ಆಂಧ್ರಪ್ರದೇಶ: ಟಾಲಿವುಡ್ನ ರೆಬೆಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಸಲಾರ್' ಈ ವರ್ಷದ ಕೊನೆಯ ವಾರದಲ್ಲಿ ಬಿಡುಗಡೆಗೂ ಸಜ್ಜಾಗಿದ್ದು, ಈ ಮಧ್ಯೆ ಫ್ಯಾನ್ಸ್ ತಮ್ಮ ನೆಚ್ಚಿನ ನಟನಿಂದ ಯಾವುದಾದರೂ ಹೊಸ ಅಪ್ಡೇಟ್ ಸಿಗಲಿದೆಯಾ? ಕುತೂಹಲಕಾರಿ ಸಂಗತಿಗಳು ಅಥವಾ ಫೋಟೋ ಹಂಚಿಕೊಳ್ಳಲಿದ್ದಾರಾ ಎಂದು ಯೋಚಿಸುವಷ್ಟರಲ್ಲೇ ದೊಡ್ಡ ಶಾಕ್ವೊಂದು ಎದುರಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ನಟ ಪ್ರಭಾಸ್ ಹೆಚ್ಚಾಗಿ ಸಕ್ರಿಯರಾಗಿರುವುದಿಲ್ಲ. ಆದ್ರೆ, ಸಿನಿಮಾ ಕುರಿತಂತೆ ತಮ್ಮ ಇನ್ಸ್ಟಾಗ್ರಾಂ ಮತ್ತು ಇತರೆ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಆಗಾಗ್ಗೆ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಾರೆ.
ಇದೀಗ ನಟನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಅಪ್ಡೇಟ್ ಏನಿದೆ ಎಂದು ಚೆಕ್ ಮಾಡಲು ಹೋದಾಗ ಅಚ್ಚರಿಯೊಂದು ಎದುರಾಗಿದ್ದು, ಪ್ರಭಾಸ್ ಅಧಿಕೃತ ಖಾತೆ ನಾಪತ್ತೆಯಾಗಿದೆ. ಇದು ಡಿಯಾಕ್ಟಿವೇಟ್ ಆಗಿರಬಹುದಾ ಅಥವಾ ಹ್ಯಾಕರ್ಗಳ ಕೈಚಳಕ ಇರಬಹುದಾ? ಎಂಬ ಪ್ರಶ್ನೆಗಳು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಕಾರಣಗಳನ್ನು ಮೀರಿ ಸ್ವತಃ ಪ್ರಭಾಸ್ ಅವರೇ ತಮ್ಮ ಖಾತೆಯನ್ನು ಡಿಯಾಕ್ಟಿವೇಟ್ ಮಾಡಿರಬಹುದೇ ಎಂದು ಹಲವು ಬಳಕೆದಾರರು ಊಹಿಸಿದ್ದಾರೆ. ಸದ್ಯ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬೀಳದೆ ಇದ್ದರೂ ಖುದ್ದಾಗಿ ಪ್ರಭಾಸ್ ಸ್ಪಷ್ಟನೆ ಕೊಡಲಿದ್ದಾರಾ ಎಂಬುದನ್ನು ನಿರೀಕ್ಷಿಸಬೇಕಿದೆ,(ಏಜೆನ್ಸೀಸ್).