ನವದೆಹಲಿ: ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಬಿಜೆಪಿಯಿಂದ ಅಸ್ಸಾಂನ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರಾ..? ಇಂಥದ್ದೊಂದು ಬಹಳ ದಿನಗಳಿಂದ ಚರ್ಚೆಯಲ್ಲಿದೆ.
ಅಸ್ಸಾಂನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಬೇಕಿದೆ. ಇದ್ಕಕಾಗಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಗರಿಗೆದರಿವೆ. ವಿವಿಧ ಪಕ್ಷಗಳ ಮೈತ್ರಿಕೂಟಗಳು ರಚನೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಂಥದ್ದೊಂದು ಸುದ್ದಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ; ಬಾಬ್ರಿ ಮಸೀದಿ ಧ್ವಂಸದ ತೀರ್ಪು ಸೆ.30 ರೊಳಗೆ ನೀಡಿ; ಸುಪ್ರೀಂ ಸೂಚನೆ; ಏನಾಗುತ್ತೆ ಅಡ್ವಾಣಿ, ಜೋಶಿ, ಕಲ್ಯಾಣ್ ಸಿಂಗ್ ಭವಿಷ್ಯ?
ರಂಜನ್ ಗೊಗೊಯ್ ಬಿಜೆಪಿಯಿಂದ ಸಿಎಂ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗೆ ಕಾರಣವೂ ಇಲ್ಲದಿಲ್ಲ. ಸದ್ಯ ರಂಜನ್ ಗೊಗೊಯ್ ರಾಜ್ಯಸಭೆಯ ನಾಮ ನಿರ್ದೇಶಿತ ಸದಸ್ಯರಾಗಿದ್ದಾರೆ. ಈ ಆಹ್ವಾನವನ್ನು ಅವರು ಒಪ್ಪಿಕೊಂಡಿದ್ದೇ ರಾಜಕೀಯ ಪ್ರವೇಶಕ್ಕೆ ಹೆಜ್ಜೆಯಾಗಿದೆ ಎಂದೇ ವಿಶ್ಲೇಷಿಸಲಾಗಿದೆ.
ಆದರೆ, ಈ ಎಲ್ಲ ಸುದ್ದಿಯನ್ನು ಸ್ವತಃ ನ್ಯಾಯಮೂರ್ತಿ ರಂಜಯ್ ಗೊಗೊಯ್ ತಳ್ಳಿ ಹಾಕಿದ್ದಾರೆ. ನಾನು ರಾಜಕಾರಣಿಯಲ್ಲ, ರಾಜಕಾರಣಿಯಾಗುವ ಹಂಬಲವೂ ತನಗಿಲ್ಲ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆಗಳ ಬಗ್ಗೆಯೂ ತನಗೆ ಯಾರೂ ಕೂಡ ಮಾಹಿತಿಯನ್ನು ನೀಡಿಲ್ಲ ಎಂದಿರುವ ಗೊಗೊಯ್, ರಾಜ್ಯಸಭೆ ಸದಸ್ಯತ್ವವನ್ನು ಒಪ್ಪಿಕೊಂಡ ಮಾತ್ರಕ್ಕೆ ರಾಜಕೀಯ ಪ್ರವೇಶಿಸುತ್ತೇನೆ ಎಂದೇನಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭೆಗೆ ನಾಮ ನಿರ್ದೇಶನವಾಗುವುದಕ್ಕೂ, ರಾಜಕೀಯ ಪಕ್ಷವೊಂದರಿಂದ ಅಭ್ಯರ್ಥಿಯಾಗುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂಬುದನ್ನು ಅರಿಯದಿರುವುದೇ ದುರಂತ ಅವರು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯಿಂದ ಸಿಎಂ ಅಭ್ಯರ್ಥಿಯಾಗುವವರ ಪಟ್ಟಿಯಲ್ಲಿ ರಂಜನ್ ಗೊಗೊಯ್ ಹೆಸರು ಇದೆ ಎಂಬುದು ಹಲವು ಮೂಲಗಳಿಂದ ತಮಗೆ ಗೊತ್ತಾಗಿದೆ ಎಂದು ಅಸ್ಸಾಂ ಸಿಎಂ ತರುಣ್ ಗೊಗೊಯ್ ಹೇಳಿದ್ದರು. ರಾಮ ಮಂದಿರ ಪ್ರಕರಣದಲ್ಲಿ ತೀರ್ಪು ನೀಡಿದ್ದಕ್ಕೆ ಸಂತೋಷವಾಗಿ ಬಿಜೆಪಿ ಅವರಿಗೆ ರಾಜ್ಯಸಭಾ ಸ್ಥಾನ ನೀಡಿದೆ. ಅದನ್ನವರು ಒಪ್ಪಿಕೊಂಡಿದ್ದು, ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ಇದ್ದಂತಿದೆ ಎಂಬುದನ್ನು ತೋರಿಸುತ್ತದೆ ಎಂದು ತರುಣ್ ಗೊಗೊಯ್ ಪ್ರತಿಕ್ರಿಯಿಸಿದ್ದರು.