'ರಾಮಾಯಣ' ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ರಣಬೀರ್ ಕಪೂರ್ 
ನ್ಯೂಸ್

Ramayana Movie: 'ರಾಮಾಯಣ' ಪಾರ್ಟ್​-3 ಬರುತ್ತಾ? 'ಸ್ಪಾಯ್ಲರ್ ಕಿಂಗ್' ರಣಬೀರ್ ಕಪೂರ್ ಕೊಟ್ಟ ಸೀಕ್ರೆಟ್ ಹಿಂಟ್!

4,000 ಕೋಟಿ ವೆಚ್ಚದ 'ರಾಮಾಯಣ' ಸಿನಿಮಾದ 3ನೇ ಭಾಗದ ಬಗ್ಗೆ ಸುಳಿವು ಕೊಟ್ಟ ರಣಬೀರ್

ರಣಬೀರ್ ಮಾತಿಗೆ ಅಭಿಮಾನಿಗಳ ಮಿಶ್ರ ಪ್ರತಿಕ್ರಿಯೆ, ಹಾಲಿವುಡ್‌ನ ಟಾಮ್ ಹಾಲೆಂಡ್‌ಗೆ ಹೋಲಿಕೆ

2026ರ ದೀಪಾವಳಿಗೆ ಮೊದಲ ಭಾಗ ಹಾಗೂ 2027ರ ದೀಪಾವಳಿಗೆ 2ನೇ ಭಾಗ ಬಿಡುಗಡೆ

Ranbir Kapoor Ramayana: ರೈಸ್ ಆಫ್ ಎ ಲೆಜೆಂಡ್' ಸಿನಿಮಾದ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 4,000 ಕೋಟಿ ಬಜೆಟ್‌ನ ಈ ಪೌರಾಣಿಕ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಮಿಂಚುತ್ತಿದ್ದಾರೆ. ವಿಶೇಷ ಎಂದರೆ, ಮೊದಲ ಭಾಗ ರಿಲೀಸ್ ಆಗುವ ಮುನ್ನವೇ ರಣಬೀರ್ 3ನೇ ಭಾಗದ ಸುಳಿವು ನೀಡಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

ಖಾಸಗಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಣಬೀರ್, ‘ನಾವು ಈಗಾಗಲೇ 2ನೇ ಭಾಗದ ಶೂಟಿಂಗ್ ಶೇಕಡ 50ರಷ್ಟು ಮುಗಿಸಿದ್ದೇವೆ. 2ನೇ ಭಾಗ ಅಥವಾ 3ನೇ ಭಾಗ, ಒಂದು ವೇಳೆ 3ನೇ ಭಾಗ ಬಂದರೂ ಸಹ, ಈ ಸಿನಿಮಾ ನಮ್ಮನ್ನು ಎಂದಿಗೂ ಬಿಟ್ಟು ಹೋಗಲ್ಲ. ಫಲಿತಾಂಶ ಏನೇ ಬರಲಿ, ಇದು ನಮಗೆ ಸಿಕ್ಕ ಅಪರೂಪದ ಅವಕಾಶ. ಇದು ಬರಿ ಕರಿಯರ್ ಅಲ್ಲ, ನಮ್ಮ ಜೀವನವನ್ನೇ ಬದಲಾಯಿಸುವ ಪ್ರಾಜೆಕ್ಟ್’ ಎಂದಿದ್ದಾರೆ.

ಯಾರಾದ್ರೂ ರಣಬೀರ್ ಬಾಯಿ ಮುಚ್ಚಿಸಿ

ರಣಬೀರ್ ಅವರ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದಂತೆ, ಅಭಿಮಾನಿಗಳಲ್ಲಿ ಕುತೂಹಲ ಮುಗಿಲುಮುಟ್ಟಿದೆ. ಇನ್ನು ಕೆಲವರಂತೂ ರಣಬೀರ್ ಅವರನ್ನು ಹಾಲಿವುಡ್‌ನ 'ಸ್ಪಾಯ್ಲರ್ ಕಿಂಗ್' ಟಾಮ್ ಹಾಲೆಂಡ್‌ಗೆ ಹೋಲಿಸಿ ಫುಲ್ ಕಾಲೆಳೀತಿದ್ದಾರೆ. ‘ರಣಬೀರ್ ಮತ್ತೆ ಸ್ಪಾಯ್ಲರ್ ಕೊಡೋಕೆ ಶುರು ಮಾಡಿದ್ದಾರೆ, ಯಾರಾದ್ರೂ ಇವರ ಬಾಯಿ ಮುಚ್ಚಿಸಿ’ ಅಂತ ನೆಟ್ಟಿಗರು ಫನ್ನಿಯಾಗಿ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Attack on BSF: ಗಡಿಯಲ್ಲಿ BSF ಯೋಧರ ಮೇಲೆ ಭೀಕರ ದಾಳಿ: ಕೋಲುಗಳಿಂದ ಹಲ್ಲೆ, 8 ಮಂದಿ ಅರೆಸ್ಟ್

ನಿರ್ಮಾಪಕರು ಏನಂತಾರೆ?

ಲಾಸ್ ಏಂಜಲೀಸ್‌ನಲ್ಲಿ ಮಾತನಾಡಿದ್ದ ನಿರ್ಮಾಪಕ ನಮಿತ್ ಮಲ್ಹೋತ್ರಾ, ‘ಮೊದಲು 3 ಭಾಗಗಳ ಪ್ಲಾನ್ ಇತ್ತು, ಆಮೇಲೆ 2 ಭಾಗಕ್ಕೆ ನಿರ್ಧರಿಸಿದೆವು. ಮೊದಲ ಭಾಗಕ್ಕೆ ಸಿದುವ ರೆಸ್ಪಾನ್ಸ್ ನೋಡಿಕೊಂಡು 3ನೇ ಭಾಗದ ಬಗ್ಗೆ ಯೋಚಿಸ್ತೀವಿ’ ಎಂದಿದ್ದರು. ಸದ್ಯಕ್ಕೆ 'ರಾಮಾಯಣ' 1ನೇ ಭಾಗ 2026ರ ದೀಪಾವಳಿಗೆ ಹಾಗೂ 2ನೇ ಭಾಗ 2027ರ ದೀಪಾವಳಿಗೆ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ.