ಮುಂಬೈ: ಬಾಲಿವುಡ್ ಕಿಂಗ್ ಖಾನ್, ನಟ ಶಾರೂಖ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಜವಾನ್' ಸೆಪ್ಟಂಬರ್ 07 ರಂದು ಜಾಗತಿಕವಾಗಿ ಬಿಡುಗಡೆಗೊಳ್ಳುವ ಮುಖೇನ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸದ್ಯ ಚಿತ್ರದ ಹಿಂದಿ ಆವೃತ್ತಿ ಮೊದಲನೇ ದಿನವೇ ಬಾಕ್ಸ್ ಆಫೀಸ್‌ನಲ್ಲಿ 65 ಕೋಟಿ ರೂ. ಗಳಿಕೆಯನ್ನು ಕಂಡಿದೆ.
ಇದನ್ನೂ ಓದಿ: Ramesh Jigajinagi On Lok Sabha Election 2024 | ಲೋಕಸಭೆ ಟಿಕೆಟ್ ಫೈಟ್ ಬಗ್ಗೆ ರಮೇಶ ಜಿಗಜಿಣಗಿ ಸ್ಫೋಟಕ ಹೇಳಿಕೆ
ಬಿಡುಗಡೆಗೊಂಡ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲು ಪ್ರಾರಂಭಿಸರುವ ಅಟ್ಲಿ ನಿರ್ದೇಶನದ 'ಜವಾನ್' ಚಿತ್ರಕ್ಕೆ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ಲಭ್ಯವಾಗಿದ್ದು. ಎರಡನೇ ದಿನಕ್ಕೆ ಒಟ್ಟು 111 ಕೋಟಿ ರೂ. (ಭಾರತದಲ್ಲಿ ಹಿಂದಿ ಆವೃತ್ತಿ ಮಾತ್ರ) ಗಳಿಸಿದೆ.
ಚಿತ್ರವು ವಿಶ್ವಾದ್ಯಂತ ಎರಡು ದಿನಕ್ಕೆ ಒಟ್ಟು 230 ಕೋಟಿ ರೂ. ಗಳಿಕೆಯನ್ನು ಕಂಡಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ. ಭಾರತದಲ್ಲಿ 'ಜವಾನ್ ಸಿನಿಮಾ 'ಪಠಾಣ್' ಗಳಿಕೆಯನ್ನು ಮೀರಿಸಿ, ಸದ್ಯ ಭಾರೀ ಟ್ರೆಂಡಿಂಗ್‌ನಲ್ಲಿದೆ. ಈಗಾಗಲೇ ವಾರಾಂತ್ಯದಲ್ಲಿ ಚಿತ್ರ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂಗಡ ಬುಕ್ಕಿಂಗ್ ಆಗಿದ್ದು, 230 ಕೋಟಿ ರೂ.ಗೂ ಅಧಿಕ ಲಾಭವನ್ನು ಚಿತ್ರ ಗಳಿಕೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಬಿಜೆಪಿಯಿಂದ ಯಾರೂ ಕಾಂಗ್ರೆಸ್ ಸೇರಲ್ಲ; ಪಕ್ಷ ಬಲಪಡಿಸುವ ಆಸೆಯಲ್ಲಿ ಡಿಕೆಶಿ ಹೀಗೆ ಹೇಳ್ತಿದ್ದಾರೆ: ಕೋಟ ಶ್ರೀನಿವಾಸ್ ಪೂಜಾರಿ
ಚಿತ್ರದಲ್ಲಿ ಶಾರೂಖ್ ಖಾನ್ಗೆ ನಾಯಕಿಯಾಗಿ ನಯನತಾರ ನಟಿಸಿದ್ದಾರೆ. ವಿಜಯ್ ಸೇತುಪತಿ, ಸಾನ್ಯ ಮಲ್ಹೋತ್ರಾ, ಪ್ರಿಯಾಮಣಿ, ಯೋಗಿ ಬಾಬು ಸೇರಿದಂತೆ ಇತರ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ,(ಏಜೆನ್ಸೀಸ್).