ಟೆಹ್ರಾನ್: ಬುಧವಾರ (ಸೆ. 30) ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ (flydubai) ವಿಮಾನ FZ1073 ರ ಕಾಕ್‌ಪಿಟ್‌ನಲ್ಲಿ ನಡೆದ ಕರಾಳ ಘಟನೆಯೊಂದು ಇಡೀ ವಿಶ್ವವೇ ಬೆಚ್ಚಿಬೀಳುವಂತೆ ಮಾಡಿತ್ತು. ವಿಮಾನದ ಕ್ಯಾಪ್ಟನ್ ಆಗಿದ್ದ ಭಾರತ ಮೂಲದ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ಓಮನ್ ಮೂಲದ ಸಹ-ಪೈಲಟ್ ಚಾಕುವಿನಿಂದ ದಾಳಿ ಮಾಡಿದ್ದ.
ಹಲ್ಲೆ ನಡೆಸಿ, ವಿಮಾನವನ್ನು ತನ್ನ ಹತೋಟಿಗೆ ತೆಗೆದುಕೊಂಡು, ತನ್ನನ್ನು ಸೇರಿದಂತೆ ಆ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೊಲ್ಲುವುದು ಆ ವ್ಯಕ್ತಿಯ ಉದ್ದೇಶವಾಗಿತ್ತೆಂದು ಹೇಳಲಾಗುತ್ತಿದೆ. ಆದರೆ ಕ್ಯಾಪ್ಟನ್ ಮಚ್ಚಾರ್ ಅವರ ಸಾಹಸದ ಫಲವಾಗಿ ವಿಮಾನ, ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿ ವಿಮಾದಲ್ಲಿದ್ದ ಜನರ ಪ್ರಾಣ ಉಳಿದಿದೆ.
ಆದರೆ, ಈ ಭಯೋತ್ಪಾದಕ ಕೃತ್ಯ ಏಕೆ ನಡೆಯಿತು? ಎಂಬ ಗಂಭೀರ ಪ್ರಶ್ನೆ ಎಲ್ಲರ ಮನದಲ್ಲಿ ಉದ್ಭವಿಸಿದೆ. ಇದಕ್ಕೆ, ಅಮೆರಿಕ ಅಧ್ಯಕ್ಷ ಈ ದಾಳಿಯ ಹಿಂದೆ ಇರಾನ್ ದೇಶದ ಕೈವಾಡವಿದೆ ಎಂದು ಆರೋಪಿಸಿದ್ದು, ತಾನು ಸ್ವತಂತ್ರ ತನಿಖೆ ನಡೆಸಲಾಗುತ್ತಿದೆ ಎಂದು ಟ್ರಂಪ್ ಹೇಳಿದ್ದರು.
ಈ ದಾಳಿ ನಂತರ ಪತ್ರಿಕಾಗೋಷ್ಟಿ ನಡೆಸಿದ್ದ, ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಕೂಡ, ಈ ದಾಳಿಯ ಹಿಂದೆ ಯಾರಿದ್ದರೆಂದು ಆದಷ್ಟು ಬೇಗ ಪತ್ತೆ ಹಚ್ಚುತ್ತೇವೆ. ಭಾರತದ ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ ಹಾಗೂ ಈ ದಾಳಿ ನಡೆಸಿದ ವ್ಯಕ್ತಿವೊಬ್ಬ ಇಸ್ಲಾಮಿಕ್ ತೀವ್ರಗಾಮಿ ಎಂದು ಜರಿದಿದ್ದರು. ಆದರೆ, ತನ್ನ ಮೇಲೆ ಆರೋಪಗಳ ಸುರಿಮಳೆ ಅಬ್ಬರಿಸಿದ ಹಿನ್ನಲೆ ಇರಾನ್, ಇದಕ್ಕೆ ನೀಡಿರುವ ಕೌಂಟರ್ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.
ಜಾಗತಿಕವಾಗಿ ಈ ಫ್ಲೈದುಬೈ ವಿಮಾನದ ಘಟನೆ ವರದಿಯಾಗುತ್ತಿದ್ದಂತೆ, ಇರಾನಿನ ಟಿವಿ ಚಾಲೆನ್ವೊಂದು ಎಪಿಸೋಡ್ನ್ನು ಬಿಡುಗಡೆಮಾಡಿದ್ದು, ಅದರಲ್ಲಿ ಇಂದು ನಡೆದಿರುವ ವಿಮಾನ ಹೈಜಾಕ್ಗೆ ಮತ್ತು ಇರಾನ್ಗೆ ಯಾವುದೇ ಸಂಬಂಧವಿಲ್ಲ, ಇದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಾಮಿನ್ ನೆತನ್ಯಾಹು ಹಾಗೂ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮಾಡುತ್ತಿರುವ ಎಲೆಕ್ಷನ್ ಗಿಮಿಕ್ ಎಂದಿದೆ.
ಮುಂದಿನ ವರ್ಷ ಇಸ್ರೇಲ್ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆದರೆ ಅಲ್ಲಿಯ ಜನರಿಗೆ ನೆತನ್ಯಾಹು ಆಡಳಿತ ಸಂತೃಪ್ತಿಯನ್ನು ತಂದಿಲ್ಲ. ಹೀಗಾಗಿ ನೆತನ್ಯಾಹು, ಜನರಲ್ಲಿ ತನ್ನತ್ತ ಸಹಾನುಭೂತಿ ಮೂಡಲು ಹಾಗೂ ಇಸ್ಲಾಂ ವಿರುದ್ಧ ಜನರಲ್ಲಿ ದ್ವೇಷ ಹೆಚ್ಚಾಗಲು ಅಂತೆಯೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನನೆ ಹೆಚ್ಚಿಸಲು ಈ ಡ್ರಾಮಾ ಮಾಡಿದ್ದಾರೆಂದು ಗಂಭೀರ ಆರೋಪವನ್ನು ಮಾಡಿದೆ.
ಇರಾನ್ ಮಾಧ್ಯಮದಿಂದ ಈ ರೀತಿಯ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಸ್ರೇಲ್ನ ರಾಯಭಾರ ಕಚೇರಿ ಸಕ್ರಿಯವಾಗಿದೆ. ಯಹೂದಿಗಳು ಈ ರೀತಿಯ ನೀಚ ಕೆಲಸವನ್ನು ಎಂದಿಗೂ ಮಾಡುವುದಿಲ್ಲ, ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ವರದಿ ಹೊರಬಿದ್ದ ಮೇಲೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದೆ.
ಈ ಫ್ಲೈದುಬೈ ವಿಮಾನದ ಘಟನೆನೆ ಪ್ರತಿಕ್ರಿಯೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾನು ವೈಯಕ್ತಿಕವಾಗಿ ಹಾಗೂ ಅಮೆರಿಕದ ಪರವಾಗಿ ಈ ಘಟನೆಯನ್ನು ಖಂಡಿಸುತ್ತೆನೆ. ಅದಕ್ಕಾಗಿ ಸ್ವತಂತ್ರ ತನಿಖೆಗೆ ಆದೇಶವನ್ನು ಕೂಡ ನೀಡಿದ್ದೆನೆ ಎಂದಿದ್ದಾರೆ. ಆಗ ಪತ್ರಕರ್ತರು ನಿಮಗೆ ಯಾರ ಮೇಲಾದರೂ ಅನುಮಾನವಿದೆಯೇ? ಇದರಲ್ಲಿ ಇರಾನ್ ಪಾತ್ರವಿದೆಯೇ? ಎಂದು ಕೇಳಿದಾಗ, ಇರಾನ್ ಈ ಕೆಲಸ ಮಾಡಿದ್ದರೂ ಇರಬಹುದು. ಆದರೆ ತನಿಖೆ ನಡೆದು ವರದಿ ಬರುವವರೆಗೆ ಏನೂ ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಇರಾನ್ಅನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ, (ಏಜೆನ್ಸೀಸ್).