ಗಾಜಾ: ಉತ್ತರ ಗಾಜಾದಲ್ಲಿರುವ (North Gaza) ಬೀಟ್ ಲಾಹಿಯಾ ನಗರದ ಮೇಲೆ ಇಸ್ರೇಲ್ (Israel) ನಡೆಸಿದ ವೈಮಾನಿಕ ದಾಳಿಯಲ್ಲಿ (Air Strike) ಮಹಿಳೆಯರು, ಮಕ್ಕಳು ಸೇರಿದಂತೆ 73 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ದಾಳಿಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಹುಮಹಡಿ ಕಟ್ಟಡವನ್ನು ಗುರಿಯಾಗಿಟ್ಟುಕೊಂಡು ದಾಳಿ (Attack) ನಡೆಸಲಾಗಿದ್ದು ಸಮೀಪದ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಮಾಸ್ನ ಲೀಡರ್ ಸಿನ್ವರ್ ಹತ್ಯೆ ಬೆನ್ನಲ್ಲೇ ಯುದ್ಧ ತೀವ್ರ ಸ್ವರೂಪಕ್ಕೆ ತಿರುಗಿದೆ.
ಇದನ್ನೂ ಓದಿ: VIDEO| ಕಿವೀಸ್ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆ ದಿನದಾಟ ನಿಲ್ಲಿಸಿದ Umpires; ನಾಯಕ Rohit Sharma ಕೆಂಡಾಮಂಡಲ
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ನ ಹತ್ಯೆ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರ ಖಾಸಗಿ ನಿವಾಸದ ಮೇಲೆ ಡ್ರೋನ್ ಮೂಲಕ ದಾಳಿ ನಡೆದಿದ್ದು, ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ತಾರಕಕ್ಕೇರಿದೆ. ದಾಳಿಯಲ್ಲಿ ಯಾರಿಗೂ ಹಾನಿ ಆಗಿಲ್ಲ. ಪ್ರಧಾನಿ ನೆತನ್ಯಾಹು ಅವರ ಪತ್ನಿ ಸಹಿತ ಕುಟುಂಬದ ಸದಸ್ಯರು (Family Members) ಸುರಕ್ಷಿತವಾಗಿದ್ದಾರೆ ಎಂದು ಇಸ್ರೇಲ್ ಸರ್ಕಾರ ಹೇಳಿಕೊಂಡಿದೆ.
ಲೆಬನಾನ್ ಕಡೆಯಿಂದ ಡ್ರೋನ್ ದಾಳಿ (Drone Attack) ಆಗುತ್ತಿದ್ದಂತೆ ಇಸ್ರೇಲ್ನ ಹಲವೆಡೆ ಸೈರನ್ಗಳು ಮೊಳಗಿದವು. ಹತ್ತಾರು ಡ್ರೋನ್, ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿತ್ತು. ಮೆಡಿಟರೇನಿಯನ್ ಕರಾವಳಿ ಪಟ್ಟಣವಾದ ಸಿಸೇರಿಯಾದಲ್ಲಿರುವ ನೆತನ್ಯಾಹು ಅವರ ಮನೆಯನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಲಾಗಿದೆ. ಆದರೆ ಈ ವೇಳೆ ಅವರ ಪತ್ನಿ ಅಥವಾ ಯಾವುದೇ ಸದಸ್ಯರು ಮನೆಯಲ್ಲಿ ಇರಲಿಲ್ಲ ಎಂದು ಪ್ರಧಾನಿ ಕಚೇರಿ ಹೇಳಿಕೊಂಡಿದೆ.