ನಾಲ್ಕು ವರ್ಷವಾದರೂ ಮುಗಿಯದ ರಷ್ಯಾ-ಉಕ್ರೇನ್ ಯುದ್ಧ
- ನಾಲ್ಕು ವರ್ಷವಾದರೂ ಮುಗಿಯದ ರಷ್ಯಾ-ಉಕ್ರೇನ್ ಯುದ್ಧ
- ರಷ್ಯಾ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ
- 13 ಮಂದಿ ಸಾವನ್ನಪ್ಪಿದ್ದಾರೆ ಮತ್ತು 75ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ
ಮಾಸ್ಕೋ: ಕಳೆದ ನಾಲ್ಕು ವರ್ಷಗಳಿಂದ ಜಾಲ್ತಿಯಲ್ಲಿರುವ ರಷ್ಯಾ-ಉಕ್ರೇನ್ ಯುದ್ಧ (Russia Ukraine War) ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಇಂದು (ಸೋಮವಾರ, ಆ.10) ಉಕ್ರೇನ್, ಟಾಟ್ರಸ್ತಾನ್ದಲ್ಲಿರುವ ರಷ್ಯಾದ ತೈಲ ಸಂಸ್ಕರಣಾ ಘಟಕದ ಮೇಲೆ ಡ್ರೋನ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಸುಮಾರು 13 ಜನ ಮೃತಪಟ್ಟಿದ್ದು, 75 ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆಂದು ವರೆದಿಯಾಗಿದೆ.
ನಿಜ್ನೆಕಾಮ್ಸ್ಕ್ (Nizhnekamsk) ತೈಲ ಸಂಸ್ಕಾರಣಾ ಘಟಕದ ಮೇಲೆ ನಡೆದಿರುವ ಈ ಭೀಕರ ಡ್ರೋನ್ ದಾಳಿ, ಇಷ್ಟು ವರ್ಷಗಳಲ್ಲಿ ಉಕ್ರೇನ್ ನಡೆಸಿರುವ ಅತ್ಯಂತ ರಣಭೀಕರ ದಾಳಿಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಲಾಗುತ್ತಿದೆ.
13 ಸಾವು; 75 ಗಾಯ!
ರಷ್ಯಾದ ಕೇಂದ್ರ ತೈಲ ಸಂಸ್ಕರಣಾ ಘಟಕವನ್ನು ಗುರಿಯಾಗಿಸಿಕೊಂಡು ನಡೆದಿರುವ ಈ ದಾಳಿಯಲ್ಲಿ ಸುಮಾರು 13 ಜನ ಸಾವನ್ನಪ್ಪಿದ್ದು, 75 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಷ್ಯಾ ಸರ್ಕಾರ ತಿಳಿಸಿದೆ.
ರಷ್ಯಾದ ಸೇನೆ ಹೇಳುವ ಪ್ರಕಾರ, ಉಕ್ರೇನ್ನಿಂದ ಬಂದಿರುವ ಡ್ರೋನ್ಗಳಲ್ಲಿ ಸುಮಾರು 450 ಕ್ಕೂ ಮಿಗಿಲಾದ ಡ್ರೋನ್ಗಳನ್ನು ರಷ್ಯಾ ಸೇನೆ ಹೊಡೆದುರಳಿಸಿದೆ. ಹಾಗೆಯೇ ಪ್ರತ್ಯುತ್ತರವಾಗಿ 125 ಡ್ರೋನ್ಗಳನ್ನು ಉಕ್ರೇನ್ ಮೇಲೆ ಪ್ರಯೋಗಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ!
ಈ ಘಟನೆಯ ಹಿಂದಿನ ದಿನ ರಷ್ಯಾ, ಉಕ್ರೇನ್ ಗಡಿಯಲ್ಲಿ ಆರ್ಟಿಲರಿ ಗನ್ ಮೂಲಕ ದಾಳಿ ನಡೆಸಿ ಸುಮಾರು 5 ಉಕ್ರೇನ್ ನಾಗರಿಕರನ್ನು ಹತ್ಯೆಮಾಡಿದೆ ಎಂದು ವರದಿಯಾಗಿತ್ತು. ಈಗ ಈ ಘಟನೆ ನಡೆದ ಮಾರನೇ ದಿನ ಉಕ್ರೇನ್ ರಷ್ಯಾ ಮೇಲೆ ಡ್ರೋನ್ ದಾಳಿ ನಡೆಸಿದೆ, (ಏಜನ್ಸೀಸ್).