PAK vs SL | ಪಾಕ್​ ಸೆಮಿಫೈನಲ್‌ಗೆ ಹೋಗಲು ಮಾಡಬೇಕಿದೆ ಆ ಒಂದು ಅಸಾಧ್ಯ ಕೆಲಸ! 
ವಿದೇಶ

ಪಾಕಿಸ್ತಾನಕ್ಕೆ ಲಾಸ್ಟ್ ಚಾನ್ಸ್​...ಸೆಮಿಫೈನಲ್‌ಗೆ ಹೋಗಲು ಮಾಡಬೇಕಿದೆ ಆ ಒಂದು ಅಸಾಧ್ಯ ಕೆಲಸ! | Pakistan Semifinal Scenarios

PAK vs SL: ಈ ಬಾರಿಯ ಟಿ20 ವಿಶ್ವಕಪ್ ಗ್ರೂಪ್​ 2ರಲ್ಲಿ ಸೆಮಿಫೈನಲ್ ಪ್ರವೇಶದ ಲೆಕ್ಕಾಚಾರ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ತಲುಪಿದ್ದು, ಇಂಗ್ಲೆಂಡ್ ಈಗಾಗಲೇ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಖಚಿತಪಡಿಸಿಕೊಂಡಿದ್ದರೆ, ಎರಡನೇ ಸ್ಥಾನಕ್ಕಾಗಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ನ್ಯೂಜಿಲೆಂಡ್ ತಂಡ ತನ್ನ ಪಾಲಿನ 3 ಪಂದ್ಯಗಳನ್ನು ಮುಗಿಸಿ 3 ಅಂಕಗಳೊಂದಿಗೆ (ನೆಟ್ ರನ್ ರೇಟ್ +1.390) ಪ್ರಸ್ತುತ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ 1 ಅಂಕವನ್ನು ಮಾತ್ರ ಹೊಂದಿದೆ. ಇಂದು ಶ್ರೀಲಂಕಾ ವಿರುದ್ಧದ ಪಂದ್ಯ ಗೆದ್ದರೆ ಪಾಕಿಸ್ತಾನ ಕೂಡ 3 ಅಂಕಗಳನ್ನು ಪಡೆಯುತ್ತದೆ. ಆದರೆ, ಕೇವಲ ಗೆಲುವು ಸಾಕಾಗುವುದಿಲ್ಲ, ಕಿವೀಸ್ ತಂಡದ ರನ್ ರೇಟ್ ಮೀರಿಸಲು ಪಾಕಿಸ್ತಾನಕ್ಕೆ ಬೃಹತ್ ಗೆಲುವಿನ ಅಗತ್ಯವಿದೆ.
ಸಲ್ಮಾನ್ ಅಘಾ ನೇತೃತ್ವದ ಪಾಕ್​, ಶ್ರೀಲಂಕಾ ಕ್ರಿಕೆಟ್ ತಂಡವನ್ನು 65 ರನ್‌ಗಳ ಅಂತರದಿಂದ ಸೋಲಿಸಬೇಕು ಅಥವಾ 13 ಓವರ್‌ಗಳ ಒಳಗೆ ಗುರಿಯನ್ನು ಯಶಸ್ವಿಯಾಗಿ ತಲುಪಬೇಕು. ಇದನ್ನು ಸಾಧಿಸಿದರೆ, ಪಾಕಿಸ್ತಾನವು ಮೂರು ಅಂಕಗಳೊಂದಿಗೆ ನ್ಯೂಜಿಲೆಂಡ್‌ನೊಂದಿಗೆ ಸಮಬಲ ಸಾಧಿಸುತ್ತದೆ, ಉತ್ತಮ ರನ್​ರೇಟ್​​ ಮೂಲಕ ಸೆಮಿಸ್​​ಗೆ ಲಗ್ಗೆ ಇಡಲಿದೆ.

ತಂಡದ ಬಲ ಮತ್ತು ತಂತ್ರಗಾರಿಕೆ

ಪಾಕಿಸ್ತಾನದ ಬ್ಯಾಟಿಂಗ್ ಈ ಟೂರ್ನಿಯಲ್ಲಿ ಅನೇಕ ಏರಿಳಿತಗಳಿಂದ ಕಂಡಿದೆ.  ಆರಂಭಿಕ ಆಟಗಾರ ಫರ್ಹಾನ್ ಉತ್ತಮ ಫಾರ್ಮ್‌ನಲ್ಲಿದ್ದರೂ, ಬಾಬರ್ ಅಜಮ್ ಸ್ಟ್ರೈಕ್ ರೇಟ್ ಮತ್ತು ವೈಫಲ್ಯ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶ್ರೀಲಂಕಾದ ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಉಸ್ಮಾನ್ ತಾರಿಕ್, ಅಬ್ರಾರ್ ಅಹ್ಮದ್ ಮತ್ತು ಶಾದಾಬ್ ಖಾನ್ ಸ್ಪಿನ್ ಬಲ ಪಾಕಿಸ್ತಾನಕ್ಕೆ ವರವಾಗಬಹುದು. ಲಂಕಾ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವುದು ಪಾಕಿಸ್ತಾನದ ಮೊದಲ ಆದ್ಯತೆಯಾಗಿರಲಿದೆ(ಏಜೆನ್ಸೀಸ್​​).