಥಯಾತ್ರೆ ಬಿಜೆಪಿ-ಕಾಂಗ್ರೆಸ್​​ನ ಯಾತ್ರೆಗಿಂತ ಭಿನ್ನ; ಹೇಗೆ ಎಂದು ವಿವರಿಸಿದ ಕುಮಾರಸ್ವಾಮಿ!

    ಬೆಂಗಳೂರು: ‘ಕಾಂಗ್ರೆಸ್‌ ಮತ್ತು ಬಿಜೆಪಿಯ ಕಾರ್ಯಕ್ರಮಗಳಿಗಿಂತಲೂ ನಮ್ಮ ಪಂಚರತ್ನ ರಥಯಾತ್ರೆ ಬಹಳ ಭಿನ್ನವಾಗಿರುತ್ತೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್​ಡಿಕೆ ಹೇಳಿದ್ದಾರೆ.

    ‘ನಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂಬುದನ್ನು ಹೇಳುತ್ತಾ ಹೋಗುತ್ತೇವೆ. ನಾವು ಯಾರ ಬಗ್ಗೆಯೂ ಆರೋಪ ಮಾಡುತ್ತಾ ಯಾತ್ರೆ ಮಾಡುವುದಿಲ್ಲ. ಬದಲಾಗಿ ನಮ್ಮ ಕಾರ್ಯಕ್ರಮಗಳನ್ನ ಜನರಿಗೆ ತಿಳಿಸುತ್ತೇವೆ’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿವರಿಸಿದರು.

    ಈ ಬಾರಿಯ ಅಧಿವೇಶನದ ಬಗ್ಗೆ ಮಾತನಾಡುತ್ತಾ ‘ಅಧಿವೇಶನದಲ್ಲಿ ಭಾಗವಹಿಸುವುದು ನನಗೆ ಕಷ್ಟ ಆಗಲಿದೆ. ಹೀಗಾಗಿ ನಾನು ಯಾವ ವಿಷಯಗಳನ್ನು ಪ್ರಸ್ತಾಪ ಮಾಡಬೇಕೆಂದು ನಮ್ಮ ಪಕ್ಷದ ಶಾಸಕರಿಗೆ ತಿಳಿಸುತ್ತೇನೆ. ಈ ಬಾರಿ ನಾವು ಪಕ್ಷದಲ್ಲಿರುವ ಅಸಮಧಾನಿತರ ಮನವೂಲಿಕೆ ಮಾಡುತ್ತೇವೆ’ ಎಂದು ತಮ್ಮ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts