ನ್ಯೂಸ್

ರಾಜೀನಾಮೆ ನೀಡಲಿದ್ದಾರಂತೆ ಜಪಾನ್​ ಪ್ರಧಾನಿ ಶಿಂಜೋ ಅಬೆ: ಕಾರಣ ಹೀಗಿದೆ?

ಟೋಕಿಯೊ: ಆರೋಗ್ಯ ಸಮಸ್ಯೆಯಿಂದಾಗಿ ಜಪಾನ್​ ಪ್ರಧಾನಿ ಶಿಂಜೋ ಅಬೆ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಅದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.

ಶಿಂಜೋ ಅಬೆ ಅವರ ಆರೋಗ್ಯ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ತೊಂದರೆಯಾಗಲಿದೆ ಚಿಂತೆಗೀಡಾಗಿದ್ದಾರೆಂದು ಜಪಾನ್​ನ ಮುಂಚೂಣಿ ಮಾಧ್ಯಮ ಎನ್​ಎಚ್​ಕೆ ವರದಿ ಮಾಡಿದೆ. ಆದರೆ, ಯಾವ ಮೂಲಗಳಿಂದ ಮಾಹಿತಿ ಬಂದಿದೆ ಎಂಬುದನ್ನು ಖಚಿತಪಡಿಸಿಲ್ಲ.

ಅಬೆ ಅವರ ಆರೋಗ್ಯ ಕುರಿತಾದ ಊಹಾಪೋಹಗಳು ದಿನದಿಂದ ಹೆಚ್ಚಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ಅಬೆ ಅವರು ಎರಡು ಬಾರಿ ಪ್ರತ್ಯೇಕವಾಗಿ ಆಸ್ಪತ್ರೆಗೆ ಭೇಟಿ ಮಾಡಿದ್ದು, ಊಹಾಪೋಹಗಳಿಗೆ ರೆಕ್ಕೆ ಬಂದಂತಾಗಿದೆ. ಹೀಗಾಗಿ ಜಪಾನ್​ನಲ್ಲಿ ಅಬೆ ಆರೋಗ್ಯ ವಿಚಾರ ಇದೀಗ ಹೆಚ್ಚು ಚರ್ಚೆಯ ವಿಷಯವಾಗಿದೆ. ಇದರ ಬೆನ್ನಲ್ಲೇ ರಾಜೀನಾಮೆ ಸುದ್ದಿ ಹರಿದಾಡುತ್ತಿದ್ದು, ಇದು ಎಷ್ಟರ ಮಟ್ಟಿಗೆ ನಿಜವೆಂಬುದನ್ನು ಕಾಲವೇ ನಿರ್ಧರಿಸಲಿದೆ. (ಏಜೆನ್ಸೀಸ್​)