Iskon Employee: ಇಸ್ಕಾನ್ ದೇವಸ್ಥಾನದ ಉದ್ಯೋಗಿಯೊಬ್ಬ ದೇವಾಲಯಕ್ಕೆ ಹರಿದುಬಂದ ಭಕ್ತಸಾಗರ ನೀಡಿದ ಲಕ್ಷಗಟ್ಟಲೇ ರೂಪಾಯಿ ಮೌಲ್ಯದ ದೇಣಿಗೆ ಹಣ ಮತ್ತು ರಶೀದಿ ಪುಸ್ತಕದೊಂದಿಗೆ ಪರಾರಿಯಾದ ಘಟನೆ ಮಧ್ಯೆಪ್ರದೇಶದ ಇಂದೋರ್ನಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಚಿತ್ರರಸಿಕರಲ್ಲಿ ಕಣ್ಣೀರು ತರಿಸಿದ ‘ಮಹಾರಾಜ’! ವಿಜಯ್ ಸೇತುಪತಿ ಚಿತ್ರಕ್ಕೆ ಚೀನಾ ಪ್ರೇಕ್ಷಕರು ಫಿದಾ | Maharaja
ಶುಕ್ರವಾರ (ಜ.03) ತಡರಾತ್ರಿ ದೇವಸ್ಥಾನದ ಮುಖ್ಯ ಲೆಕ್ಕಾಧಿಕಾರಿ ವಿಶ್ವ ನಾಮ ದಾಸ್ ಪೊಲೀಸರಿಗೆ ಎಫ್‌ಐಆರ್ ದಾಖಲಿಸಿದ ಬಳಿಕ ಉದ್ಯೋಗಿಯ ಕಳ್ಳತನ ಬಟಾಬಯಲಾಗಿದೆ. ದೇವಸ್ಥಾನದ ಮುಖ್ಯ ಹಣಕಾಸು ಅಧಿಕಾರಿ ವಿಶ್ವ ನಾಮ ದಾಸ್ ಅವರು ಆರೋಪಿ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿ ಅರವಿಂದ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ದೇವಸ್ಥಾನದ ವಕ್ತಾರ ರವಿ ಲೋಚನ್ ದಾಸ್ ಕೊಟ್ಟ ಮಾಹಿತಿ ಪ್ರಕಾರ, ನಾಪತ್ತೆಯಾಗಿರುವ ಉದ್ಯೋಗಿ ಮುರಳೀಧರ್ ದಾಸ್, ಇಸ್ಕಾನ್ ದೇವಸ್ಥಾನದಲ್ಲಿ ದೇಣಿಗೆ ಸಂಗ್ರಹಿಸುವ ಮತ್ತು ಠೇವಣಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದ್ದರು. ಲಕ್ಷ ಲಕ್ಷ ಹಣದ ಜತೆಗೆ 32 ಹಾಳೆಗಳಿದ್ದ ರಸೀದಿ ಪುಸ್ತಕವನ್ನು ಸಹ ಕದ್ದೊಯ್ದಿದ್ದಾರೆ ಎಂದು ಆರೋಪಿದ್ದಾರೆ.
ನಿಮಾಯ್ ಚಂದ್ ಯಾದವ್ ಅವರ ಪುತ್ರ ಮುರಳೀಧರ್ ದಾಸ್ ಮಧ್ಯಪ್ರದೇಶದ ಇಂದೋರ್‌ನಿಂದ ಬಂದವರು ಎಂದು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ನಾಪತ್ತೆಯಾಗಿರುವ ಇಸ್ಕಾನ್ ಉದ್ಯೋಗಿ ಮುರಳೀಧರ್ ಪತ್ತೆಗೆ ಸದ್ಯ ಪೊಲೀಸರು ಬಲೆ ಬೀಸಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸುವ ಭರವಸೆ ನೀಡಿದ್ದಾರೆ,(ಏಜೆನ್ಸೀಸ್).