ನ್ಯೂಸ್

ನಿಜ್ಜರ್​ ಹತ್ಯೆ ಹಿಂದಿದೆ ಐಎಸ್​ಐ ಕೈವಾಡ!

ಮೋಹನ್​ ಶೆಟ್ಟಿ

ಒಟ್ಟಾವಾ: ಕೆನಡಾ-ಭಾರತದ ನಡುವೆ ಬಿಕ್ಕಟ್ಟು ಏರ್ಪಡಲು ಕಾರಣವಾಗಿರುವ ಖಲಿಸ್ತಾನ ಉಗ್ರ ಹರ್ದೀಪ್​ ಸಿಂಗ್​ ನಿಜ್ಜರ್​ ಹತ್ಯೆ ಪ್ರಕರಣದಲ್ಲಿ ಪಾಕಿಸ್ತಾನದ ಉಗ್ರ ಸಂಸ್ಥೆ ಐಎಸ್​ಐ ಕೈವಾಡವಿರುವುದಾಗಿ ವಿಶ್ವಸನೀಯ ಮೂಲಗಳು ತಿಳಿಸಿವೆ.

ಸಹಕರಿಸದಿದ್ದಕ್ಕೆ ಹತ್ಯೆ: ಭಾರತದಲ್ಲಿ ಉಗ್ರವಾದ ಹೆಚ್ಚಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೇಗಾದರೂ ಭಾರತಕ್ಕೆ ಮಸಿ ಬಳಿಯಬೇಕೆಂದು ತೀರ್ಮಾನಿಸಿದ ಪಾಕಿಸ್ತಾನವು, ಖಲಿಸ್ತಾನ್​ ವಾದಿಗಳು ಹೆಚ್ಚಾಗಿದ್ದ ಕೆನಡಾದಲ್ಲಿ ತನ್ನ ಮಸಲತ್ತು ತೋರಲು ಐಎಸ್​ಐ ಏಜಂಟರನ್ನು ಬಳಸಿಕೊಂಡಿದೆ.

ಕೆಲವು ಐಎಸ್​ಐ ಉಗ್ರರನ್ನು ಕೆನಡಾಗೆ ಕಳುಹಿಸಿದ್ದು, ಅವರಿಗೆ ಸಹಕರಿಸುವಂತೆ ನಿಜ್ಜರ್​ ಮೇಲೆ ಒತ್ತಡ ಹೇರಿದೆ. ಆದರೆ ಆತ ಇವರಿಗೆ ಸಹಕರಿಸದೆ ಖಲೀಸ್ತಾನ್​ ಬೆಂಬಲಿಗರ ಕಡೆಗೇ ಒಲವು ತೋರಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಐಎಸ್​ಐ ಉಗ್ರರು ನಿಜ್ಜರ್​ರನ್ನು ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮತ್ತೊಬ್ಬ ವ್ಯಕ್ತಿಯನ್ನು ತಮ್ಮ ಮಾತು ಕೇಳುವಂತೆ ಮಾಡಿಕೊಂಡು ಖಲಿಸ್ತಾನ್​ ಉಗ್ರರನ್ನು ಪೋಷಿಸಲು ಮುಂದಾಗಿದೆ ಎನ್ನಲಾಗಿದೆ.

ನಿಜ್ಜರ್​ ಹತ್ಯೆ ಭಾರತ-ಕೆನಡಾ ನಡುವೆ ಸಂಬಂಧ ಹದಗೆಡಲು ಕಾರಣವಾಗಿದ್ದು, ಭಾರತ ವೀಸಾಗಳನ್ನು ರದ್ಧುಪಡಿಸಿತ್ತಲ್ಲದೆ, ಕೆನಡಾದ ಖಲಸ್ತಾನ್​ ಉಗ್ರರ ಭಾರತದಲ್ಲಿನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ವಿಶ್ವಸಂಸ್ಥೆಯ 78ನೇ ಸರ್ವ ಸದಸ್ಯರ ಸಭೆಯಲ್ಲಿ ಆ ದೇಶದ ವಿರುದ್ಧ ಧ್ವನಿ ಎತ್ತಿದ್ದು, ಕೇವಲ ರಾಜಕೀಯ ಲಾಭಕ್ಕಾಗಿ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್​ ಸ್ಪಷ್ಟಪಡಿಸಿದ್ದನ್ನು ಸ್ಮರಿಸಬಹುದು,(ಏಜೆನ್ಸೀಸ್).