ನ್ಯೂಸ್

ಆಲಿಯಾ ಬದಲು ಜಾಹ್ನವಿ?; ‘ದುಲ್ಹನಿಯಾ’ ಚಿತ್ರಕ್ಕೆ ನಾಯಕಿ ಬಗ್ಗೆ ಕರಣ್ ಮಾತು

ಕರಣ್ ಜೋಹರ್ ನಿರ್ಮಾಣದ ವರುಣ್ ಧವನ್, ಆಲಿಯಾ ಭಟ್ ಜೋಡಿಯ ‘ಹಮ್ಟಿ ಶರ್ಮಾ ಕಿ ದುಲ್ಹನಿಯಾ’ ಹಾಗೂ ‘ಬದ್ರಿನಾಥ್ ಕಿ ದುಲ್ಹನಿಯಾ’ ಯಶಸ್ಸಿನ ಬಳಿಕ ಹೊಸ ಚಿತ್ರದ ನಿರ್ಮಾಣದತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. ಹೌದು, ಇದೇ ಸರಣಿಯ ಮೂರನೇ ಸಿನಿಮಾ ‘ದುಲ್ಹನಿಯಾ 3’ ಚಿತ್ರದ ಸಿದ್ಧತೆಯಲ್ಲಿದ್ದು, ಶಶಾಂಕ್ ಖೈತಾನ್ ನಿರ್ದೇಶನ ಮಾಡಲಿದ್ದಾರೆ.

ಆದರೆ, ಹಿಂದಿನ ಎರಡು ಸಿನಿಮಾಗಳಲ್ಲಿ ನಾಯಕಿಯಾಗಿದ್ದ ಆಲಿಯಾ ಭಟ್ ಈ ಚಿತ್ರಕ್ಕೂ ನಾಯಕಿಯಾಗಿ ಮುಂದುವರಿಯುವುದು ಅನುಮಾನ ಎಂಬ ಸುದ್ದಿ ಸದ್ಯ ಬಾಲಿವುಡ್ ಅಂಗಳದಲ್ಲಿ ಹರಿದಾಉತ್ತಿದೆ. ಆಲಿಯಾ ಬದಲಾಗಿ ‘ಬವಾಲ್’ ಚಿತ್ರದಲ್ಲಿ ವರುಣ್‌ಗೆ ಜೋಡಿಯಾಗಿದ್ದ ಜಾಹ್ನವಿ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಮೌನ ಮುರಿದಿರುವ ಕರಣ್, ‘ಪ್ರತಿದಿನ ‘ದುಲ್ಹನಿಯಾ’ ಚಿತ್ರದ ನಾಯಕಿ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ಆದರೆ, ಅಧಿಕೃತವಾಗಿ ಚಿತ್ರತಂಡ ೋಷಣೆ ಮಾಡುವವರೆಗೆ ದಯವಿಟ್ಟು ಯಾರೂ ಊಹಿಸಬೇಡಿ’ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ವರುಣ್, ಅಟ್ಲಿ ನಿರ್ದೇಶನದ ‘ಥೆರಿ’ ಚಿತ್ರದ ಹಿಂದಿ ರಿಮೇಕ್‌ನಲ್ಲಿ ಬಿಜಿಯಿದ್ದು, ಅದಾದ ಬಳಿಕ ‘ದುಲ್ಹನಿಯಾ’ ಶೂಟಿಂಗ್ ಶುರುವಾಗಲಿದೆಯಂತೆ. ಜತೆಗೆ ಆಲಿಯಾ ‘ಜಿಗರಾ’ ಚಿತ್ರದಲ್ಲಿ ಹಾಗೂ ಜಾಹ್ನವಿ ಕಪೂರ್ ‘ದೇವರ’, ‘ಉಲಜ್’ ಸಿನಿಮಾಗಳಲ್ಲಿ ಬಿಜಿಯಿದ್ದಾರೆ. -ಏಜೆನ್ಸೀಸ್