ಆಂಧ್ರಪ್ರದೇಶ: ಟಾಲಿವುಡ್ನ 'ಅರ್ಜುನ್ ರೆಡ್ಡಿ' ಖ್ಯಾತಿಯ ನಟ ವಿಜಯ್ ದೇವರಕೊಂಡ ಮತ್ತು 'ಸೀತಾ ರಾಮಂ' ನಾಯಕಿ ಮೃಣಾಲ್ ಠಾಕೂರ್ ಜೋಡಿಯಾಗಿ ನಟಿಸುತ್ತಿರುವ 'ವಿಡಿ 13' ಚಿತ್ರದ ಬಗ್ಗೆ ಇದೀಗ ಸಾಕಷ್ಟು ಪ್ರಶ್ನೆಗಳು ಸದ್ಯ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದ್ದು, ಸಿನಿಮಾ ಕುರಿತಂತೆ ಯಾಕೆ ಹೊಸ ಮಾಹಿತಿಗಳು ಲಭ್ಯವಿಲ್ಲ ಮತ್ತು 'ವಿಡಿ 13' ಪಕ್ಕಾ ಟೈಟಲ್ ಆಗಿ ಉಳಿಯಲಿದೆಯೇ ಎಂಬುದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
'ಗೀತಾ ಗೋವಿಂದಂ' ಚಿತ್ರದಲ್ಲಿ ಮಿಂಚಿದ್ದ ನಿರ್ದೇಶಕ ಪರಶುರಾಮ್ ಮತ್ತು ವಿಜಯ್ ದೇವರಕೊಂಡ ಇದೀಗ 'ವಿಡಿ 13' ಮೂಲಕ ಮತ್ತೊಮ್ಮೆ ತೆರೆ ಮೇಲೆ ಕಮಾಲ್ ಮಾಡಲು ಕೈಜೋಡಿಸಿದ್ದಾರೆ. ಇಬ್ಬರ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಈ ಚಿತ್ರದ ಬಗ್ಗೆ ಅಗಾಧವಾದ ನಿರೀಕ್ಷೆಗಳು ಇದ್ದು, ಸದ್ಯ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಈ ಹಿಂದಿನಿಂದಲೂ ಹೇಳುತ್ತಿರುವಂತೆ ಚಿತ್ರವು 2024ರ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಇನ್ನೂ ಈ ಬಗ್ಗೆ ಸ್ವತಃ ಚಿತ್ರ ತಯಾರಕರು ಕೂಡ ಈಗಾಗಲೇ ಘೋಷಿಸಿದ್ದಾರೆ. ಆದ್ರೆ, ಈ ಕುರಿತಂತೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.
ನಿರೀಕ್ಷೆಯಂತೆ 'ವಿಡಿ 13' ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಗೊಂಡರೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಗುಂಟೂರು ಖಾರಂ' ಚಿತ್ರದ ಜತೆಗೆ ಬಾಕ್ಸ್ ಆಫೀಸ್ನಲ್ಲಿ ಭಾರೀ ಪೈಪೋಟಿ ಎದುರಾಗುವುದು ಖಚಿತ,(ಏಜೆನ್ಸೀಸ್).