ಟೋಕಿಯೋ: ಜಪಾನ್ನಲ್ಲಿ ಕರೊನಾ ಸೋಂಕು ಹರಡದಂತೆ ತಡೆಯಲು ಅಲ್ಲಿನ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಇದರಿಂದಾಗಿ ಅಲ್ಲಿ ಕರೊನಾ ಸೋಂಕಿತರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಸದ್ಯ ಅಲ್ಲಿ 7 ಸಾವಿರ ಜನರು ಸೋಂಕಿಗೆ ತುತ್ತಾಗಿದ್ದಾರೆ. ಸೋಂಕು ತಡೆಗಟ್ಟಲು ದೇಶಾದ್ಯಂತ ತುರ್ತು ಸ್ಥಿತಿ ಘೋಷಿಸಿದ್ದು, ಅನಗತ್ಯವಾಗಿ ಯಾರೂ ಹೊರಬರದಂತೆ ನಿರ್ಬಂಧಿಸಲಾಗಿದೆ. ಇಂಥ ಸ್ಥಿತಿಯನ್ನು ನಿಭಾಯಿಸಲು ಸದಾ ಸನ್ನದ್ಧರಾಗಿರಬೇಕಾದ ಪ್ರಧಾನಿ, ಮನೆಯಲ್ಲಿ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ ಎಂದು ಜಪಾನ್ ಪ್ರಧಾನಿ ಶಿನ್ಜೋ ಅಬೆ ವಿರುದ್ಧ ಆರೋಪಗಳು ಕೇಳಿ ಬಂದಿವೆ.
ಮನೆಯಲ್ಲಿ ಸೋಫಾ ಮೇಲೆ ಕುಳಿತಿರುವ ಶಿನ್ಜೋ ಅಬೆ ತಮ್ಮ ಸಾಕುನಾಯಿ ಜತೆ ವಿರಾಮದಲ್ಲಿ ಸಮಯ ಕಳೆಯುತ್ತಿದ್ದಾರೆ. ಅಂತೆಯೇ ಆರಾಮವಾಗಿ ಚಹಾ ಕುಡಿಯುತ್ತಾ ವಿರಮಿಸುತ್ತಿರುವ ದೃಶ್ಯಗಳು ಈ ಟ್ವೀಟ್ನಲ್ಲಿ ಅಡಕವಾಗಿವೆ.
ಜಪಾನ್ನಲ್ಲಿ ಕೋವಿಡ್ 19 ತುರ್ತು ಇರುವ ಸಂದರ್ಭದಲ್ಲಿ ಶಿನ್ಜೋ ಅಬೆ ಆರಾಮವಾಗಿ ಕಾಲಕಳೆಯುತ್ತಿದ್ದಾರೆ. ಏನೂ ಆಗದವರಂತೆ ನಿರ್ಲಿಪ್ತವಾಗಿದ್ದಾರೆ ಎಂದು ಸಾರ್ವಜನಿಕರೊಬ್ಬರು ಟ್ವೀಟ್ನಲ್ಲಿ ಟೀಕಿಸಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಮತ್ತೊಬ್ಬ ಪ್ರಧಾನಿ ನಿರಂತರವಾಗಿ ಒತ್ತಡದಲ್ಲೇ ಕೆಲಸ ಮಾಡುತ್ತಿರುತ್ತಾರೆ. ಅವರಿಗೂ ಒಂದಷ್ಟು ವಿಶ್ರಾಂತಿ ಬೇಕಲ್ಲವೇ ಎಂದು ಪ್ರಶ್ನಿಸಿ, ಟ್ವೀಟ್ ಪ್ರಕಟಿಸಿರುವ ವ್ಯಕ್ತಿಯ ಕ್ರಮವನ್ನು ವಿರೋಧಿಸಿದ್ದಾರೆ.