ಮಧ್ಯಪ್ರಾಚ್ಯ ಯುದ್ಧದಲ್ಲಿ ಟ್ರಂಪ್ ತೆಗೆದುಕೊಂಡ ನಿರ್ಧಾರಗಳನ್ನು ವಿರೋಧಿಸುತ್ತಿರುವ ಅಮೆರಿಕದ ಸಂಸದರು
- ಮಧ್ಯಪ್ರಾಚ್ಯ ಯುದ್ಧದಲ್ಲಿ ಟ್ರಂಪ್ ತೆಗೆದುಕೊಂಡ ನಿರ್ಧಾರಗಳನ್ನು ವಿರೋಧಿಸುತ್ತಿರುವ ಅಮೆರಿಕದ ಸಂಸದರು
- ಯುದ್ಧ ಆರಂಭಿಸಿ ಸೋತ ಮೊದಲ ಅಧ್ಯಕ್ಷ ಟ್ರಂಪ್: ಜೇಕ್ ಆಚಿನ್‌ಕ್ಲಾಸ್
- ಟ್ರಂಪ್ ಒಬ್ಬ ಹುಚ್ಚ: ಮಾರ್ಜೋರಿ ಟೇಲರ್ ಗ್ರೀನ್
ವಾಷಿಂಗ್ಟನ್: ಕಳೆದ ಒಂದು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ನಡೆಯುತ್ತಿದ್ದು, ಇದು ದಿನಕಳೆದಂತೆ ಶಾಂತ ರೂಪವನ್ನು ತಾಳುವ ಬದಲಿಗೆ ವಿಕೋಪಕ್ಕೆ ದಾರಿ ಮಾಡಿಕೊಡುತ್ತಿದೆ.
ಇರಾನ್ ಮೇಲಿನ ದಾಳಿಯ ಕುರಿತಾದ ಹಾಗೂ ಯುದ್ಧದ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ಈಗ ಅಮೆರಿಕದ ಸಂಸದರಲ್ಲಿಯೇ ಅಸಮಾಧಾನ ಉಂಟಾಗಿರುವುದು ಕಂಡು ಬರುತ್ತಿದೆ.
ಅಧ್ಯಕ್ಷ ಟ್ರಂಪ್ ಈ ಯುದ್ಧದಲ್ಲಿ ಸೋತಿದ್ದಾರೆ
ಅಮೆರಿಕದ ಇತಿಹಾಸದಲ್ಲಿ ಯುದ್ಧವನ್ನು ಆರಂಭಿಸಿ ಸೋತಿರುವ ಏಕೈಕ ಅಧ್ಯಕ್ಷನೆಂದರೆ ಅದು ಡೊನಾಲ್ಡ್ ಟ್ರಂಪ್ ಎಂದು ಅಮೆರಿಕದ ಕಾಂಗ್ರೆಸ್ ಸದಸ್ಯ ಜೇಕ್ ಆಚಿನ್‌ಕ್ಲಾಸ್ ಹೇಳಿದ್ದಾರೆ.
ಕಾಂಗ್ರೆಸ್ ಈ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಬೇಕು
ಮಧ್ಯಪ್ರಾಚ್ಯದಲ್ಲಿನ ಸಂಘರ್ಷವನ್ನು ಟ್ರಂಪ್ ನಿರ್ವಹಿಸುತ್ತಿರುವ ರೀತಿಯನ್ನು ಟೀಠಿಸಿರುವ ಅಮೆರಿಕದ ಸೆನೆಟರ್ ಬರ್ನಿ ಸ್ಯಾಂಡರ್ಸ್ ಎಕ್ಸ್ (ಟ್ವಿಟರ್) ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಒಬ್ಬ ಅಪಾಯಕಾರಿ ಮನಸ್ಥಿತಿಯುಳ್ಳ ವ್ಯಕ್ತಿಯಾಗಿದ್ದಾರೆ. ಭಾನುವಾರ (ಏ.5) ಅಧ್ಯಕ್ಷ ಟ್ರಂಪ್ ಇರಾನ್ ಮೇಲಿನ ಯುದ್ಧವನ್ನು ಬೇಗ ಕೊನೆಗೊಳಿಸಬೇಕೆಂದರೆ, ಕಾಂಗ್ರೆಸ್ ನಿರ್ಧಾರ ಕೈಗೊಳ್ಳಬೇಕೆಂದು ಹೇಳಿದ್ದಾರೆ, ಈ ವ್ಯಕ್ತಿಯಿಂದ ನಾವೇನು ಆಶಿಸಲು ಸಾಧ್ಯ ಎಂದು ಬರ್ನಿ ಬರೆದುಕೊಂಡಿದ್ದಾರೆ.
ಟ್ರಂಪ್ ಅಪಾಯಕಾರಿ ವ್ಯಕ್ತಿ: ಚಕ್ ಶುಮರ್
ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹುಚ್ಚನಂತೆ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ವಿಶ್ವಕ್ಕೆ ಯುದ್ಧದ ಬೆದರಿಕೆಯನ್ನು ಒಡ್ಡುತ್ತಿದ್ದಾರೆ ಹಾಗೆಯೇ ತಮ್ಮ ಸಹದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕುತ್ತಿದ್ದಾರೆ. ಈ ನಮ್ಮ ಅಧ್ಯಕ್ಷ ಅತ್ಯಂತ ಅಪಾಯಕಾರಿ ವ್ಯಕ್ತಿ ಆಗಿದ್ದಾರೆ ಎಂದು ಚಕ್ ಶುಮರ್ ಹೇಳಿದ್ದಾರೆ.
ಟ್ರಂಪ್ ಒಬ್ಬ ಹುಚ್ಚ: ಮಾರ್ಜೋರಿ ಟೇಲರ್ ಗ್ರೀನ್
ಟ್ರಂಪ್ ಮತ್ತು ಅವನ ಆಡಳಿತ ಸಹಾಯಕರು ಮೊದಲು ದೇವರಲ್ಲಿ ಕ್ಷಮೆ ಕೇಳಬೇಕು. ಟ್ರಂಪ್ ಈ ಯುದ್ಧದಿಂದ ಸಂಪೂರ್ಣವಾಗಿ ಹುಚ್ಚರಾಗಿದ್ದಾರೆ ಎಂದು ಟ್ರಂಪ್ನ ಮಾಜಿ ಸಹಾಯಕಿ ಮತ್ತು ಕಾಂಗ್ರೆಸ್ ಸಂಸದೆಯಾಗಿದ್ದ ಮಾರ್ಜೋರಿ ಟೇಲರ್ ಗ್ರೀನ್ ಕಿಡಿ ಕಾರಿದ್ದಾರೆ,(ಏಜನ್ಸೀಸ್).