ನ್ಯೂಸ್

ಸ್ಯಾಂಡ್‌ವಿಚ್ ಕಟ್ ಮಾಡಿದ್ದಕ್ಕೂ 182 ರೂ. ಚಾರ್ಜ್‌ ಮಾಡಿದ ರೆಸ್ಟೊರೆಂಟ್‌

ಇಟಲಿ: ಹೋಟೆಲ್​​ಗೆಹೋಗಿ ಊಟ ಆರ್ಡರ್ ಮಾಡಿದರೆ ಊಟಕ್ಕೆ ಮಾತ್ರ ಬಿಲ್ ಕಟ್ಟುತ್ತಾರೆ. ಆದರೆ ತರಕಾರಿ ಕತ್ತರಿಸಿದ್ದಕ್ಕೆ..ಹೆಚ್ಚುವರಿ ಪ್ಲೇಟ್ ಕೊಟ್ಟದ್ದಕ್ಕೂ ಬಿಲ್ ಮಾಡ್ತಾರಾ..? ಅಂದರೆ ವಿಚಿತ್ರವಾದ ರೆಸ್ಟೋರೆಂಟ್ ಇದೆ.

ಇಟಲಿಯ ಲೇಕ್ ಕೊಮೊ ಬಳಿಯ ಜನಪ್ರಿಯ ಹಾಲಿಡೇ ತಾಣವಾದ ಗೆರಾ ಲಾರಿಯೊದಲ್ಲಿನ ಬಾರ್ ಪೇಸ್‌ನಲ್ಲಿ ಟೋಸ್ಟೆಡ್‌ ಸ್ಯಾಂಡ್‌ವಿಚ್‌ ಅನ್ನು ಅರ್ಧ ಕಟ್‌ ಮಾಡಿ ಕೊಡಿ ಎಂದಿದ್ದಕ್ಕೆ ಎಕ್ಸ್ಟ್ರಾ ಚಾರ್ಜ್‌ ಮಾಡಿದ್ದಾರೆ. ಆಹಾರ ಸೇವಿಸಿದ ಬಳಿಕ ಬಿಲ್‌ ನೋಡಿ ಆಶ್ಚರ್ಯಚಕಿತನಾಗಿದ್ದಾನೆ. ಏಕೆಂದರೆ, ಸ್ಯಾಂಡ್‌ವಿಚ್‌ ಅನ್ನು ಅರ್ಧಕ್ಕೆ ಕತ್ತರಿಸಿದ್ದಕ್ಕೆ ನಾವು ದುಡ್ಡು ಕೊಡಬೇಕೇ ಎಂದು ಆತ ಪ್ರಶ್ನೆ ಮಾಡಿದ್ದಾನೆ. ಅಷ್ಟಕ್ಕೂ, ಈ ಕೆಫೆ ಸ್ಯಾಂಡ್‌ವಿಚ್‌ ಅನ್ನು ಕಟ್‌ ಮಾಡಿದ್ದಕ್ಕೆ ಅವು ವಿಧಿಸಿದ ಶುಲ್ಕ ಎಷ್ಟು ಗೊತ್ತಾ 2 ಯೂರೋ ಅಂದರೆ ಅಂದಾಜು 182 ರೂ. ಶುಲ್ಕ ವಿಧಿಸಲಾಗಿದೆ.

ಇದರಿಂದ ಆಘಾತಕ್ಕೊಳಗಾದ ಕಾಶ್ಮಾರ್ ರೆಸ್ಟೋರೆಂಟ್ ಮಾಲೀಕ ಕ್ರಿಸ್ಟಿನಾ ಬೈಚಿ ಅವರನ್ನು ಪ್ರಶ್ನಿಸಿದ್ದಾರೆ. ಈ ಆರೋಪವನ್ನು ಕೆಫೆಯ ಮಾಲೀಕ ಕ್ರಿಸ್ಟಿನಾ ಬಿಯಾಚಿ ಅವರು ಸಮರ್ಥಿಸಿಕೊಂಡಿದ್ದು, ಹೆಚ್ಚುವರಿ ಮನವಿಗೆ ಹೆಚ್ಚು ವೆಚ್ಚ ಉಂಟಾಗುತ್ತದೆ ಎಂದು ವಿವರಿಸಿದ್ದಾರೆ. ಒಂದರ ಬದಲಿಗೆ ಎರಡು ಪ್ಲೇಟ್‌ಗಳನ್ನು ಬಳಸುವುದು ಮತ್ತು ಅವುಗಳನ್ನು ತೊಳೆಯಲು ಸಮಯ ಮತ್ತು ಶ್ರಮವು ಶುಲ್ಕವನ್ನು ಸಮರ್ಥಿಸುತ್ತದೆ ಎಂದೂ ಕ್ರಿಸ್ಟಿನಾ ಬಿಯಾಚಿ ಹೇಳಿದ್ದಾರೆ.

ಈ ಹಿನ್ನೆಲೆ ಆ ಕೆಫೆ ಮೇಲೆ ಬೇಸತ್ತ ಗ್ರಾಹಕ ಕೇವಲ 1 ಸ್ಟಾರ್‌ ರೇಟಿಂಗ್ ನೀಡಿದ್ದಾನೆ.