ನ್ಯೂಸ್

ಭಾರತದ ಒಳಿತಿಗಾಗಿ 'ನಮಃ ಶಿವಾಯ' ಜಪಿಸಿದ ಇಸ್ರೇಲ್​ ಜನರು; ವಿಡಿಯೋ ವೈರಲ್​

ಟೆಲ್ ಅವೀವ್: ಕರೊನಾ ಅಬ್ಬರಕ್ಕೆ ಭಾರತ ಅಕ್ಷರಶಃ ದಂಗಾಗಿದೆ. ಸಂಕಷ್ಟದಲ್ಲಿರುವ ಭಾರತದ ನೆರವಿಗೆ ಅನೇಕ ರಾಷ್ಟ್ರಗಳು ಮುಂದಾಗಿವೆ. ಹಲವಾರು ದೇಶಗಳಿಂದ ಆಕ್ಸಿಜನ್​ ಭಾರತಕ್ಕೆ ಬಂದಿಳಿಯುತ್ತಿದೆ. ಇದೀಗ ಈ ಒಂದು ದೇಶದಲ್ಲಿ ಭಾರತಕ್ಕಾಗಿ ವಿಶೇಷ ರೀತಿಯ ನೆರವು ನೀಡಲಾಗುತ್ತಿದೆ.

ಇಸ್ರೇಲ್​ ದೇಶವು ಇತ್ತೀಚೆಗೆ ಎರಡು ಹಡಗುಗಳಲ್ಲಿ ಆಕ್ಸಿಜನ್​ ಅನ್ನು ಭಾರತಕ್ಕೆ ಕಳುಹಿಸಿಕೊಟ್ಟಿತ್ತು. ಇದೀದ ಅಲ್ಲಿನ ಜನರ ಮತ್ತೊಂದು ರೀತಿಯಲ್ಲಿ ಭಾರತಕ್ಕೆ ಬಲ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ನೂರಾರು ಜನರು ಸೇರಿ, ಓಂ ನಮಃ ಶಿವಾಯ ಜಪಿಸಿದ್ದಾರೆ. ಭಾರತ ಆದಷ್ಟು ಬೇಗ ಈ ನೋವಿನಿಂದ ಎದ್ದು ಗಟ್ಟಿಯಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಇಸ್ರೇಲ್​ ಜನರ ಈ ಪ್ರಾರ್ಥನೆಯ ವಿಡಿಯೋವನ್ನು ಇಸ್ರೇಲ್​ನ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಪವನ್​ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ಭಾರೀ ವೈರಲ್​ ಆಗಿದೆ.

ಕರೊನಾವನ್ನು ಗೆದ್ದಿರುವ ಇಸ್ರೇಲ್​ನಲ್ಲಿ ಕಳೆದ ತಿಂಗಳು ಮಾಸ್ಕ್​ ಕಡ್ಡಾಯ ನಿಯಮವನ್ನು ತೆಗೆದುಹಾಕಲಾಗಿದೆ. ಶೈಕ್ಷಣಿಕ ಸಂಸ್ಥೆಗಳನ್ನೂ ತೆರೆದು, ಇಸ್ರೇಲ್​ನನ್ನು ಕರೊನಾದಿಂದ ಮುಕ್ತಗೊಳಿಸಲಾಗಿದೆ. (ಏಜೆನ್ಸೀಸ್)