ನ್ಯೂಸ್

ಹಮಾಸ್ ಕಮಾಂಡರ್​ನನ್ನು ಕೊಂದ ಇಸ್ರೇಲ್​: ಗಾಜಾದಲ್ಲಿ 75 ಉಗ್ರ ನೆಲೆಗಳು ನಾಶ! Gaza

Gaza: ಇಸ್ರೇಲ್​ ರಕ್ಷಣಾ ಪಡೆಗಳು ನಡೆಸಿದ ದಾಳಿಯಲ್ಲಿ ಹಮಾಸ್(Hamas)​ ಅಭಿವೃದ್ದಿ ಮತ್ತು ಯೋಜನೆಗಳ ವಿಭಾಗಗಳ ಕಮಾಂಡರ್ ಬಶರ್​ ಥಾಬೆಟ್​(Bashar Thabet) ನನ್ನು ಶಸ್ತ್ರಾಸ್ತ್ರ ಉತ್ಪಾದನಾ ಕಚೇರಿಯೊಳಗೆ ಕೊಂದಿರುವುದಾಗಿ ಐಡಿಎಫ್​(Israel Defense Forces) ಹೇಳಿದೆ. ಹಮಾಸ್​ನ ಶಸ್ತ್ರಾಸ್ತ್ರ ಉತ್ಪಾದನಾ ಉಪಕರಣದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿಗೆ ಥಾಬೆಟ್​ ಜವಾಬ್ದಾರನಾಗಿದ್ದನು ಎಂದು ವರದಿಯಾಗಿದೆ.

ಈ ಕಾರ್ಯಚರಣೆಯ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ IDF ಪಡೆಗಳು ಭಯೋತ್ಪಾದಕರ ಮೂಲಸೌಕರ್ಯಗಳು ಮತ್ತು ಸುರಂಗ ಮಾರ್ಗಗಳನ್ನು ಪತ್ತೆಹಚ್ಚಿ ನಾಶ ಮಾಡಿವೆ. IDF ಪಡೆಗಳ​ ಮೇಲೆ ದಾಳಿ ಮಾಡಲು ಹೊರಟಿದ್ದ ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಭಯೋತ್ಪಾದಕರ ಮಿಲಿಟರಿ ಪ್ರದೇಶದಲ್ಲಿ ಹಾಗೂ ಹೆಚ್ಚುವರಿ ಉಗ್ರರ ಮೂಲಸೌಕರ್ಯ ಸೇರಿದಂತೆ ಸುಮಾರು 75 ನೆಲೆಗಳನ್ನು ನಾಶವಾಗಿವೆ ಎಂದು IDF ಹೇಳಿದೆ.

ಅಲ್ಲದೇ, ಭದ್ರತಾ ಪಡೆಗಳು ನಡೆಸಿದ ಕಾರ್ಯಚರಣೆಯಲ್ಲಿ ಹಮಾಸ್​ನ ಅಭಿವೃದ್ದಿ ವಿಭಾಗದ ಶಸ್ತ್ರಾಸ್ತ್ರ ಉತ್ಪಾದನಾ ಕಚೇರಿಯೊಳಗೆ ಕೊಂದಿರುವುದಾಗಿ IDF ತಿಳಿಸಿದೆ. ಹಮಾಸ್​ನ ಶಸ್ತ್ರಾಸ್ತ್ರ ಉತ್ಪಾದನಾ ಉಪಕರಣದೊಳಗಿನ ಸಂಶೋಧನೆ ಮತ್ತು ಅಭಿವೃದ್ದಿಗೆ ಜವಾಬ್ದಾರರಾಗಿದ್ದರು. ಇದು ಹಮಾಸ್​ನ ಶಸ್ತ್ರಾಸ್ತ್ರಗಳ ದಾಸ್ತಾನು ಪುನಃಸ್ಥಾಪಿಸಲು ಮತ್ತು ಹೆಚ್ಚಿಸಲು ಕಾರ್ಯನಿರ್ವಹಿಸುತ್ತದೆ ಎಂದು IDF ತಿಳಿಸಿದೆ.