Isro| ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಬಾಹ್ಯಾಕಾಶ ಡಾಕಿಂಗ್ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದೀಗ ಎರಡನೇ ಬಾರಿಗೆ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈ ಮೂಲಕ ಇಸ್ರೋ ಹೊಸ ದಾಖಲೆ ನಿರ್ಮಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜೀತೇಂದ್ರ ಸಿಂಗ್ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಉಪಗ್ರಹಗಳ ಎರಡನೇ ಡಾಕಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಈ ವಿಚಾರವನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಸ್ಪೇಡೆಕ್ಸ್ ಮಿಷನ್‌ನ ಪಿಎಸ್‌ಎಲ್‌ವಿಸಿ 60 ನ್ನು 2024 ರ ಡಿಸಂಬರ್ 30 ರಂದು ಯಶಸ್ವಿಯಾಗಿ ಉಡಾವಣೆ ಮಾಡಿದ್ದೆವು. ಅದಾದ ಬಳಿಕ ಉಪಗ್ರಹಗಳನ್ನು ಮೊದಲ ಬಾರಿಗೆ 2025 ರ ಜನವರಿ 16 ರ ಬೆಳಿಗ್ಗೆ 6.20 ಕ್ಕೆ ಯಶಸ್ವಿಯಾಗಿ ಡಾಕ್ ಮಾಡಲಾಗಿತ್ತು. ಮಾರ್ಚ್ 13 ರ ಬೆಳಿಗ್ಗೆ 9.20 ಕ್ಕೆ ಯಶಸ್ವಿಯಾಗಿ ಅನ್‌ಡಾಕ್ ಮಾಡಲಾಯಿತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರೆಯೋಗಗಳನ್ನು ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಳದಿ ಹಲ್ಲುಗಳಿಂದ ಬಳಲುತ್ತಿದ್ದೀರಾ; ನಿಮ್ಮ ಹಲ್ಲುಗಳು ವಜ್ರದಂತೆ ಹೊಳೆಯಲು ಈ ಮನೆ ಮದ್ದನ್ನು ಟ್ರೈ ಮಾಡಿ| Basil
(ಏಜೆನ್ಸೀಸ್)
ಅಮೆರಿಕ, ರಷ್ಯಾ, ಚೀನಾ ಬಳಿಕ ಬಾಹ್ಯಾಕಾಶ ಡಾಕಿಂಗ್ ಪ್ರಯೋಗವನ್ನು ಸಾಧಿಸಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೆಗ್ಗಳಿಕೆಗೆ ಪಾತ್ರವಾಗಿದೆ. ಭವಿಷ್ಯತ್ತಿನ ಹಲವು ಕಾರ್ಯಾಚರಣೆಗೆ ಸ್ಪೇಡೆಕ್ಸ್ ಯೋಜನೆ ನೆರವಾಗಲಿದೆ. ಅಂತರಿಕ್ಷ ನಿಲ್ದಾಣ ಮತ್ತು ಚಂದ್ರನ ಮೇಲೆ ಗಗನಯಾತ್ರಿಯನ್ನು ಇಳಿಸುವುದು ಮೊದಲಾದ ಕಾರ್ಯಾಚರಣೆಗೆ ಸಹಾಯಕವಾಗಲಿದೆ.