ನ್ಯೂಸ್

ಯೆಮೆನ್ ಹೊಡೈದಾ ಬಂದರಿನ ಮೇಲೆ ದಾಳಿ ಮಾಡುತ್ತೇವೆ, ಹೌತಿ ಉಗ್ರರ ಸರ್ವನಾಶ ಖಚಿತ ಎಂದ ಇಸ್ರೇಲ್​| Israel

Israel: ಯೆಮನ್‌ನ ಹೊಡೈದಾ ಬಂದರಿಗೆ ಸ್ಥಳಾಂತರ ಆದೇಶ ಹೊರಡಿಸಿದ್ದು, ಮುಂಬರುವ ಗಂಟೆಗಳಲ್ಲಿ ಆ ಪ್ರದೇಶದ ಮೇಲೆ ದಾಳಿ ಮಾಡುವುದಾಗಿ ಇಸ್ರೇಲ್ ಸೇನೆ ಮಂಗಳವಾರ (ಸೆಪ್ಟೆಂಬರ್​,16) ಎಚ್ಚರಿಕೆ ನೀಡಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ IDF ವಕ್ತಾರ ಕರ್ನಲ್ ಅವಿಚಾಯ್ ಅಡ್ರೇಯಿ, ದಾಳಿಗೆ ಮುಂಚಿತವಾಗಿ ಬಂದರು ನಗರದ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಒತ್ತಾಯಿಸಿದ್ದಾರೆ. ಯೆಮನ್‌ನ ಹೊಡೈದಾ ಬಂದರಿನಲ್ಲಿ ಹಾಜರಿರುವ ಎಲ್ಲರಿಗೂ ತುರ್ತು ಎಚ್ಚರಿಕೆ. ಹೌತಿ ಭಯೋತ್ಪಾದಕ ಆಡಳಿತ ನಡೆಸುತ್ತಿರುವ ಮಿಲಿಟರಿ ಚಟುವಟಿಕೆಗಳ ಹಿನ್ನೆಲೆಯಲ್ಲಿ, ನಕ್ಷೆಯಲ್ಲಿ ನಿರ್ದಿಷ್ಟಪಡಿಸಿದ ಪ್ರದೇಶದಲ್ಲಿ ಇಸ್ರೇಲ್​ ಸೇನೆಯು ದಾಳಿ ಮಾಡುತ್ತದೆ ಎಂದು ಅಡ್ರೇಯಿ ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿರುವ ಅಡ್ರೇಯಿ, ನಿಮ್ಮ ಸುರಕ್ಷತೆಗಾಗಿ ಹೊಡೈದಾ ಬಂದರಿನಲ್ಲಿ ಇರುವ ಎಲ್ಲರೂ ಮತ್ತು ಅಲ್ಲಿ ಲಂಗರು ಹಾಕಿರುವ ಹಡಗುಗಳು ತಕ್ಷಣವೇ ಪ್ರದೇಶವನ್ನು ತೆರವುಗೊಳಿಸುವಂತೆ ನಾವು ಒತ್ತಾಯಿಸುತ್ತೇವೆ ಎಂದು ಐಡಿಎಫ್ ವಕ್ತಾರರು ಹೇಳಿದ್ದಾರೆ.ಅಲ್ಲದೆ, ಈ ಪ್ರದೇಶದಲ್ಲಿ ಮತ್ತೆ ಉಳಿಯಲು ಆಯ್ಕೆ ಮಾಡಿದ ಯಾರಾದರೂ ತಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

ಇಸ್ರೇಲ್ ವಿಮಾನ ನಿಲ್ದಾಣದ ಮೇಲೆ ಹೌತಿ ಬಂಡುಕೋರರು ನಡೆಸಿದ ಡ್ರೋನ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ಯೆಮನ್‌ನಲ್ಲಿ ಭಾರೀ ವೈಮಾನಿಕ ದಾಳಿ ನಡೆಸಿದ ಕಹಲವು ದಿನಗಳ ನಂತರ ಈ ಆದೇಶ ಬಂದಿದೆ.

ಸೆಪ್ಟೆಂಬರ್ 10 ರಂದು ಯೆಮನ್‌ನಲ್ಲಿ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 35 ಜನರು ಸಾವನ್ನಪ್ಪಿದರು, 130 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ದೇಶದ ರಾಜಧಾನಿ ಸನಾದಲ್ಲಿ ಸಂಭವಿಸಿವೆ ಎಂದು ಹೌತಿ ಅಡಳಿತ ತಿಳಿಸಿದೆ.

ಇಸ್ರೇಲ್​ ದಾಳಿಯ ಪರಿಣಾಮವಾಗಿ ಸನಾದಲ್ಲಿ, ಮಿಲಿಟರಿ ಪ್ರಧಾನ ಕಚೇರಿ ಮತ್ತು ಇಂಧನ ಕೇಂದ್ರವು ದಾಳಿಗೊಳಗಾದ ಸ್ಥಳಗಳಲ್ಲಿ ಸೇರಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತ್ತು. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗಳಲ್ಲಿ ಇತ್ತೀಚಿನದಾಗಿದ್ದು, ಇದು ಹೌತಿ ಪ್ರಧಾನಿ ಮತ್ತು ಇತರ ಉನ್ನತ ಅಧಿಕಾರಿಗಳ ಸಾವಿಗೆ ಕಾರಣವಾಯಿತು. (ಏಜೆನ್ಸೀಸ್)