ಇರಾನ್‌ನ ಬೀದಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಶವಪೆಟ್ಟಿಗೆಯ ಚಿತ್ರವಿರುವ ಬಿಲ್‌ಬೋರ್ಡ್
- ಇರಾನ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರ ಶವಪೆಟ್ಟಿಗೆಯ ಚಿತ್ರವಿರುವ ಬಿಲ್‌ಬೋರ್ಡ್‌ಗಳು ವೈರಲ್
- ಅಮೆರಿಕ ಅಧ್ಯಕ್ಷರನ್ನು ಕೊಂದೇ ತೀರುತ್ತೇವೆ ಎಂದು ಹೇಳುತ್ತರಿವ ಇರಾನ್
- ಇರಾನ್ ಜೊತೆ ನಾವು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ; ಕದನ ವಿರಾಮ ಮುಗಿದಿದೆ ಎಂದ ಟ್ರಂಪ್
ತೆಹ್ರಾನ್: ಕಳೆದ ಕೆಲ ದಿನಗಳಿಂದ ಸ್ವಲ್ಪಮಟ್ಟಿಗೆ ಶಾಂತವಾಗಿದ್ದ ಮಧ್ಯಪ್ರಾಚ್ಯದಲ್ಲಿ ಈಗ ಮತ್ತೆ ಸಂಘರ್ಷ ಭುಗಿಲೆದ್ದಿದೆ. ಇರಾನ್‌ನ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ನಡೆದ ನಂತರ ಅಮೆರಿಕ ಇರಾನ್ ಮೇಲೆ ದಾಳಿ ಮುಂದುವರಿಸಿದೆ.
ಇರಾನ್‌ನಲ್ಲಿ ಆಯತೊಲ್ಲಾ ಅಲಿ ಖಮೇನಿಯ ಅಂತ್ಯಸಂಸ್ಕಾರ ನಡೆಯುತ್ತಿದ್ದ ಸಮಯದಲ್ಲಿ ನಾಟೋ ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump in Coffin) ನಾವು ಇರಾನ್ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ, ಇಲ್ಲಿವರೆಗೆ ಘೋಷಣೆ ಮಾಡಿರುವ ಎಲ್ಲಾ ಕದನ ವಿರಾಮ ಇನ್ಮುಂದೆ ಇರುವುದಿಲ್ಲ ಎಂದು ಹೇಳುವ ಮೂಲಕ ಯುದ್ಧದ ಸೆಕೆಂಡ್ ಇನ್ನಿಂಗ್ಸ್ಗೆ ನಾಂದಿಹಾಡಿದರು.
ಟ್ರಂಪ್ನನ್ನು ಕೊಂದೇ ತೀರುತ್ತೇವೆ!
ಒಂದು ಕಡೆ ಟ್ರಂಪ್ ಕದನ ವಿರಾಮ ಮೊಟಕುಗೊಳಿಸುತ್ತಿದ್ದಂತೆ ಇನ್ನೊಂದೆಡೆ ಇರಾನ್‌ನಲ್ಲಿ ತಮ್ಮ ಮಾಜಿ ನಾಯಕ ಆಯತೊಲ್ಲಾ ಅಲಿ ಖಮೇನಿಯ ಸಾವಿಗೆ ಕಾರಣನಾದ ಡೊನಾಲ್ಡ್ ಟ್ರಂಪ್ನನ್ನು ಕೊಲ್ಲಲೇಬೇಕು ಎಂಬ ಆಕ್ರೋಶ ಮುಗಿಲು ಮುಟ್ಟಿದೆ.
ಖಮೇನಿಯ ಶವಸಂಸ್ಕಾರದ ಯಾತ್ರೆಯಲ್ಲಿ ಕೂಡ ಟ್ರಂಪ್ನನ್ನು ನಾವು ಕೊಲ್ಲುತ್ತೆವೆ, ಟ್ರಂಪ್ ಸತ್ತರೆ ಮಾತ್ರ ನಮ್ಮ ನಾಯಕ ಸಾವಿಗೆ ನ್ಯಾಯ ಸಿಗುತ್ತದೆ ಎಂಬ ಘೋಷಣೆಗಳು ಕೇಳಿಬಂದಿದ್ದವು.
ನಂತರದ ದಿನದಲ್ಲಿ ಇರಾನ್ ಕೂಡ ತಮ್ಮ ಹಿಟ್ ಲಿಸ್ಟ್ನಲ್ಲಿರುವ 13 ಜನರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಡೊನಾಲ್ಡ್ ಟ್ರಂಪ್ ಸೇರಿದಂತೆ ಬೆಂಜಾಮಿನ್ ನೆತನ್ಯಾಹು, ಜಾರ್ಜಿಯಾ ಮೆಲೋನಿ ಹಾಗೂ ಅಮೆರಿಕ-ಇಸ್ರೇಲ್ನ ಪ್ರಮುಖ ಸೇನಾಧಿಕಾರಿಗಳ ಹೆಸರುಗಳಿದ್ದವು.
ಇಂದು (ಗುರುವಾರ, ಜು.16) ಇರಾನ್‌ನ ಬಿದಿಗಳಲ್ಲಿ ಡೊನಾಲ್ಡ್ ಟ್ರಂಪ್ನನ್ನು ಶವಪೆಟ್ಟಿಗೆ (ಕಾಫಿನ್) ಯಲ್ಲಿ ಮಲಗಿಸಿರುವ ಚಿತ್ರ ಹೊಂದಿರುವ ಬಿಲ್ ಬೋರ್ಡ್ಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಅಂಟಿಸಿ, ಟ್ರಂಪ್ನನ್ನು ನಾವು ಕೊಲ್ಲುತ್ತೆವೆ ಎಂದು ಪರ್ಷಿಯನ್ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಬರೆಯಲಾಗಿದೆ, (ಏಜನ್ಸೀಸ್).