ಮುಂಬೈ: ನಟಿ ಜಾಸ್ಮಿನ್ ಭಾಸಿನ್ ಕಿರುತೆರೆಯಲ್ಲಿ ತಮ್ಮ ಮಾತಿನ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ತನ್ನ ಬಬ್ಲಿ ಸ್ವಭಾವ ಮತ್ತು ಆಕರ್ಷಕ ನಡವಳಿಕೆಯಿಂದಾಗಿ ಈ ನಟಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದಿದ್ದಾರೆ. ‘ದಿಲ್ ಸೇ ದಿಲ್ ತಕ್’, ‘ನಾಗಿನ್’, ‘ದಿಲ್ ತೋ ಹ್ಯಾಪಿ ಹೈ ಜಿ’, ‘ಜಬ್ ವಿ ಮ್ಯಾಚ್ಡ್’ ನಂತಹ ಅನೇಕ ಸೂಪರ್ಹಿಟ್ ಧಾರಾವಾಹಿಗಳಲ್ಲಿ ನಟಿ ಜಾಸ್ಮಿನ್ ಭಾಸಿನ್ ನಟಿಸಿದ್ದಾರೆ. ಇದಲ್ಲದೆ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಜನಪ್ರಿಯರಾಗಿದ್ದಾರೆ.
ಇದನ್ನು ಓದಿ: ಅಂಬಾನಿ ಫ್ಯಾಮಿಲಿ ಗಿಫ್ಟ್ ಮಾಡಿದ ₹2 ಕೋಟಿ ವಾಚ್; ವಿಶೇಷತೆ.. ಪಡೆದವರು ಕಟ್ಟಬೇಕಾದ ಟ್ಯಾಕ್ಸ್ ಎಷ್ಟು ಗೊತ್ತಾ?
ನಟಿ ಜಾಸ್ಮಿನ್ ಭಾಸಿನ್ ಇತ್ತೀಚೆಗೆ ಖಾಸಗಿ ವಾಹಿನಿಯ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ಕಣ್ಣಿಗೆ ಲೆನ್ಸ್ ಹಾಕಿಕೊಂಡ ನಂತರ ಅವರಿಗೆ ಸಮಸ್ಯೆ ಶುರುವಾಗಿರುವುದಾಗಿ ಹೇಳಿದ್ದಾರೆ. ನಾನು ಜುಲೈ 17ರಂದು ಈವೆಂಟ್‌ಗಾಗಿ ದೆಹಲಿಯಲ್ಲಿದ್ದೆ. ಲೆನ್ಸ್ನಲ್ಲಿನ ಸಮಸ್ಯೆ ಏನೆಂಬುದು ನನಗೆ ತಿಳಿದಿಲ್ಲ. ಆದರೆ ಅವುಗಳನ್ನು ಧರಿಸಿದ ನಂತರ ಕಣ್ಣಿನಲ್ಲಿ ಸಮಸ್ಯೆ ಪ್ರಾರಂಭವಾಯಿತು. ಬಳಿಕ ಕಣ್ಣಿನಲ್ಲಿ ನೋವು ಕಾಣಿಸಿಕೊಂಡಿತು ಕ್ರಮೇಣ ಹೆಚ್ಚಾಯಿತು. ಆದರೆ ನಾನು ಈವೆಂಟ್ಗೆ ಮೊದಲ ಆದ್ಯತೆ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ ಎಂದು ಹೇಳಿದರು.
ಈವೆಂಟ್ ಮುಗಿದ ಬಳಿಕ ಕಣ್ಣಿನ ವೈದ್ಯರನ್ನು ಭೇಟಿ ಮಾಡಿದೆ. ಅವರ ಕಣ್ಣುಗಳನ್ನು ಪರೀಕ್ಷಿಸಿದ ನಂತರ ನನ್ನ ಕಣ್ಣಿನ ಕಾರ್ನಿಯಾವು ಹಾನಿಗೊಳಗಾಗಿದೆ ಮತ್ತು ಗುಣವಾಗಲು ಕನಿಷ್ಠ 4 ರಿಂದ 5 ದಿನಗಳು ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಮರುದಿನ ನಾನು ಮುಂಬೈಗೆ ಧಾವಿಸಿ ಇಲ್ಲಿ ನನ್ನ ಚಿಕಿತ್ಸೆಯನ್ನು ಮುಂದುವರಿಸಿದೆ. ಕಾರ್ನಿಯಾವು ಹಾನಿಗೊಳಗಾದ ಕಾರಣ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿ, ಎರಡೂ ಕಣ್ಣುಗಳಿಗೆ ಬ್ಯಾಂಡೇಜ್ ಹಾಕಿದ್ದಾರೆ ಎಂದು ವಿವರಿಸಿದರು.
ನಾನು ತುಂಬಾ ನೋವನ್ನು ಅನುಭವಿಸುತ್ತಿದ್ದೇನೆ. ಮುಂದಿನ ನಾಲ್ಕೈದು ದಿನಗಳಲ್ಲಿ ನಾನು ಚೇತರಿಸಿಕೊಳ್ಳಬೇಕು, ಆದರೆ ಅಲ್ಲಿಯವರೆಗೆ ನಾನು ನನ್ನ ಕಣ್ಣುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ. ಇದು ಸುಲಭವಲ್ಲ ಏಕೆಂದರೆ ನಾನು ನೋಡಲು ಸಾಧ್ಯವಿಲ್ಲ ಮತ್ತು ನೋವಿನಿಂದ ನಿದ್ರೆ ಮಾಡಲು ಕಷ್ಟಪಡುತ್ತಿದ್ದೇನೆ ಎಂದು ಜಾಸ್ಮಿನ್ ತಮ್ಮ ಕಣ್ಣಿನ ಪ್ರಸ್ತುತ ಸ್ಥಿತಿಯನ್ನು ತಿಳಿಸಿದರು. ಆದರೆ ನಾನು ನನ್ನ ಯಾವುದೇ ಕೆಲಸವನ್ನು ಮುಂದೂಡುವುದಿಲ್ಲ. ಕೆಲವು ದಿನಗಳಲ್ಲಿ ಚೇತರಿಸಿಕೊಂಡು ನನ್ನ ಕೆಲಸಕ್ಕೆ ಮತ್ತೆ ಮರಳುತ್ತೇನೆ ಎಂದು ತಿಳಿಸಿದರು. (ಏಜೆನ್ಸೀಸ್)