India: ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಪ್ರತೀಕಾರದ ದಾಳಿಗಳು ಮುಂದುವರಿದಿವೆ. ಎರಡೂ ದೇಶಗಳು ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ಪರಸ್ಪರ ದಾಳಿ ನಡೆಸುತ್ತಿವೆ. ಸದ್ಯದ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಯುದ್ಧದ ವಾತಾವರಣ ಹೀಗೆ ಮುಂದುವರಿದರೆ, ಮಧ್ಯಪ್ರಾಚ್ಯ ಪರಿಸ್ಥಿತಿ ತೀರ ಹದಗೆಡುವ ಅಪಾಯವಿದೆ.
ಇದನ್ನೂ ಓದಿ: ಇಂದ್ರಯಾಣಿ ನದಿಯ ಸೇತುವೆ ಕುಸಿತ! ಇಬ್ಬರು ಪ್ರವಾಸಿಗರು ಸಾವು; ಮುಂದುವರಿದ ರಕ್ಷಣಾ ಕಾರ್ಯಾಚರಣೆ | Bridge Collapse
ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಭಾರತದ ಮೇಲೂ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ಭಾರತ ಇರಾನ್ ಮತ್ತು ಇಸ್ರೇಲ್‌ನೊಂದಿಗೆ ಬಲವಾದ ವ್ಯಾಪಾರ ಸಂಬಂಧವನ್ನು ಹೊಂದಿರುವುದರಿಂದ, ಈ ಪರಿಣಾಮ ದೇಶಿಯ ಮಾರುಕಟ್ಟೆ ಮೇಲೂ ಪ್ರಭಾವ ಬೀರಲಿದೆ. ಭಾರತ ಎರಡೂ ದೇಶಗಳಿಗೆ ಅನೇಕ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಅದೇ ರೀತಿ, ಆ ದೇಶಗಳಿಂದಲೂ ಅನೇಕ ಸರಕುಗಳು ಭಾರತಕ್ಕೆ ಆಮದಾಗುತ್ತವೆ. ಸದ್ಯ ಎರಡೂ ದೇಶಗಳು ಯುದ್ಧದತ್ತ ಮುಖ ಮಾಡಿರುವ ಕಾರಣ, ಕೆಲವು ವಸ್ತುಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇಸ್ರೇಲ್ ಇರಾನ್‌ನ ಬೃಹತ್ ತೈಲ ಘಟಕವನ್ನೇ ಗುರಿಯಾಗಿಸಿ ದಾಳಿ ನಡೆಸಿರುವುದು ಸದ್ಯ ತೈಲ ಬೆಲೆ ಮೇಲೆ ದೊಡ್ಡ ಹೊಡೆತ ನೀಡಿದೆ. ಭಾರತವು ತನ್ನ ಕಚ್ಚಾ ತೈಲದ ಶೇ.80ಕ್ಕಿಂತ ಹೆಚ್ಚು ಭಾಗವನ್ನು ಜಾಗತಿಕವಾಗಿ ಆಮದು ಮಾಡಿಕೊಳ್ಳುತ್ತದೆ. ಆದಾಗ್ಯೂ, ಭಾರತಕ್ಕೆ ಇರಾನ್‌ನ ನೇರ ತೈಲ ಆಮದು ಚಿಕ್ಕದಾಗಿದ್ದರೂ, ದೇಶವು ಜಾಗತಿಕ ತೈಲ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂಘರ್ಷ ಉಲ್ಬಣಿಸಿದ ಹಿನ್ನೆಲೆ ಕಚ್ಚಾ ತೈಲ ಬೆಲೆಗಳು ಇದೀಗ ಗಗನಕ್ಕೇರಿವೆ.
ಇದನ್ನೂ ಓದಿ: ಕೇದಾರನಾಥ ಹೆಲಿಕಾಪ್ಟರ್ ಪತನ: 2 ತಿಂಗಳ ಹಿಂದಷ್ಟೇ ಅವಳಿ ಮಕ್ಕಳಿಗೆ ತಂದೆಯಾಗಿದ್ದ ಪೈಲಟ್ ದಾರುಣ ಅಂತ್ಯ | Chopper Crash
ಬ್ರೆಂಟ್ ಕಚ್ಚಾ ತೈಲವು ಪ್ರಸ್ತುತ ಬ್ಯಾರೆಲ್‌ಗೆ 75.32 ಡಾಲರ್ಗೆ ವಹಿವಾಟು ನಡೆಸುತ್ತಿದೆ. ಇದು ಶೇ.11ಕ್ಕಿಂತ ಹೆಚ್ಚಾಗಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲವು 73.42 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ. ಯುದ್ಧದ ಪರಿಸ್ಥಿತಿ ಹೀಗೆ ಮುಂದುವರಿದರೆ, ತೈಲ ಬೆಲೆಗಳು ಮತ್ತಷ್ಟು ಏರಿಕೆಯಾಗಬಹುದು ಎಂದು ವರದಿಗಳು ತಿಳಿಸಿವೆ.
ಇಸ್ರೇಲ್ ಭಾರತದ ಪ್ರಮುಖ ವ್ಯಾಪಾರ ಪಾಲುದಾರ ಎಂಬ ಸಂಗತಿ ಇಲ್ಲಿ ಗಮನಾರ್ಹ. ದೇಶವು ಏಷ್ಯಾದಲ್ಲಿ ಇಸ್ರೇಲ್‌ನ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಜಾಗತಿಕವಾಗಿ ಒಂಬತ್ತನೇ ಸ್ಥಾನದಲ್ಲಿದೆ. ವಿಶೇಷವಾಗಿ ಎಲೆಕ್ಟ್ರಾನಿಕ್ ಉಪಕರಣಗಳು, ಹೈಟೆಕ್ ಯಂತ್ರೋಪಕರಣಗಳು, ವೈದ್ಯಕೀಯ ಉಪಕರಣಗಳು ಮತ್ತು ಸಂವಹನ ವ್ಯವಸ್ಥೆಗಳಲ್ಲಿ ವ್ಯಾಪಾರ ವಹಿವಾಟು ದುಪ್ಪಟ್ಟಾಗಿದೆ. ಹಾಗಿದ್ದರೆ, ಎರಡೂ ದೇಶಗಳ ನಡುವಿನ ಸಂಘರ್ಷ ಭಾರತದ ಯಾವೆಲ್ಲ ವಸ್ತುಗಳ ಬೆಲೆ ಮೇಲೆ ಪ್ರಭಾವ ಬೀರಬಹುದು ಎಂಬುದರ ವಿವರ ಹೀಗಿದೆ ಗಮನಿಸಿ.