ಚಿಕನ್ ಖರೀದಿಸುವ ಮುನ್ನ ಈ ವಿಷಯಗಳನ್ನು ಗಮನಿಸಿ 
ನ್ಯೂಸ್

ಚಿಕನ್ ಫ್ರೆಶ್ ಇದ್ರೆ ಮಾತ್ರ ಸಾಕಾ? ಖರೀದಿಸುವ ಮುನ್ನ ಈ 5 ವಿಷಯ ಮಿಸ್ ಮಾಡ್ಬೇಡಿ! | Chicken Tips

ವೆಟ್ ಮಾರ್ಕೆಟ್‌ನಲ್ಲಿ ಚಿಕನ್ ಖರೀದಿಸುವಾಗ ಎಫ್‌ಎಸ್‌ಎಸ್‌ಎಐ ಲೈಸೆನ್ಸ್, ಮಾಂಸದ ತೇವಾಂಶ, ಅಂಗಡಿಯ ಸ್ವಚ್ಛತೆ, ಸಿಬ್ಬಂದಿಯ ಹೈಜೀನ್ ಹಾಗೂ ಡಿಸ್‌ಪ್ಲೇ ಕೌಂಟರ್‌ ಪರಿಶೀಲಿಸುವುದು ಮುಖ್ಯ.

Chicken Hygiene: ಭಾರತದಲ್ಲಿ ಚಿಕನ್ ಬಹುತೇಕ ಎಲ್ಲರಿಗೂ ಇಷ್ಟವಾಗುವ ಜನಪ್ರಿಯ ಆಹಾರ. ವಾರಕ್ಕೊಮ್ಮೆ ಹತ್ತಿರದ ಮಾಂಸದಂಗಡಿಯಿಂದ ಚಿಕನ್ ಖರೀದಿಸುವುದು ಸಾಮಾನ್ಯ. ಆದರೆ ಮಾಂಸ ಫ್ರೆಶ್ ಆಗಿದೆಯೇ ಅನ್ನೋದಷ್ಟೇ ಅಲ್ಲ, ಅಂಗಡಿಯ ಸ್ವಚ್ಛತೆ, ಸಂಗ್ರಹಣೆ ಮತ್ತು ಚಿಕನ್ ನಿರ್ವಹಣೆ ಹೇಗಿದೆ ಎಂಬುದನ್ನೂ ಗಮನಿಸುವುದು ಮುಖ್ಯ.

ಇಂಡಿಯಾ ಪೌಲ್ಟ್ರಿ ಮೀಟ್ ಮಾರ್ಕೆಟ್ ವರದಿ ಪ್ರಕಾರ, ಭಾರತದಲ್ಲಿ ಸುಮಾರು ಶೇ.85ರಷ್ಟು ಪೌಲ್ಟ್ರಿ ಮಾಂಸ ಇನ್ನೂ ವೆಟ್ ಮಾರ್ಕೆಟ್‌ಗಳ ಮೂಲಕವೇ ಮಾರಾಟವಾಗುತ್ತದೆ. ಹೀಗಾಗಿ ಚಿಕನ್ ಖರೀದಿಸುವಾಗ ಈ 5 ವಿಷಯಗಳನ್ನು ಗಮನಿಸಿ.

1. ಎಫ್‌ಎಸ್‌ಎಸ್‌ಎಐ ಲೈಸೆನ್ಸ್ ಇದೆಯೇ ನೋಡಿ

ಅಂಗಡಿಯಲ್ಲಿ ಎಫ್‌ಎಸ್‌ಎಸ್‌ಎಐ (FSSAI) ಲೈಸೆನ್ಸ್ ಅಥವಾ ರಿಜಿಸ್ಟ್ರೇಷನ್ ನಂಬರ್ ಕಾಣಿಸುತ್ತಿದೆಯೇ ಎಂದು ಮೊದಲು ಪರಿಶೀಲಿಸಿ. ಅದು ಕಾಣಿಸದಿದ್ದರೆ ಅಂಗಡಿಯವರ ಬಳಿ ಅದರ ವಿವರ ಕೇಳಿ.

ಚಿಕನ್‌ನಲ್ಲಿ ನೀರು ಹೆಚ್ಚಿದೆಯೇ ನೋಡಿ

2. ಚಿಕನ್‌ನಲ್ಲಿ ನೀರು ಹೆಚ್ಚಿದೆಯೇ?

ಚಿಕನ್‌ನಲ್ಲಿ ಸ್ವಲ್ಪ ತೇವಾಂಶ ಇರುವುದು ಸಹಜ. ಆದರೆ ಮಾಂಸ ಅತಿಯಾಗಿ ಒದ್ದೆಯಾಗಿದ್ದರೆ, ನೀರು ತೊಟ್ಟಿಕ್ಕುತ್ತಿದ್ದರೆ ಅಥವಾ ಕೆಳಗೆ ಹೆಚ್ಚಿನ ದ್ರವ ಕಂಡುಬಂದರೆ ಗಮನಿಸಿ. ಅಡುಗೆ ಮಾಡಿದಾಗ ಮಾಂಸ ಹೆಚ್ಚು ಕುಗ್ಗುವುದೂ ಹೆಚ್ಚುವರಿ ನೀರು ಉಳಿದಿರುವ ಸೂಚನೆಯಾಗಿರಬಹುದು. ಆದರೆ ಇವುಗಳಿಂದ ನೀರು ಸೇರಿಸಲಾಗಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

3. ಅಂಗಡಿಯ ನೆಲ ಸ್ವಚ್ಛವಾಗಿದೆಯೇ?

ಅಂಗಡಿಯ ನೆಲ ಒಣವಾಗಿದ್ದು ಸ್ವಚ್ಛವಾಗಿರಬೇಕು. ನೀರು ನಿಂತಿರುವುದು, ಕೆಸರು, ಕೊಳಚೆ ಅಥವಾ ತ್ಯಾಜ್ಯ ಕತ್ತರಿಸುವ ಜಾಗದ ಬಳಿ ಇರಬಾರದು. ಕೊಳಕು ಪರಿಸರದಿಂದ ಬ್ಯಾಕ್ಟೀರಿಯಾ ಹಾಗೂ ಕ್ರಾಸ್-ಕಂಟಾಮಿನೇಷನ್ ಅಪಾಯ ಹೆಚ್ಚಬಹುದು.

ಅಂಗಡಿಯವರ ಹೈಜೀನ್ ಹೇಗಿದೆ ಗಮನಿಸಿ

4. ಅಂಗಡಿಯವರ ಹೈಜೀನ್ ಹೇಗಿದೆ?

ಚಿಕನ್ ಕತ್ತರಿಸುವ ಸಿಬ್ಬಂದಿ ಸ್ವಚ್ಛವಾದ ಬಟ್ಟೆ ಅಥವಾ ರಕ್ಷಣಾತ್ಮಕ ಉಡುಪು ಧರಿಸಿದ್ದಾರೆಯೇ, ಕೈಗಳನ್ನು ಸ್ವಚ್ಛವಾಗಿಟ್ಟುಕೊಂಡಿದ್ದಾರೆಯೇ ನೋಡಿ. ಚಾಕು, ಕಟಿಂಗ್ ಬೋರ್ಡ್, ತೂಕದ ಯಂತ್ರ ಹಾಗೂ ಕೆಲಸದ ಜಾಗವೂ ಸ್ವಚ್ಛವಾಗಿರಬೇಕು.

ಇದನ್ನೂ ಓದಿ: ಗುಜರಾತ್‌ನಲ್ಲಿ ವರುಣನ ಅಬ್ಬರ: ಮಳೆಯಿಂದ ತಪ್ಪಿಸಿಕೊಳ್ಳಲು ಮನೆಯ ಮಾಳಿಗೆ ಏರಿದ ಸಿಂಹಗಳ ಫ್ಯಾಮಿಲಿ! | Lions Family

5. ಡಿಸ್‌ಪ್ಲೇ ಕೌಂಟರ್ ಪರಿಶೀಲಿಸಿ

ಚಿಕನ್ ಅನ್ನು ಮುಚ್ಚಿ ಇಡಲಾಗಿದೆಯೇ, ಕೌಂಟರ್ ಬಳಿ ನೊಣಗಳಿವೆಯೇ, ಕೊಳಕು ಅಥವಾ ತ್ಯಾಜ್ಯ ಇದೆಯೇ ಎಂದು ಗಮನಿಸಿ. ಚಿಕನ್ ಅನ್ನು ತೆರೆದೆಯೇ ಇಟ್ಟಿದ್ದರೆ ಕೀಟಗಳು ಮತ್ತು ಪದೇಪದೇ ಆಗುವ ಸ್ಪರ್ಶದಿಂದ ಮಾಂಸ ಕಲುಷಿತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಸ್ವಚ್ಛ ಹಾಗೂ ಮುಚ್ಚಿದ ಡಿಸ್‌ಪ್ಲೇ ಕೌಂಟರ್ ಇರುವ ಅಂಗಡಿಗೆ ಆದ್ಯತೆ ನೀಡಿ.