Israel-Palestine Conflict: ಪ್ಯಾಲೆಸ್ತೀನ್ ಮೇಲೆ ಸಮರ ಸಾರುತ್ತಿರುವ ಇಸ್ರೇಲಿ ಪಡೆ, ತನ್ನ ಭೀಕರ ದಾಳಿಯನ್ನು ಇಂದೂ ಸಹ ಮುಂದುವರೆಸಿದೆ.
ಇದನ್ನೂ ಓದಿ: ಸ್ನಾನ ಮಾಡುವಾಗ ಈ ತಪ್ಪನ್ನು ನೀವು ಮಾಡುತ್ತಿದ್ದೀರಾ; ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚು! | Health Tips
ಇತ್ತೀಚೆಗಷ್ಟೇ ಗಾಜಾ ಪಟ್ಟಿಯ ನುಸಿರಾತ್ ಪ್ರದೇಶದಲ್ಲಿ ನಿಲುಗಡೆಯಾಗಿದ್ದ ವಾಹನವನ್ನು ಟಾರ್ಗೆಟ್ ಮಾಡಿ ಹೊಡೆದುರುಳಿಸಿದ್ದ ಇಸ್ರೇಲ್ ಸೇನೆ, ಐವರು ಪತ್ರಕರ್ತರ ಜೀವವನ್ನು ಬಲಿ ಪಡೆಯಿತು. ಇಂದು ಗಾಜಾದಲ್ಲಿನ ಕಮಲ್ ಅಡ್ವಾನ್ ಆಸ್ಪತ್ರೆ ಮೇಲೆ ಏಕಾಏಕಿ ದಾಳಿ ನಡೆಸಿದ ಸೇನೆ, ಆಸ್ಪತ್ರೆಯ ನೂರಾರು ಸಿಬ್ಬಂದಿಗಳನ್ನು ಬಂಧಿಸಿ, ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸಿದೆ.
ನಿನ್ನೆ (ಡಿ.27) ಐವರು ಆಸ್ಪತ್ರೆಯ ಸಿಬ್ಬಂದಿಗಳ ಸಾವಿನ ನಂತರ ಇಸ್ರೇಲಿ ಮಿಲಿಟರಿಯು ಬೀಟ್ ಲಾಹಿಯಾದ ಕಮಲ್ ಅಡ್ವಾನ್ ಆಸ್ಪತ್ರೆಯ ಬಳಿ ಹಮಾಸ್ ಹೋರಾಟಗಾರರನ್ನು ಗುರಿಯಾಗಿಸಿ, ಆಸ್ಪತ್ರೆ ಮೇಲೆ ದಾಳಿ ನಡೆಸಿತು. ಭಯೋತ್ಪಾದಕರ ಅಡಗುತಾಣವಾಗಿ ಈ ಕಟ್ಟಡವನ್ನು ಬಳಸಿಕೊಳ್ಳಲಾಗಿದೆ ಎಂದು ಐಡಿಎಫ್ ತಿಳಿಸಿತು. ಇದರ ಬೆನ್ನಲ್ಲೇ ಆಸ್ಪತ್ರೆಯ ನಿರ್ದೇಶಕ ಹುಸ್ಸಾಮ್ ಅಬು ಸಫಿಯಾರನ್ನು ವಶಕ್ಕೆ ಪಡೆದಿರುವ ಇಸ್ರೇಲಿ ಪಡೆ, ಬಂಧಿಸಿದ್ದ ನೂರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಸದ್ಯ ಬಿಡುಗಡೆಗೊಳಿಸಿದೆ.
ನಮನ್ನು ಅಮಾನುಷವಾಗಿ ಥಳಿಸಲಾಯಿತು. ನಮ್ಮ ಮೇಲೆ ಉಗುಳಲಾಯಿತು ಹಾಗೂ ನಮ್ಮವರ ಬಟ್ಟೆಗಳನ್ನು ಹರಿದು ಹಾಕಿದರು. ವಿಚಾರಣೆಯ ಸಲುವಾಗಿ ತಣ್ಣನೆಯ ವಾತಾವರಣದಲ್ಲಿ ಗಂಟೆಗಟ್ಟಲೆ ಬಿಟ್ಟಿದ್ದರು. ಇವರ ವಿಚಾರಣೆ ಮುಗಿಯುವವರೆಗೂ ಬಂಧಿತರನ್ನು ಹಾಗೆಯೇ ಇರಿಸಿದ್ದರು ಎಂದು ಇಸ್ರೇಲಿ ಸೇನೆಯ ಚಿತ್ರಹಿಂಸೆಯಿಂದ ಹೊರಬಂದ ಸಿಬ್ಬಂದಿಗಳು ಗಾಜಾ ಆರೋಗ್ಯ ಸಂಸ್ಥೆ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಗಾಜಾ ಮೇಲಿನ ಇಸ್ರೇಲ್‌ನ ಯುದ್ಧವು ಅಕ್ಟೋಬರ್ 7, 2023ರಿಂದ ಇಲ್ಲಿಯವರೆಗೆ ಕನಿಷ್ಠ 45,484 ಪ್ಯಾಲೆಸ್ಟೀನಿಯರನ್ನು ಸಮಾಧಿ ಮಾಡಿದೆ ಮತ್ತು 1,08,090 ಮಂದಿಯನ್ನು ಗಂಭೀರವಾಗಿ ಗಾಯಗೊಳಿಸಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).