ಮಾಸ್ಕೋದಲ್ಲಿ ಸುರಿದ ಭಯಾನಕ ಕಪ್ಪು ತೈಲ ಮಳೆ
- ರಷ್ಯಾದ ಅತಿದೊಡ್ಡ ತೈಲಾಗಾರದ ಮೇಲೆ ಉಕ್ರೇನ್ ಡ್ರೋನ್ ದಾಳಿ
- ತೈಲ ಸಂಸ್ಕರಣಾ ಘಟಕ ಧ್ವಂಸ
- ಮಾಸ್ಕೋದಲ್ಲಿ ಸುರಿದ ಭಯಾನಕ ಕಪ್ಪು ತೈಲ ಮಳೆ
- ದಾಳಿಯಲ್ಲಿ ಮಕ್ಕಳು-ಮಹಿಳೆ ಸೇರಿ 17 ಜನ ಸಾವು
ಮಾಸ್ಕೋ: ನಾಲ್ಕು ತಿಂಗಳಿನ ಹಿಂದೆ ಆರಂಭವಾದ ಇರಾನ್- ಅಮೆರಿಕ ಸಂಘರ್ಷ, ಶಾಂತಿ-ಮಾತುಕತೆ ಮೂಲಕ ತಣ್ಣಗಾದರೂ ನಾಲ್ಕು ವರ್ಷದಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮಾತ್ರ ಸಮಾಪ್ತಿಯಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.
ಗುರುವಾರ (ಜೂ.18) ರಷ್ಯಾದ ರಾಜಧಾನಿ ಮಾಸ್ಕೋನಲ್ಲಿರುವ ತೈಲಾಗಾರದ ಮೇಲೆ ಉಕ್ರೇನ್ ವೈಮಾನಿಕ ದಾಳಿ ನಡೆಸಿದ ಪರಿಣಾಮ ರಷ್ಯಾದಾದ್ಯಂತ ಕಪ್ಪು ಬಣ್ಣದ ತೈಲ ಮಳೆ (Black Rain in Moscow) ಬಿದ್ದಿದ್ದೆ ಎಂದು ವರದಿಯಾಗಿದೆ.
ರಷ್ಯಾದ ಅತಿ ದೊಡ್ಡ ತೈಲ ಸಂಸ್ಕೃರಣಾ ಘಟಕವಾದ ಕಪೋಟ್ನ್ಯಾ(Kapotnya) ಮೇಲೆ ಉಕ್ರೇನ್ ದಾಳಿ ಮಾಡಿದ್ದು, ಈ ತೈಲಾಗಾರದಲ್ಲಿಯೇ ದೇಶದ ಒಟ್ಟು ಶೇ. 40 ರಷ್ಟು ತೈಲ ಉತ್ಪಾದನೆ ಆಗುತ್ತಿತ್ತು ಎಂದು ಹೇಳಲಾಗುತ್ತಿದೆ.
ನಗರದಲ್ಲಿ ಕಪ್ಪು ಮಳೆ!
ಉಕ್ರೇನ್, ರಷ್ಯಾದ ತೈಲ ಸಂಸ್ಕೃರಣಾ ಘಟಕದ ಮೇಲೆ ದಾಳಿ ಮಾಡಿದ ಕೆಲ ಸಮಯದ ನಂತರ ನಗರದಲ್ಲಿ ಮಳೆ ಬಿದ್ದಿದ್ದೆ. ಆದರೆ ಈ ಮಳೆಯ ಬಣ್ಣ ಕಪ್ಪು ಬಣ್ಣದಲ್ಲಿದ್ದು, ಇದು ತೈಲ ಮಿಶ್ರಿತ ಮಳೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.
ಕಳೆದ ನಾಲ್ಕು ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷವನ್ನು ನೋಡುತ್ತಿರುವ ಜನ, ಈ ಕಪ್ಪು ಬಣ್ಣದ ಮಳೆಯನ್ನು ಕಂಡು ಕಕ್ಕಾಬಿಕ್ಕಿ ಆಗಿದ್ದಾರೆ.
ತೈಲಾಗಾರದ ಸುತ್ತಲಿನ ಪ್ರದೇಶದಲ್ಲಿ ಈ ಕಪ್ಪು ಬಣ್ಣದ ತೈಲ ಮಿಶ್ರಿತ ಮಳೆ ಕಂಡುಬಂದಿದ್ದು, ಜನರಲ್ಲಿ ಒಂದು ರೀತಿಯ ಭಯದ ವಾತಾವರಣವನ್ನು ಸೃಷ್ಟಿಸಿದೆ. ಈ ಘಟನೆ ಬೆನ್ನಲ್ಲೆ ರಷ್ಯಾ ಸರ್ಕಾರವು ತನ್ನ ನಾಗರಿಕರಿಗೆ ಮನೆಯಿಂದ ಆಚೆ ಬರದಂತೆ, ಕಿಟಿಕಿ ಬಾಗಿಲನ್ನು ಭದ್ರ ಪಡಿಸಿಕೊಳ್ಳುವಂತೆ ನಿದರ್ದೇಶನ ನೀಡಿದೆ.
ನಾವು ದಾಳಿಯನ್ನು ತಡೆದಿದ್ದೆವೆ!
ಈ ಘಟನೆಗೆ ಉತ್ತರಿಸಿರುವ ರಷ್ಯಾ ಸರ್ಕಾರ, ನಮ್ಮ ಮೇಲೆ ಉಕ್ರೇನ್ ಸುಮಾರು 555 ಡ್ರೋನ್ಗಳನ್ನು ಉಡಾಯಿಸಿತ್ತು. ಅದರಲ್ಲಿ ಸುಮಾರು 200 ಡ್ರೋನ್ಗಳು ಮಾಸ್ಕೋ ಮೇಲೆ ಬೀಳಲಿತ್ತು.
ನಾವು ನಮ್ಮ ರಕ್ಷಣಾ ಸಾಮರ್ಥ್ಯವನ್ನು ಬಳಿಸಿಕೊಂಡು ಬಹಳಷ್ಟು ಡ್ರೋನ್ಗಳನ್ನು ಕೆಡವಿದ್ದೆವೆ, ಆದರೆ ಕೆಲ ಡ್ರೋನ್ಗಳು ತೈಲ ಸಂಸ್ಕರಣಾ ಘಟಕಕ್ಕೆ ಬಡಿದಿವೆ. ಇನ್ನು ಕೆಲವು ನಗರದ ಮೇಲೆ ಬಿದ್ದಿದ್ದು, ಇದರಲ್ಲಿ ಸುಮಾರು 17 ಜನ ಮೃತ ಪಟ್ಟಿದ್ದಾರೆಂದು ಮಾಹಿತಿ ಹಂಚಿಕೊಂಡಿದೆ. ನಾವು ಈ ದಾಳಿಯನ್ನು ಖಂಡಿತ ಸಹಿಸುವುದಿಲ್ಲ, ಆದಷ್ಟು ಬೇಗ ನಮ್ಮ ಜನರ ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೆವೆಂದು ರಷ್ಯಾ, ಉಕ್ರೇನ್ ಮೇಲೆ ದಾಳಿ ನಡೆಸುವುದಾಗಿ ಮುನ್ನೆಚ್ಚರಿಕೆ ನೀಡಿದೆ, (ಏಜನ್ಸೀಸ್).