ಮುಂಬೈ: ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ದಾಂಪತ್ಯದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸುದ್ದಿ ಕಳೆದ ಕೆಲ ತಿಂಗಳಿನಿಂದ ಬಿ ಟೌನ್ ಅಂಗಳದಲ್ಲಿ ಹರಿದಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಳ್ಳದಿರುವುದು ಅದಕ್ಕೆ ಪುಷ್ಠಿ ನೀಡಿದೆ. ಇದೀಗ ಹೊಸ ಬೆಳವಣಿಗೆಯೊಂದರಲ್ಲಿ ಇವರಿಬ್ಬರು ಒಂದಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಐಶ್ವರ್ಯಾಗೆ ಅಭಿಷೇಕ್ ದುಬಾರಿ ಬೆಲೆಯ ಕಾರ್ ಗಿಫ್ಟ್ ಮಾಡಿರುವುದಾಗಿ ವರದಿಯಾಗಿದೆ.
ಸುದ್ದಿ ಮೂಲಗಳ ಪ್ರಕಾರ ಅಭಿಷೇಕ್ ಬಚ್ಚನ್ ಕೆಲ ದಿನಗಳ ಟೊಯೋಟಾ ಕಂಪನಿಯ ಹೊಸ ಕಾರೊಂದನ್ನು ಖರೀದಿಸಿದ್ದು, ಸೋದರಳಿಯ ಅಗಸ್ತ್ಯ ನಂದಾ, ಸೊಸೆ ನವ್ಯಾ ನವೇಲಿ ನಂದಾ ಮತ್ತು ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರನ್ನು ಅಭಿಷೇಕ್ ಹೊಸ ಕಾರಿನಲ್ಲಿ ಡಿನ್ನರ್ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಎಲ್ಲರ ಗಮನವನ್ನು ಕಾರಿನ ನಂಬರ್ ಪ್ಲೇಟ್ ಸೆಳೆದಿದ್ದು ಈ ವಿಚಾರವನ್ನು ಮುಂದಿಟ್ಟುಕೊಂಡು ಹಲವರು ಐಶ್ವರ್ಯಾ ಹಾಗೂ ಅಭಿಷೇಕ್ ಒಂದಾಗಲಿದ್ದಾರೆ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ಆತನ ಕೆರಿಯರ್ನಲ್ಲಿ ಇದೊಂದೆ ಬಾಕಿ ಉಳಿದಿದೆ; ವಿರಾಟ್ ಕೊಹ್ಲಿ ಕುರಿತು ಪಾಕ್ ಮಾಜಿ ಕ್ರಿಕೆಟಿಗನ ಹೇಳಿಕೆ ವೈರಲ್
ಈ ಹಿಂದೆ ಐಶ್ವರ್ಯಾ ರೈ Mercedes-Benz S-Class ಕಾರು ಹೊಂದಿದ್ದರು. ಅದರ ಸಂಖ್ಯೆ 5050 ಎಂದು ಆಗಿತ್ತು. ಈಗ ಆ ಕಾರನ್ನು ಮಾರಾಟ ಮಾಡಲಾಗಿದ್ದು, ಅಭಿಷೇಕ್ ಬಚ್ಚನ್ ಖರೀದಿಸಿರುವ ಹೊಸ ವಾಹನದ ಸಂಖ್ಯೆಯು 5050 ಆಗಿದೆ. ಇದನ್ನು ನೋಡಿ ಹಲವರು ಈ ಕಾರನ್ನು ಅಭಿಷೇಕ್ ಐಶ್ವರ್ಯಾಗೆ ಗಿಫ್ಟ್ ಮಾಡಿದ್ದು, ಐಶ್ವರ್ಯಾ ಅವರ ಫೇವರಿಟ್ ಸಂಖ್ಯೆಯನ್ನು ತಮ್ಮ ಕಾರಿನ ಸಂಖ್ಯೆಯನ್ನಾಗಿ ಮಾಡಿಕೊಂಡಿದ್ದಾರೆ ಇವರಿಬ್ಬರು ಯಾವುದೇ ಕಾರಣಕ್ಕೂ ದೂರಾಗುವುದಿಲ್ಲ. ಎಂದು ಹೇಳಿದ್ದಾರೆ.
ಈ ಹಿಂದೆ ಐಶ್ವರ್ಯಾ ಹಾಗೂ ಅಭಿ ಡಿವೋರ್ಸ ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಇಬ್ಬರು ಇದರ ಬಗ್ಗೆ ಮಾತನಾಡಿರಲಿಲ್ಲ. ಡಿವೋರ್ಸ್ ಸುದ್ದಿ ಬೆನ್ನಲ್ಲೇ ಮಗಳು ಆರಾಧ್ಯಳ ಶಾಲಾ ಕಾರ್ಯಕ್ರಮದಲ್ಲಿ ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದರು. ಇದಾದ ಬಳಿಕ ಅಂಬಾನಿ ಮಗನ ಮದುವೆಯಲ್ಲಿ ಬೇರೆ ಬೇರೆ ಕಾಣಿಸಿಕೊಳ್ಳುವ ಮೂಲಕ ವಿಚ್ಛೇದನ ವದಂತಿಗೆ ಮತ್ತೊಮ್ಮೆ ಪುಷ್ಠಿ ನೀಡಿದ್ದರು. ಇದೀಗ ಕಾರಿನ ವಿಚಾರವಾಗಿ ಇವರಿಬ್ಬರು ಮತ್ತೊಮ್ಮೆ ಸುದ್ದಿಯಲ್ಲಿದ್ದು ವಿಚ್ಛೇದನ ವದಂತಿ ಸುಳ್ಳಾಗಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.