ನ್ಯೂಸ್

ಇಸ್ರೇಲ್​ನಲ್ಲಿ ಕಾಲ್ತುಳಿತಕ್ಕೆ 28 ಮಂದಿ ದುರಂತ ಸಾವು: 50ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರ

ಟೆಲ್ ಅವಿವ್: ಉತ್ತರ ಇಸ್ರೆಲ್​ನಲ್ಲಿ ಗುರುವಾರ ನಡೆದ ಸಾಮೂಹಿಕ ಸಭೆಯ ವೇಳೆ ಸಂಭವಿಸಿದ ಕಾಲ್ತುಳಿತದಿಂದಾಗಿ ಸುಮಾರು 28 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಲ್ಯಾಗ್​ ಬಿ ಓಮರ್​ ಆಚರಿಸಲು ಇಸ್ರೇಲ್​ನ ಮೌಂಟ್​ ಮೆರೂನ್​ನಲ್ಲಿ ಸಾಮೂಹಿಕ ಸಭೆಯನ್ನು ಆಯೋಜಿಸಲಾಗಿತ್ತು. ಇಸ್ರೇಲ್​ನ ಝಕಾ (ZAKA) ಸ್ವಯಂ ಸೇವಾ ಸಂಸ್ಥೆ ಕಾಲ್ತುಳಿತದ ಬಗ್ಗೆ ಮಾಹಿತಿ ನೀಡಿದ್ದು, 28 ಮಂದಿ ಸಾವಿಗೀಡಾಗಿದ್ದಾರೆಂದು ತಿಳಿಸಿದೆ.

ಗಂಭೀರವಾಗಿ ಗಾಯಗೊಂಡಿರುವ 50ಕ್ಕೂ ಹೆಚ್ಚು ಮಂದಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅದರಲ್ಲಿ ಸುಮಾರು 20 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಡಾ. ಮೆಗೆನ್​ ಡೇವಿಡ್​ ಆ್ಯಡಮ್​ ಹೇಳಿದ್ದಾರೆ.

ಗಾಯಗೊಂಡವರನ್ನು ನಹಾರಿಯಾದಲ್ಲಿರುವ ಗಾಲಿಲೀ ಮೆಡಿಕಲ್​ ಸೆಂಟರ್​ ಮತ್ತು ಸಫೆಸ್​ನಲ್ಲಿರುವ ಝೀವ್​ ಆಸ್ಪತ್ರೆಗೆ ಸ್ಥಳಾಂತರಿಸಲು 6 ಹೆಲಿಕಾಪ್ಟರ್​ ಮತ್ತು ಡಜನ್​ಗಟ್ಟಲೆ ಆಂಬ್ಯುಲೆನ್ಸ್​ಗಳು ಕಾರ್ಯನಿರ್ವಹಿಸಿದವು ಎಂದು ಸ್ವಯಂ ಸೇವಾ ಸಂಸ್ಥೆ ಮಾಹಿತಿ ನೀಡಿದೆ.

ಆದರೆ, ಕಾಲ್ತುಳಿತಕ್ಕೆ ಕಾರಣ ಏನೆಂಬುದು ಈವರೆಗೂ ತಿಳಿದುಬಂದಿಲ್ಲ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)