Koffee With Karan: ಬಾಲಿವುಡ್ ನಟಿ ಜಾನ್ವಿ ಕಪೂರ್ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಪ್ರಸಿದ್ಧ 'ಕಾಫಿ ವಿತ್ ಕರಣ್ 9' ಶೋನಲ್ಲಿ ನಟಿ ತಾರಾ ಸುತಾರಿಯಾ ಅವರ ಬಗ್ಗೆ ಜಾನ್ವಿ ನೀಡಿದ ಪರೋಕ್ಷ ಕಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ನೆಟ್ಟಿಗರು ಅವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
'ಕಾಫಿ ವಿತ್ ಕರಣ್ 9' ಶೋನಲ್ಲಿ ವೀರ್ ಪಹಾರಿಯಾಗೆ ಯಾವ ಡೇಟಿಂಗ್ ಸಲಹೆ ನೀಡುತ್ತೀರಾ ಎಂಬ ಕರಣ್ ಜೋಹರ್ ಪ್ರಶ್ನೆಗೆ, ‘ಅವರನ್ನು ಎಂದಿಗೂ ಸಂಗೀತ ಕಚೇರಿಗೆ ಕರೆದುಕೊಂಡು ಹೋಗಬೇಡಿ’ ಎಂದು ಜಾನ್ವಿ ಕಪೂರ್ ಹೇಳಿದ್ದು, ಕರಣ್ ಹಾಗೂ ಅತಿಥಿಗಳಿಗೆ ಶಾಕ್ ನೀಡಿದೆ.
ವೀರ್ ಪಹಾರಿಯಾ ಹಾಗೂ ನಟಿ ತಾರಾ ಸುತಾರಿಯಾ ಹಿಂದೆ ಡೇಟಿಂಗ್‌ನಲ್ಲಿದ್ದರು. ಡಿಸೆಂಬರ್ 2025ರಲ್ಲಿ ಮುಂಬೈನಲ್ಲಿ ನಡೆದ ಎಪಿ ಧಿಲ್ಲೋನ್ ಸಂಗೀತ ಕಚೇರಿಯಲ್ಲಿ ತಾರಾ 'ಥೋಡಿ ಸಿ ದಾರು' ಹಾಡಿಗೆ ಹೆಜ್ಜೆ ಹಾಕಿದ್ದರು. ಈ ವೇಳೆ ಧಿಲ್ಲೋನ್ ತಾರಾಗೆ ಹಗ್ ಮಾಡಿ ಕೆನ್ನೆಗೆ ಮುತ್ತಿಟ್ಟಾಗ, ಪ್ರೇಕ್ಷಕರ ಸಾಲಿನಲ್ಲಿದ್ದ ವೀರ್ ಪಹಾರಿಯಾ ಅಸಮಾಧಾನಗೊಂಡ ವಿಡಿಯೋ ಭಾರಿ ವೈರಲ್ ಆಗಿತ್ತು.
ಇದಾದ ಕೆಲವೇ ದಿನಗಳಲ್ಲಿ ಅಂದರೆ ಜನವರಿ 2026ರಲ್ಲಿ ಇಬ್ಬರೂ ಬ್ರೇಕಪ್ ಮಾಡಿಕೊಂಡರು ಎಂದು ವರದಿಯಾಗಿತ್ತು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಜಾನ್ವಿ ಕಪೂರ್ ಈ ಕಮೆಂಟ್ ಮಾಡಿದ್ದಾರೆ ಎಂದು ನೆಟ್ಟಿಗರು ಭಾವಿಸಿದ್ದಾರೆ.
ಜಾನ್ವಿ ನೀಡಿದ ಈ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘ತನಗೆ ಅನುಕೂಲವಿದ್ದಾಗ ಮಾತ್ರ ಜಾನ್ವಿ ಫೆಮಿನಿಸ್ಟ್ ತರ ಮಾತನಾಡುತ್ತಾರೆ’ ಎಂದು ಬಳಕೆದಾರರೊಬ್ಬರು ಟೀಕಿಸಿದ್ದರೆ, ಮತ್ತೊಬ್ಬರು ‘ಇನ್ನೊಬ್ಬ ಮಹಿಳೆಯನ್ನು ಹೀಗೆ ಸಾರ್ವಜನಿಕವಾಗಿ ಕೀಳಾಗಿ ಬಿಂಬಿಸುವುದು ಸರಿಯಲ್ಲ’ ಎಂದು ಕಮೆಂಟ್ ಮಾಡಿದ್ದಾರೆ.
‘ಮಹಿಳೆಯನ್ನು ಕೀಳಾಗಿ ಬಿಂಬಿಸಿ ತಮ್ಮದೇ ನ್ಯಾರೇಟಿವ್ ಸೆಟ್ ಮಾಡುವುದು ಸರಿಯಲ್ಲ’ ಎಂದು ನೆಟ್ಟಿಗರು ಕಟುವಾಗಿ ಆಕ್ರೋಶ ಹೊರಹಾಕಿದ್ದಾರೆ. ಈ ಎಲ್ಲ ವಿವಾದಗಳ ಕುರಿತು ನಟಿ ತಾರಾ ಸುತಾರಿಯಾ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಜಾನ್ವಿ ಕಪೂರ್ ಅವರ ಈ ಕಮೆಂಟ್‌ನಿಂದ ಬಾಲಿವುಡ್‌ನಲ್ಲಿ ಹೊಸ 'ಸೆಲೆಬ್ರಿಟಿ ವಾರ್' ಶುರುವಾಗಿದೆ.