ನ್ಯೂಸ್

BiggBoss ಮನೆಯಲ್ಲಿ ಕಸಕ್ಕಿಂತ ಕಡೆಯಾದ್ರಾ ಚೈತ್ರಾ? ಕಿಚ್ಚನ ಎದುರು ಸ್ಫರ್ಧಿಗಳು ನೀಡಿದ ಕಾರಣ ಹೀಗಿದೆ

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ (BiggBoss) ಆರಂಭವಾಗಿ 10ಕ್ಕೂ ಅಧಿಕ ವಾರಗಳು ಕಳೆದಿದ್ದು, ವಾರ ಕಳೆದಂತೆ ಶೋ ರೋಚಕತೆ ಸೃಷ್ಟಿಸುವಲ್ಲಿ ಮಾತ್ರ ವಿಫಲವಾಗಿಲ್ಲ. ಶನಿವಾರದ ಸಂಚಿಕೆಯಲ್ಲಿ​ ಚೈತ್ರಾ ಕುಂದಾಪುರ, ಹನುಮಂತ ಹಾಗೂ ತ್ರಿವಿಕ್ರಮ್​ಗೆ ನಿರೂಪಕ ಕಿಚ್ಚ ಸುದೀಪ್ ಸಖತ್​ ಕ್ಲಾಸ್​ ತೆಗೆದುಕೊಂಡಿದ್ದರು. ಭಾನುವಾರದ ಸಂಚಿಕೆಯಲ್ಲಿ ಮಾತ್ರ ನಾಮಿನೇಷನ್​ಗೆ ಸಂಬಂಧಿಸಿದ ಪ್ರಕ್ರಿಯೆ ನಡೆಯಲಿದ್ದು, ಮನೆಮಂದಿಯಲ್ಲಾ ಚೈತ್ರಾ ಕುಂದಾಪುರ ಅವರನ್ನು ಕಸಕ್ಕೆ ಹೋಲಿಸಿ ಮಾತನಾಡಿದ್ದಾರೆ.

ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪ ಪ್ರೋಮೋ ನೋಡುವುದಾದರೆ ಬಿಗ್​ಬಾಸ್ ಮನೆಗೆ ಕಸದ ಬುಟ್ಟಿ ಬಂದಿದೆ. ಬಿಗ್​ಬಾಸ್ ಮನೆಯ ಕಸ ಯಾರೆಂದು ತಿಳಿಸಿ, ಅವರನ್ನು ಆ ಬುಟ್ಟಿಗೆ ಹಾಕಬೇಕು ಎಂದು ನಿರೂಪಕ ಕಿಚ್ಚ ಸುದೀಪ್​ ಹೇಳುತ್ತಾರೆ. ಈ ವೇಳೆ ಹನುಮಂತು, ಮೋಕ್ಷಿತಾ, ರಜತ್ ಹಾಗೂ ಐಶ್ವರ್ಯಾ ಚೈತ್ರ ಅವರ ಹೆಸರನ್ನು ಕಸದ ಬ್ಯಾಗಿಗೆ ಅಂಟಿಸಿ ಕಾರಣವನ್ನು ಉಲ್ಲೇಖಿಸಿ ಅದನ್ನು ಡಸ್ಟ್​​ಬಿನ್​ಗೆ ಹಾಕಿದ್ದಾರೆ. ಸಹ ಆಟಗಾರರ ಕಾರಣವನ್ನು ಚೈತ್ರಾ ಆಘಾತಕ್ಕೊಳಗಾಗಿದ್ದು, ಸದ್ಯ ಈ ಪ್ರೋಮೋ ವೈರಲ್​ ಆಗಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.