ನ್ಯೂಸ್

ಇರಾನ್​ ಸೇನಾ ನೆಲೆ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ! ಪ್ರಮುಖ ಪ್ರದೇಶಗಳಲ್ಲಿ ಸರಣಿ ಸ್ಫೋಟ | Military Targets

ಜೆರುಸಲೇಮ್: ಇಂದು ಮುಂಜಾನೆಯೇ ಇರಾನ್‌ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಸಜ್ಜಾದ ಇಸ್ರೇಲ್‌, ಇರಾನ್​ನ ಟೆಹರಾನ್ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರೊಟ್ಟಿಗೆ ಇರಾನ್ ಸೇನಾ ನೆಲೆಗಳನ್ನು (Military Targets) ಗುರಿಯಾಗಿಸಿಕೊಂಡ ಇಸ್ರೇಲ್​ ಕ್ಷಿಪಣಿ, ಇದೀಗ ಮಿಲಿಟರಿ ಪಡೆಯನ್ನು ಧ್ವಂಸಗೊಳಿಸಿದೆ.

ಅಕ್ಟೋಬರ್ 01ರಂದು ಇರಾನ್ ನಡೆಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಕಾದು ಕುಳಿತ್ತಿದ್ದ ಇಸ್ರೇಲ್​, ಇಂದು ಇರಾನ್​ನ ಸೇನಾ ನೆಲೆಯನ್ನೇ ಪ್ರಮುಖ ಟಾರ್ಗೆಟ್​ ಮಾಡಿಕೊಂಡು, ಟೆಹ್ರಾನ್ ಹಾಗೂ ಅನೇಕ ನಗರ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ...