ಮುಂಬೈ: ಧಡಕ್ ಸಿನಿಮಾದ ಮೂಲಕ ತಮ್ಮ ನಟನಾ ವೃತ್ತಿಯನ್ನುಆರಂಭಿಸಿದ ನಟಿ ಜಾನ್ವಿ ಕಪೂರ್ ಬಾಲಿವುಡ್ ಜತೆಗೆ ಸದ್ಯ ದಕ್ಷಿಣ ಸಿನಿಮಾರಂಗದಲ್ಲೂ ಸಾಕಷ್ಟು ಬಿಜಿಯಾಗಿದ್ದಾರೆ ಎಂಬುದು ಗೊತ್ತೆ ಇದೆ. ಸಿನಿಮಾ ಬಗ್ಗೆ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿಯೂ ಆಗಾಗ್ಗೆ ಅವರ ಸುದ್ದಿಗಳು ಹರಿದಾಡುತ್ತಿರುತ್ತವೆ.
ಚಿತ್ರರಂಗದಲ್ಲಿ ಆರು ವರ್ಷಗಳನ್ನು ಪೂರೈಸಿದ ವಿಚಾರವಾಗಿ ನಟಿ ಜಾಹ್ನವಿಯನ್ನು ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಜಾನ್ವಿ , ನನಗೆ ಗೊತ್ತಿಲ್ಲ ಎಂದು ನಗುತ್ತಾ ಅದನ್ನು ಅವರು (ಪ್ರೇಕ್ಷಕರು) ಹೇಳಬೇಕು. ಆದರೆ ನಾನು ನನ್ನ ಬಗ್ಗೆ ಕುಳಿತು ಹೇಗೆ ಹೇಳಲಿ. ನಾನು ತುಂಬಾ ಆತ್ಮವಿಶ್ವಾಸ ಹೊಂದಿದ್ದೇನೆ. ಉತ್ತಮವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಭಾವಿಸುತ್ತೇನೆ. ಅದನ್ನು ನಾನು ಹೇಳಲಾರೆ ಎಂದು ಹೇಳಿದರು. ಮಾತನ್ನು ಮುಂದುವರಿಸಿ ಸಾಮಾಜಿಕ ಜಾಲತಾಣದಲ್ಲಿ ಜನರು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದಾರೆ ಎಂದು ಹೇಳಿದ ನಟಿ ತಮಾಷೆಯಾಗಿ ಅದನ್ನು ಹೇಳಲು ನಾನು ಅವರಿಗೆ ಪಾವತಿಸುತ್ತಿದ್ದೇನೆ (ಪೈಸೆ ಖಿಲ್ವಾ ಕೆ ಬುಲಾ ರಹೀ ಹೂಂ) ಎಂದು ಹೇಳಿದರು.
ಬಳಿಕ ಸಾಮಾಜಿಕ ಜಾಲತಾಣದಲ್ಲಿ ಯಾರಾದರೂ ನನ್ನನ್ನು ಶ್ಲಾಘಿಸುವುದನ್ನು ನೋಡಿದಾಗ, ಅವರು ಇದು ನನ್ನ ಪಿಆರ್ ಆಗಿರಬೇಕು ಎಂದು ಹೇಳುತ್ತಲೇ ಇರುತ್ತಾರೆ. ಆದರೆ ನಾನು ಅವರಿಗೆ ಇಲ್ಲ ಎಂದು ಹೇಳುತ್ತೇನೆ. ಜನರಿಂದ ಪ್ರಶಂಸೆ ಪಡೆಯುವಷ್ಟು ಬಜೆಟ್ ನನ್ನ ಬಳಿ ಇಲ್ಲ ಎಂದು ಹೇಳಿದರು.
ಜಾನ್ವಿ ತಮ್ಮ ಮುಂಬರುವ ಸಿನಿಮಾ ಉಲ್ಜ್ ಪ್ರಚಾರದಲ್ಲಿದ್ದಾರೆ. ಈ ಸಿನಿಮಾ 2024 ಆಗಸ್ಟ್ 2ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅದಷ್ಟೆ ಅಲ್ಲದೆ ಜೂ. ಎನ್ಟಿಆರ್ ಅವರಿಗೆ ನಾಯಕಿಯಾಗಿ ನಟಿಸಿರುವ ದೇವರ ಕೂಡ ಸೆಪ್ಟೆಂಬರ್ನಲ್ಲಿ ತೆರೆಕಾಣಲಿದೆ. (ಏಜೆನ್ಸೀಸ್)