ಫಾರಿನ್ ಟ್ರಿಪ್​ನಲ್ಲಿ ಅಲ್ಲು ಅರ್ಜುನ್​ ಫ್ಯಾಮಿಲಿ; ಫೋಟೋ ನೋಡಿ ಸಮಂತಾ ಹೇಳಿದ್ದೇನು ಗೊತ್ತಾ?

Untitled-design-85
Published on

ಹೈದರಾಬಾದ್​​: ಟಾಲಿವುಡ್​ನ ಸ್ಟೈಲಿಶ್​​ ಸ್ಟಾರ್​​ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸೀಕ್ವೆಲ್ ಪುಷ್ಪ 2 ಸಿನಿಮಾದ ಬಿಡುಗಡೆಯ ದಿನಾಂಕವನ್ನು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರದ ಶೂಟಿಂಗ್​ನಿಂದ ಸಮಯಮಾಡಿಕೊಂಡು ಮುದ್ದಾದ ಕುಟುಂಬದೊಂದಿಗೆ ಅಲ್ಲು ಅರ್ಜುನ್​​​ ಯುರೋಪ್​ ಪ್ರವಾಸದಲ್ಲಿದ್ದಾರೆ.

ಅಲ್ಲು ಅರ್ಜುನ್​ ಮತ್ತು ಸ್ನೇಹಾರೆಡ್ಡಿ, ಈ ಕ್ಯೂಟ್​​ ಕಪಲ್​ಗೆ ಅಲ್ಲು ಅಯಾನ್​ ಮತ್ತು ಅಲ್ಲು ಅರ್ಹ ಎಂಬ ಇಬ್ಬರು ಮುದ್ದಾದ ಮಕ್ಕಳಿರುವುದು ಗೊತ್ತೆ ಇದೆ. ಅಲ್ಲು ಅರ್ಜುನ್​​​ ಪತ್ನಿ ಸ್ನೇಹಾ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿತ್ತಾರೆ. ಕುಟುಂಬದ ಫೋಟೋಗಳು ಹಾಗೂ ವೀಡಿಯೊಗಳನ್ನು ಆಗಾಗ್ಗೆ ಪೋಸ್ಟ್​ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಕುಟುಂಬದೊಂದಿಗೆ ಯುರೋಪ್​​ನ ನಾರ್ವೆಯಲ್ಲಿ ಸಮಯಕಳೆಯುತ್ತಿರುವ ಫೋಟೋಗಳನ್ನು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪೋಸ್ಟ್​​ ಮಾಡಿರುವ ಫೋಟೋವೊಂದರಲ್ಲಿ ಸ್ನೇಹ ಅಲ್ಲು ಅರ್ಜುನ್​ ಅವರನ್ನು ಅಪ್ಪಿಕೊಂಡು ಸೆಲ್ಫಿ ತೆಗೆದುಕೊಂಡಿದ್ದಾರೆ. ಆ ಫೋಟೋದಲ್ಲಿ ಅಲ್ಲು ಅರ್ಹ ಕೂಡ ಕಾಣುತ್ತಿದ್ದಾರೆ. ಕಾಮ್ ಟು ಮೈ ಚೋಸ್ ಎಂಬ ಶಿರ್ಷಿಕೆ ಜತೆಗೆ ಪೋಸ್ಟ್​ ಮಾಡಿರುವ ಈ ಫೋಟೋ ಸದ್ಯ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ.

ಈ ಫೋಟೋಗೆ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದು, ಸೋ ಕ್ಯೂಟ್​​ ಅರ್ಹಾ ಎಂದ ಒಬ್ಬರು ಕಾಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು ಸೂಪರ್ ಜೋಡಿ ಎಂದು ದಂಪತಿಯನ್ನು ಹೊಗಳಿದ್ದಾರೆ. ಅಭಿಮಾನಿಗಳು ಅಷ್ಟೆ ಅಲ್ಲ ನಟಿಯರಾದ ಸಮಂತಾ ಮತ್ತು ರಾಕುಲ್​ ಪ್ರೀತ್​ಸಿಂಗ್​ ಕೂಡ್​​ ಲವ್​ ಸಿಂಬಲ್​ ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net