Krishna Janmashtami : ಎಲ್ಲೆಡೆ ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಕೆಲವು ಉಪವಾಸ ಮಾಡಿ ಭಕ್ತಿಯಿಂದ ಪೂಜೆ ಮಾಡಿ, ಮಕ್ಕಳಿಗೆ ಕೃಷ್ಣನ ವೇಷ ತೊಟ್ಟು ಸಂಭ್ರಮಿಸುತ್ತಾರೆ. ಈ ಪವಿತ್ರ ದಿನದಂದು ಶ್ರೀಕೃಷ್ಣನನ್ನು ಪೂಜಿಸುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಯೂಟ್ಯೂಬರ್ 'ಜ್ಯೋತಿ ಮಲ್ಹೋತ್ರಾ' ಐಎಸ್ಐ ಏಜೆಂಟ್ಗಳ ಸಂಪರ್ಕ ಪತ್ತೆ; 2,500 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ| youtuber
ಜನ್ಮಾಷ್ಟಮಿಯನ್ನು ದೇಶಾದ್ಯಂತ ಬಹಳ ವೈಭವ ಮತ್ತು ಪ್ರದರ್ಶನದೊಂದಿಗೆ ಆಚರಿಸಲಾಗುತ್ತಿದೆ. ಆದರೆ ಪಾಕಿಸ್ತಾನದಲ್ಲಿಯೂ ಒಂದು ಕೃಷ್ಣ ದೇವಾಲಯವಿದೆ ಎಂದು ನಿಮಗೆ ಗೊತ್ತಾ? ಹೌದು ಪಾಕಿಸ್ತಾನದಲ್ಲೂ ಸಹ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಹಾಗಿದ್ರೆ ಜಗತ್ತಿನ ಎಷ್ಟು ದೇಶಗಳಲ್ಲಿ ಕೃಷ್ಣನನ್ನು ಪೂಜಿಸಲಾಗುತ್ತದೆ ಎಂಬುದನ್ನು ತಿಳಿಯೋಣ.
'ಕೃಷ್ಣ ಮಂದಿರ ರಾವಲ್ಪಿಂಡಿ' ಎಂಬ ಹೆಸರಿನ ಶ್ರೀಕೃಷ್ಣನ ಪ್ರಸಿದ್ಧ ದೇವಾಲಯ ಪಾಕಿಸ್ತಾನದಲ್ಲಿದೆ. ಇದು ರಾವಲ್ಪಿಂಡಿಯಲ್ಲಿರುವ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಈ ದೇವಾಲಯವನ್ನು 1897 ರಲ್ಲಿ ನಿರ್ಮಿಸಲಾಗಿದ್ದು, ಇದನ್ನು ಕಾಂಚಿ ಮಾಲ್ ಮತ್ತು ಉಜಾಗರ್ ಮಾಲ್ ರಾಮ್ ಪಂಚಲ್ ಎಂಬುವವರು ನಿರ್ಮಾಣ ಮಾಡಿದ್ದಾರೆ. ಜನ್ಮಾಷ್ಟಮಿಯ ದಿನ ಅಮ್ರಾಕೋಟ್, ಕರಾಚಿ, ಲಾಹೋರ್ ಮತ್ತು ಕ್ವೆಟ್ಟಾದಂತಹ ನಗರಗಳಲ್ಲಿ ಜನ್ಮಾಷ್ಟಮಿಯಂದು ದೇವಾಲಯಗಳನ್ನು ಅಲಂಕರಿಸಲಾಗುತ್ತದೆ.
ವೈಷ್ಣವ ಧರ್ಮದಲ್ಲಿ ಕೃಷ್ಣನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ. ಇಸ್ಕಾನ್ ವಿಶ್ವಾದ್ಯಂತ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದೆ. 1960 ರ ದಶಕದ ಬಳಿಕ, ಇಸ್ಕಾನ್ ನಂತಹ ಸಂಸ್ಥೆಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಕೃಷ್ಣ ಭಕ್ತಿಯನ್ನು ಜನಪ್ರಿಯಗೊಳಿಸಿದವು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸುಂದರವಾದ ಇಸ್ಕಾನ್ ದೇವಾಲಯವಿದೆ ಮತ್ತು ಪ್ರಪಂಚದಾದ್ಯಂತ ಕೃಷ್ಣ ದೇವಾಲಯಗಳು ಅಸ್ತಿತ್ವದಲ್ಲಿವೆ. ಭಾರತ ಮತ್ತು ಪ್ರಪಂಚದಾದ್ಯಂತ ಕೃಷ್ಣನ ಮೇಲಿನ ಭಕ್ತಿ ವಿವಿಧ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.
(ಏಜೆನ್ಸೀಸ್)
ಫಿಜಿ, ಬಾಂಗ್ಲಾದೇಶ, ನೇಪಾಳ, ಸಿಂಗಾಪುರ ಮತ್ತು ಬರ್ಮಾದಂತಹ ದೇಶಗಳಲ್ಲಿ ಕೃಷ್ಣ ದೇವಾಲಯಗಳಿವೆ, ಅಲ್ಲಿ ಜನ್ಮಾಷ್ಟಮಿ ಆಚರಿಸಲಾಗುತ್ತದೆ.
ಆಸ್ಟ್ರೇಲಿಯಾದಲ್ಲೂ ಕೃಷ್ಣ ದೇವಾಲಯವಿದೆ.
ಯುರೋಪಿನಲ್ಲಿ, ವಿಶೇಷವಾಗಿ ಸ್ಪೇನ್, ಇಟಲಿ, ಫ್ರಾನ್ಸ್ ಮತ್ತು ಬೆಲ್ಜಿಯಂನಲ್ಲಿ ಅನೇಕ ಕೃಷ್ಣ ದೇವಾಲಯಗಳಿವೆ.
ದಕ್ಷಿಣ ಅಮೆರಿಕಾದಲ್ಲಿ ವಿಶೇಷವಾಗಿ ಅರ್ಜೆಂಟೀನಾ ಮತ್ತು ಬ್ರೆಜಿಲ್‌ನಲ್ಲಿ 60 ಕ್ಕೂ ಹೆಚ್ಚು ಇಸ್ಕಾನ್ ದೇವಾಲಯಗಳಿವೆ
ಘಾನಾದಲ್ಲಿ ಒಂದು ಆಫ್ರಿಕನ್ ಹಿಂದೂ ಮಠವಿದೆ, ಅಲ್ಲಿ ಆಫ್ರಿಕನ್ ಭಕ್ತರು ಕೃಷ್ಣನನ್ನು ಪೂಜಿಸುತ್ತಾರೆ.
ಇಸ್ಕಾನ್ ದೇವಾಲಯ (ಪ್ಯಾರಿಸ್)
ಇಸ್ಕಾನ್ ಮಂದಿರ (ಲಂಡನ್)
ಹೊಸ ವೃಂದಾವನ (ಪಶ್ಚಿಮ ವರ್ಜೀನಿಯಾ, ಯುಎಸ್ಎ)
ರಾಧಾ ಮಾಧವ ಧಾಮ (ಯುಎಸ್ಎ)
ಮೆಕ್ಸಿಕೋದಲ್ಲಿ 5 ಇಸ್ಕಾನ್ ದೇವಾಲಯಗಳಿವೆ
ಕೆನಡಾದಲ್ಲಿರುವ 12 ಇಸ್ಕಾನ್ ದೇವಾಲಯಗಳಿವೆ