ಮುಂಬೈ: ಸಿನಿಮಾ ಸೆಲಿಬ್ರಿಟಿಗಳು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳಿಂದ ತೊಂದರೆ ಎದುರಿಸುತ್ತಿರುತ್ತಾರೆ. ಇತ್ತೀಚೆಗೆ ಬಿಟೌನ್ ನಟಿ ಜಾನ್ವಿ ಕಪೂರ್ ಕೂಡ ಇಂತಹದ್ದೇ ವಂಚನೆಗೆ ಬಲಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಹೆಸರಿನಲ್ಲಿ ಹಲವು ನಕಲಿ ಖಾತೆಗಳು ಪತ್ತೆಯಾಗಿವೆ ಎಂದು ಜಾನ್ವಿ ಕಪೂರ್ ತಂಡವು ಆಕೆಯ ಅಧಿಕೃತ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿದೆ.
ಜಾನ್ವಿ ಕಪೂರ್ ಹೆಸರಿನಲ್ಲಿ ಹಲವು ನಕಲಿ ಖಾತೆಗಳು ಪತ್ತೆಯಾಗಿವೆ. ಈ ನಕಲಿ ಖಾತೆಗಳು ಅಸಲಿ ಖಾತೆಯಂತೆ ಗೋಚರಿಸುತ್ತವೆ. ನಟಿಯ ನಿಜವಾದ ಖಾತೆಗಳೆಂದು ಅಭಿಮಾನಿಗಳನ್ನು ದಾರಿತಪ್ಪಿಸಲಾಗುತ್ತಿದೆ. ಈ ನಕಲಿ ಖಾತೆಗಳಿಂದ ಯಾರೊಬ್ಬರು ಮೋಸ ಹೋಗದಂತೆ ತಂಡವು ಮನವಿ ಮಾಡಿದೆ.
ಡಿಜಿಟಲ್ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾರದ್ದೆ ಹೆಸರಿನಲ್ಲದರೂ ಖಾತೆಯನ್ನು ರಚಿಸುವುದು ತುಂಬಾ ಸುಲಭ. ಜಾಹ್ನವಿ ಕಪೂರ್ ಈ ಹಿಂದೆ ಟ್ವಿಟ್ಟರ್ ಎಂದು ಕರೆಯಲಾಗುತ್ತಿದ್ದ ಎಕ್ಸ್ನಲ್ಲಿ ಯಾವುದೇ ಅಧಿಕೃತ ಖಾತೆಯನ್ನು ಹೊಂದಿಲ್ಲ. ದಯವಿಟ್ಟು ಈ ನಕಲಿ ಖಾತೆಗಳಿಂದ ಒದಗಿಸಲಾದ ಯಾವುದೇ ಮಾಹಿತಿಯನ್ನು ನಂಬಬೇಡಿ ಎಂದು ತಂಡವು ಸ್ಪಷ್ಟಿಕರಣ ನೀಡಿದೆ.
ಅಲ್ಲದೆ ನಟಿ ಜಾನ್ವಿ ಕಪೂರ್ ತಮ್ಮ ವೈಯಕ್ತಿಕ ಅಥವಾ ವೃತ್ತಿ ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಇನ್ಸ್ಟಾಗ್ರಾಮ್ ಖಾತೆಯನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)