ನ್ಯೂಸ್

ಇಸ್ರೇಲ್​​ನ ಅತಿದೊಡ್ಡ ಆಸ್ಪತ್ರೆಯಾದ ಸೊರೊಕಾ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್ | Israel vs Iran

Israel vs Iran: ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾದ ಬೀರ್‌ಶೆಬಾದಲ್ಲಿರುವ ಸೊರೊಕಾ ಆಸ್ಪತ್ರೆಯ ಮೇಲೆ ಗುರುವಾರ (ಜೂ.19) ಬೆಳಿಗ್ಗೆ ರಾನ್ ಕ್ಷಿಪಣಿ ದಾಳಿ ನಡೆಸಿದೆ.

ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಪರಿಣಾಮ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾದ ಬೀರ್‌ಶೆಬಾದಲ್ಲಿರುವ ಸೊರೊಕಾ ಆಸ್ಪತ್ರೆ ಹಾನಿಯಾಗಿದೆ. ಈ ಆಸ್ಪತ್ರೆಯೂ ಇಸ್ರೇಲ್‌ನ ದಕ್ಷಿಣದಲ್ಲಿರುವ ಪ್ರಮುಖ ಆಸ್ಪತ್ರೆಯಾಗಿದೆ.

ಈ ದಾಳಿಯಲ್ಲಿ ಜನರು ಗಾಯಗೊಂಡಿದ್ದಾರೆ . ಆಸ್ಪತ್ರೆಯು 1,000 ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿದೆ ಮತ್ತು ಇದು ಇಸ್ರೇಲ್‌ನ ದಕ್ಷಿಣದ ಸುಮಾರು ಒಂದು ಮಿಲಿಯನ್ ನಿವಾಸಿಗಳಿಗೆ ಸೇವೆಗಳನ್ನು ಒದಗಿಸುತ್ತದೆ ಎಂದು ಸೊರೊಕಾ ಆಸ್ಪತ್ರೆಯ ಮೇಲಿನ ಪರಿಣಾಮದ ಕುರಿತು ಮಾತನಾಡಿದ ವಕ್ತಾರರು ಹೇಳಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವು ಏಳನೇ ದಿನಕ್ಕೆ ಕಾಲಿಡುತ್ತಿರುವಾಗ ಈ ದಾಳಿ ನಡೆದಿದೆ. ಅಲ್ಲಿ ಇಲ್ಲಿಯವರೆಗೆ 16 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ, ಅವರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. (ಏಜೆನ್ಸೀಸ್​)