ನ್ಯೂಸ್

VIDEO| ಬಿಗ್​​ಬಾಸ್​ ಮನೆಯಲ್ಲೇ ಲಿಪ್​ಲಾಕ್​​; ಒಬ್ಬರನೊಬ್ಬರು ತಬ್ಬಿಕೊಂಡು ಕ್ಯಾಮೆರಾ ಮುಂದೆ ಮೈ ಮರೆತ ಸ್ಪರ್ಧಿಗಳು!

ಮುಂಬೈ: ಹಿಂದಿ ಬಿಗ್​ಬಾಸ್​ ಕಾರ್ಯಕ್ರಮ ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತದೆ. ಈಗ ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿರುವ ಬಿಗ್​ಬಾಸ್​​​ನ ಒಂದು ಸೀನ್​​ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಚೀಮಾರಿ ಹಾಕುತ್ತಿದ್ದಾರೆ.

ಹಿಂದಿಯ ಬಿಗ್ ಬಾಸ್ OTT 2 ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿರುವುದು ಗೊತ್ತೇ ಇದೆ. ಈ ಶೋನಲ್ಲಿ ಬಿಗ್ ಬಾಸ್ ಟಾಸ್ಕ್ ಕೊಟ್ಟಾಗ, ಇಬ್ಬರು ಸ್ಪರ್ಧಿಗಳು 30 ಸೆಕೆಂಡ್ ಲಿಪ್ಲಾಕ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಆಕಾಂಕ್ಷಾ ಪುರಿ ಹಾಗೂ ಜೈದ್ ಹದಿದ್ ಹಾಟ್ ಫ್ರೆಂಚ್ ಕಿಸ್ ನೀಡಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾರೆ. ಬಿಗ್ ಬಾಸ್ ಟಾಸ್ಕ್ ಅಂಗವಾಗಿ 'ಡೇರ್ ಗೇಮ್' ಎಂಬ ಸ್ಪರ್ಧೆಯನ್ನು ಆಯೋಜಿಸಿದ್ದರು. ಆ ಟಾಸ್ಕ್ ನಲ್ಲಿ 30 ಸೆಕೆಂಡ್ ಕಿಸ್ ಮಾಡಬೇಕು. ಮೊದಲು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯಾರು ಧೈರ್ಯ ಮಾಡಲಿಲ್ಲ. ಹೀಗಿರುವಾಗಲೇ ಸ್ಪರ್ಧಿ ಅವಿನಾಶ್ ಸಚ್​​ದೇವ್ ಅವರು ‘ಜದ್​​ಗೆ ಆಕಾಂಕ್ಷಾ ಕಿಸ್ ಮಾಡಬೇಕು’ ಎಂದು ಸವಾಲು ಹಾಕಿದರು. ಈ ಬೆನ್ನಲ್ಲೇ ಇಬ್ಬರೂ ಲಿಪ್ ಲಾಕ್ ಮಾಡಿಕೊಂಡಿದ್ದಾರೆ.

ಇದೀಗ ಈ ವಿಡಿಯೋ ಬಗ್ಗೆ ಕೆಲ ನೆಟಿಜನ್‌ಗಳು ಕಿಡಿಕಾರಿದ್ದಾರೆ. ಇಂತಹ ಟಾಸ್ಕ್​​​ಗಳನ್ನು ನೀಡುತ್ತಿದ್ದಾರೆ ಎಂದು ಶೋ ಮ್ಯಾನೇಜ್ ಮೆಂಟ್ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಕಾಂಕ್ಷಾ ಹಾಗೂ ಜದ್ ಮಧ್ಯೆ ಏನೋ ನಡೆಯುತ್ತಿದೆ. ಇದು ಅಭಿಮಾನಿಗಳಿಗೂ ಸ್ಪಷ್ಟವಾಗಿದೆ. ಇದು ಪ್ಯಾಮಿಲಿ ಶೋ ನಾ? ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ.

ನಂತರ ಹದಿದ್ ಮತ್ತು ಆಕಾಂಕ್ಷಾ ಮುಂದೆ ಬಂದು 30 ಸೆಕೆಂಡುಗಳ ಕಾಲ ಲಿಪ್ಲಾಕ್ ಮಾಡಿದ್ದಾರೆ. ಈ ವೇಳೆ ಪೂಜಾ ಭಟ್ ಮಾತ್ರ ಇರಿಸುಮುರುಸುಗೊಂಡರು. ನಿಲ್ಲಿಸಿ ನಿಲ್ಲಿಸಿ ಎಂದು ಕೂಗಿದರು. ಉಳಿದವರೆಲ್ಲರೂ ಇದನ್ನು ಎಂಜಾಯ್ ಮಾಡುತ್ತಿದ್ದರು. ಈ ವಿಡಿಯೋ ವೈರಲ್​​ ಆಗಿದೆ.