ನಮ್ಮ ಯುವಕರು ರೊಚ್ಚಿಗೆದ್ದರೆ ಪಾಕ್ ಸರ್ಕಾರವೇ ಪತನಗೊಳ್ಳಲಿದೆ: ಮೊಹ್ಸಿನ್ ನಖ್ವಿ
- ಭಾರತದಿಂದ ಪಾಠ ಕಲಿಯಬೇಕಿರುವ ಅವಶ್ಯಕತೆಯಿದೆ
- ನಮ್ಮ ಯುವಕರು ರೊಚ್ಚಿಗೆದ್ದರೆ ಪಾಕ್ ಸರ್ಕಾರವೇ ಪತನಗೊಳ್ಳಲಿದೆ: ಮೊಹ್ಸಿನ್ ನಖ್ವಿ
- ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಗಂಭೀರ ಎಚ್ಚರಿಕೆ
ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿ ಇದೀಗ ಕಷ್ಟದ ಪರಿಸ್ಥಿತಿಯಲ್ಲಿದ್ದು, ಕಾಕ್ರೋಚ್ ಪಾರ್ಟಿ ರೀತಿಯ ಆಂತರಿಕ ದಂಗೆ ನಮ್ಮ ದೇಶದಲ್ಲಿ ನಡೆದರೆ, ರಾಜಕೀಯ ಅಸ್ಥಿರತೆ ತಲೆದೂರಲಿದೆ ಎಂದು ಪಾಕಿಸ್ತಾದ ಆಂತರಿಕ ವ್ಯವಹಾರಗಳ ಸಚಿವ ಮೊಹ್ಸಿನ್ ನಖ್ವಿ (Mohsin Naqvi on CJP Protest) ತಿಳಿಸಿದ್ದಾರೆ.
ಪ್ರಭುತ್ವದ ವಿರುದ್ಧ ಯುವಕರು ಸಂಘಟಿತರಾಗಿ ಬಂಡಾಯವೆದ್ದರೆ, ಅವರನ್ನು ನಿಯಂತ್ರಿಸಲು ನಮ್ಮಲ್ಲಿ ಸಾಧ್ಯವಿಲ್ಲ, ಅವರನ್ನು ನಾವು ಜಿರಳೆಗಳೆಂದು ಅಪಹಾಸ್ಯ ಮಾಡಿದರೆ, ಅವರು ಒಗ್ಗಟ್ಟಾಗಿ ಬಂದರೆ ಆಡಳಿತ ವ್ಯವಸ್ಥೆ ಕುಸಿಯುತ್ತದೆ ಎಂದು ನಖ್ವಿ ಎಚ್ಚರಿಕೆ ನೀಡಿದ್ದಾರೆ.
ನಾವು ಯುವಕರಿಗೆ ಸಹಕರಿಸಬೇಕು!
ಕಳೆದ 70 ವರ್ಷಗಳಿಂದ ನಮ್ಮ ಆಡಳಿತ ಆರ್ಥಿಕ ದಿವಾಳಿತನವನ್ನು ಅನುಭವಿಸುತ್ತಲೇಯಿದೆ. ನಮ್ಮ ಯುವಕರಿಗೆ ನಿಜವಾಗಿ ಏನು ಬೇಕಿದೆ ಅದನ್ನು ಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಇದು ಹೀಗೆ ಮುಂದುವರಿದರೆ, ಭಾರತದಲ್ಲಿ ತಲೆ ಎತ್ತಿದ್ದಂತೆ ನಮ್ಮಲ್ಲಿ ಕಾಕ್ರೋಚ್ಗಳು ಬಂಡಾಯವೆದ್ದರೆ ದೇಶದ ಅಸ್ತಿತ್ವಕ್ಕೆ ಮಾರಕವಾಗಲಿದೆ ಎಂದಿದ್ದರೆ.
ಆದ್ದರಿಂದ ಇನ್ನು ಮುಂದಾದರೂ ನಾವು ನಮ್ಮ ಯುವ ಸಮೂದಾಯಕ್ಕೆ ಏನು ಬೇಕು ಅದನ್ನು ಕೊಡಬೇಕು. ಶಿಕ್ಷಣ, ಉದ್ಯೋಗ ಕ್ಷೇತ್ರಗಳಿಗೆ ಹೆಚ್ಚಿನ ಒತ್ತನ್ನು ನೀಡಿದರೆ ಮಾತ್ರ ಯುವಕರಲ್ಲಿ ದೇಶಪ್ರೇಮ ಇರುತ್ತದೆ. ಇಲ್ಲದಿದ್ದರೆ ಅವರೇ ದೇಶದ ವಿರುದ್ಧ ತಿರುಗಿ ಬೀಳುತ್ತಾರೆ. ಇದನ್ನು ತಪ್ಪಿಸುವ ಜವಾಬ್ದಾರಿ ನನನ್ನು ಸೇರಿ, ನಮ್ಮ ಸರ್ಕಾರದ ಮೇಲಿದೆ ಎಂದು ಹೇಳಿದ್ದಾರೆ.
ಭಾರತವನ್ನು ನೋಡಿ ನಾವು ಕಲಿಯಬೇಕು!
ನಮ್ಮ ಪಕ್ಕದ ದೇಶ ಭಾರತದಲ್ಲಿ ಪರೀಕ್ಷಾ ಅಕ್ರಮ ನಡೆದ ಹಿನ್ನಲೆಯಲ್ಲಿ ಅಲ್ಲಿನ ಯುವಕರು, ಕಾಕ್ರೋಚ್ ಜನತಾ ಪಾರ್ಟಿ ಎಂಬ ಪಕ್ಷವನ್ನು ಕಟ್ಟಿಕೊಂಡು, ಅಲ್ಲಿನ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಯಶಸ್ವಿಯಾಗಿದ್ದಾರೆ. ಆದರೆ ನಮ್ಮಲ್ಲಿ ಈ ರೀತಿಯ ದಂಗೆ ನಡೆದರೆ ನಾವು ಅವರನ್ನು ನಿಭಾಯಿಸಲು ಎಷ್ಟು ಸಕ್ಷಮವಾಗಿದ್ದೇವೆ? ಎಂದು ಅವಲೋಕಿಸುವುದು ಉತ್ತಮ ಎಂದಿದ್ದಾರೆ, (ಏಜನ್ಸೀಸ್).