Israel-Iran Conflict: ಮಧ್ಯಪ್ರಾಚ್ಯ ವಿರೋಧಿ ದೇಶಗಳಾದ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರವಾಗಿದೆ. ಎರಡೂ ರಾಷ್ಟ್ರಗಳು ಭಾನುವಾರ ರಾತ್ರಿಯಿಡೀ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದ್ದು, ಪಶ್ಚಿಮ ಏಷ್ಯಾದಲ್ಲಿ ವ್ಯಾಪಕ ಪ್ರಾದೇಶಿಕ ಸಂಘರ್ಷದ ಆತಂಕ ಸೃಷ್ಟಿಯಾಗಿದೆ.
ಇದನ್ನೂ ಓದಿ: ಕೇದಾರನಾಥ ಹೆಲಿಕಾಪ್ಟರ್ ಪತನ: 2 ತಿಂಗಳ ಹಿಂದಷ್ಟೇ ಅವಳಿ ಮಕ್ಕಳಿಗೆ ತಂದೆಯಾಗಿದ್ದ ಪೈಲಟ್ ದಾರುಣ ಅಂತ್ಯ | Chopper Crash
ಅತ್ತ ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ ಮಾಸುವ ಮುನ್ನವೇ ಇತ್ತ ಇರಾನ್ ಮತ್ತು ಇಸ್ರೇಲ್ ನಡುವೆ ಸೇಡಿನ ಕಿಡಿ ಹೊತ್ತಿ ಉರಿಯುತ್ತಿದೆ. ಜೂ.13ರ ಬೆಳಗ್ಗೆ ರಾಜಧಾನಿ ಟೆಹ್ರಾನ್ ಮೇಲೆ ವಾಯುದಾಳಿ ನಡೆಸಿದ ಇಸ್ರೇಲ್, ಇರಾನ್ನ ಸೇನಾ ಮುಖ್ಯಸ್ಥ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನೇ ಹೊಡೆದುರಳಿಸಿತು. ಇದು ಎರಡೂ ದೇಶಗಳ ನಡುವಿನ ಪ್ರತೀಕಾರದ ಜ್ವಾಲೆಗೆ ದೊಡ್ಡ ಕಾರಣವಾಗಿ ಮಾರ್ಪಟ್ಟಿದೆ.
ಇತ್ತೀಚಿನ ವರದಿಗಳ ಪ್ರಕಾರ, ಮೊದಲ ಎರಡು ದಿನಗಳ ಇಸ್ರೇಲ್ ದಾಳಿಯಲ್ಲಿ ಒಟ್ಟು 80 ಮಂದಿ ಸಾವಿಗೀಡಾಗಿದ್ದಾರೆ. ಟೆಹ್ರಾನ್ನ ಬೃಹತ್ ಕಟ್ಟಡಗಳು ಛಿದ್ರಗೊಂಡಿದ್ದು, ಮೇಲಿನ ಮಹಡಿಗಳು ಕುಸಿದಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಇರಾನ್ನ ಪ್ರಮುಖ ಸ್ಥಳಗಳನ್ನೇ ಗುರಿಯಾಗಿಸಿಕೊಂಡಿರುವ ಇಸ್ರೇಲ್, ನಿರಂತರ ಕ್ಷಿಪಣಿ ದಾಳಿಯ ಮೂಲಕ ಜನರ ಪ್ರಾಣ ಕಸಿದುಕೊಳ್ಳುತ್ತಿದೆ.
ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ತಮ್ಮ ದೇಶದ ಹಲವಾರು ಜನರು ಜೀವ ಕಳೆದುಕೊಂಡ ಬೆನ್ನಲ್ಲೇ ಪ್ರತೀಕಾರದ ಎಚ್ಚರಿಕೆ ಕೊಟ್ಟ ಇರಾನ್ ಸೇನೆ, ಇಂದು ಇಸ್ರೇಲ್ ಮೇಲೆ ಕ್ಷಿಪಣಿಗಳ ಮಳೆಯನ್ನೇ ಸುರಿಸಿದೆ. ಈ ದಾಳಿಯಲ್ಲಿ ಇಸ್ರೇಲ್ನ 10 ಜನರು ಮೃತಪಟ್ಟಿದ್ದಾರೆ,(ಏಜೆನ್ಸೀಸ್).