ನ್ಯೂಸ್

ಮುಸ್ಲಿಮರು ಗೋಮಾಂಸ ಸೇವನೆಯನ್ನು ತ್ಯಜಿಸಿ, ಅವರ ಈ ಚಿಂತನೆಯು.... Islamic Cleric ಹೇಳಿಕೆ ವೈರಲ್​

ಬರೇಲಿ: ಅಸ್ಸಾಂನಲ್ಲಿ ವಾಸಿಸುತ್ತಿರುವ ಮುಸ್ಲಿಮರು ಗೋಮಾಂಸ ಸೇವನೆಯನ್ನು ನಿಲ್ಲಿಸಬೇಕು ಎಂದು ಇಸ್ಲಾಮಿಕ್ ಧರ್ಮಗುರು (Islamic Cleric) ಮೌಲಾನಾ ಶಹಾಬುದ್ದೀನ್ ರಿಜ್ವಿ ಬರೇಲ್ವಿ ಕರೆ ನೀಡಿದ್ಧಾರೆ. 

ಅಸ್ಸಾಂನಲ್ಲಿ ಹೋಟೆಲ್​ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟವನ್ನು ಸರ್ಕಾರ ನಿಷೇಧ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಇಸ್ಲಾಮಿಕ್ ಧರ್ಮಗುರು ಹೇಳಿಕೆ ನೀಡಿದ್ಧಾರೆ. 

ಈ ಬಗ್ಗೆ ಮಾತನಾಡಿರುವ ಮೌಲಾನಾ ಶಹಾಬುದ್ದೀನ್(Islamic Cleric), ಅಸ್ಸಾಂನಲ್ಲಿರುವ ಮುಸ್ಲಿಮರು ಗೋಮಾಂಸ ಸೇವನೆಯನ್ನು ನಿಲ್ಲಿಸಬೇಕು. ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಮುಸ್ಲಿಂ ವಿರೋಧಿ ಮನಸ್ಥಿತಿ ಹೊಂದಿದ್ದಾರೆ. ಯಾವಾಗಲೂ ಮುಸ್ಲಿಮರ ವಿರುದ್ಧ ಮಾತನಾಡುತ್ತಾರೆ. ಅವರ ಚಿಂತನೆಯು ಮುಸ್ಲಿಂ ವಿರೋಧಿಯಾಗಿದೆ.

ಮುಸ್ಲಿಮರು ಗೋಮಾಂಸವಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ನಂಬಿರುವಂತಿದೆ. ನಾನು ಅಸ್ಸಾಂನಲ್ಲಿರುವ ಮುಸ್ಲಿಮರಿಗೆ ಗೋಮಾಂಸ ತಿನ್ನದೇ ಇರುವಂತೆ ಕರೆ ನೀಡುತ್ತೇನೆ. ಗೋಮಾಂಸ ನಿಷೇಧವು ಮುಸ್ಲಿಂ ಸಮುದಾಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಸ್ಲಾಂ ಗೋಮಾಂಸ ಸೇವನೆಯನ್ನು ಕಡ್ಡಾಯ ಮಾಡುವುದಿಲ್ಲ. ಜನರು ವೈಯಕ್ತಿಕ ಆದ್ಯತೆಗಳ ಆಧಾರದ ಮೇಲೆ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ಬದುಕು ಮತ್ತು ಸಾವು ದೇವರ ಕೈಯಲ್ಲಿದೆ ಎಂದು ಮೌಲಾನಾ ಶಹಾಬುದ್ದೀನ್ (Islamic Cleric) ಹೇಳಿದ್ದಾರೆ.

ಡಿಸೆಂಬರ್​ 04ರಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ರಾಜ್ಯದ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ ಹಾಗೂ ಸೇವನೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಈ ವಿಚಾರ ರಾಷ್ಟ್ರ ರಾಜಕಾರಣದಲ್ಲಿ ಗದ್ದಲವನ್ನೇ ಸೃಷ್ಟಿ ಮಾಡಿತ್ತು.