ಲಷ್ಕರ್-ಎ-ತೋಯ್ಬಾ ಕಮಾಂಡರ್ ರಿಜ್ವಾನ್ ಹನೀಫ್‌ನ ಸ್ಫೋಟಕ ವಿಡಿಯೋ ವೈರಲ್
- ಪಾಕಿಸ್ತಾನದಲ್ಲಿ 'ಅಪರಿಚಿತ ಬಂದೂಕುಧಾರಿ' ಗುಂಡಿಗೆ 30ಕ್ಕೂ ಅಧಿಕ ಲಷ್ಕರ್ ಉಗ್ರರು ಹತ್ಯೆ!
- ಲಷ್ಕರ್-ಎ-ತೋಯ್ಬಾ ಕಮಾಂಡರ್ ರಿಜ್ವಾನ್ ಹನೀಫ್‌ನ ಸ್ಫೋಟಕ ವಿಡಿಯೋ ವೈರಲ್
- ನಮ್ಮವರನ್ನು ಗುರಿಯಾಗಿಸಿ ಈ ಕಾರ್ಯಚರಣೆ ನಡೆಯುತ್ತಿದೆ
ನವದೆಹಲಿ: ಕೆಲ ತಿಂಗಳುಗಳ ಹಿಂದೆ ಬಿಡುಗಡೆಯಾಗಿದ್ದ ಬಾಲಿವುಡ್ ಸಿನಿಮಾ ಧುರಂಧರ್ನಲ್ಲಿ ಭಾರತದ ಗೂಢಚರರು 'ಅಪರಿಚಿತ ಬಂದೂಕುಧಾರಿ' ಗಳಾಗಿ ಪಾಕಿಸ್ತಾನದಲ್ಲಿರುವ ಉಗ್ರರನ್ನು ಕೊಲ್ಲುವ ದೃಶ್ಯಗಳನ್ನು ತೋರಿಸಿದ್ದರು.
ಈಗ ಆ ಸಿನಿಮಾದಲ್ಲಿ ತೋರಿಸಿದಂತೆ, ಅಪರಿಚಿತ ಬಂದೂಕುಧಾರಿಗಳು ಕುಖ್ಯಾತ ಭಯೋತ್ಪಾದನಾ ಸಂಘಟನೆಯಾದ ಲಷ್ಕರ್-ಎ- ತೊಯ್ಬಾದ ಸುಮಾರು 30 ಕ್ಕೂ ಅಧಿಕ ಉಗ್ರರನ್ನು ಕೊಂದಿದ್ದಾರೆಂದು, ಖುದ್ದು ಈ ಸಂಘಟನೆಯ ಭಯೋತ್ಪಾದಕ (Rizwan Hanif on Unknown Gunman) ಒಪ್ಪಿಕೊಂಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ.
ನಮ್ಮವರನ್ನು ಕೊಲ್ಲಲಾಗುತ್ತಿದೆ!
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋನಲ್ಲಿ, ಲಷ್ಕರ್ ಸಂಘಟನೆಯ ಭಯೋತ್ಪಾದಕ ರಿಜ್ವಾನ್ ಹನೀಫ್, ಕಳೆದ ನಾಲ್ಕು ವರ್ಷಗಳಿಂದ ನಮ್ಮ ಸುಮಾರು 30 ಕ್ಕೂ ಹೆಚ್ಚು ಜನರನ್ನು ಅಪರಿಚಿತ ಬಂದೂಕುಧಾರಿಗಳ ಕೈಯಲ್ಲಿ ಸಾವನ್ನಪ್ಪಿದ್ದಾರೆ.
2008 ರಲ್ಲಿ ಮುಂಬೈ ಮೇಲೆ ಭಯೋತ್ಪಾದಕ ಕೃತ್ಯ ನಡೆಸಿ ಸುಮಾರು 166 ಜನರ ಸಾವಿಗೆ ಕಾರಣವಾಗಿರುವ ಈ ಸಂಘಟನೆಯ ಬಹುತೇಕ ಸದಸ್ಯರನ್ನು ಪೇಶಾವರ, ರಾವಲ್ಪಿಂಡಿ, ಕರಾಚಿ, ರಾವಲ್ಕೋಟ್ ಹಾಗೂ ಮುಜಾಫರ್ಬಾದ್ನಲ್ಲಿ ಹತ್ಯೆ ಮಾಡಲಾಗುತ್ತಿದೆ ಎಂದು ಹನೀಫ್ ವಿಡಿಯೋನಲ್ಲಿ ಹೇಳಿದ್ದಾರೆ.
ಈ ವಿಡಿಯೋನಲ್ಲಿ ಮಾತನಾಡಿರುವ ಉಗ್ರ ರಿಜ್ವಾನ್ ಹನೀಫ್ ಕೂಡ ಭಾರತದ ಹಿಟ್ ಲಿಸ್ಟ್ನಲ್ಲಿದ್ದು, ಇವನ ಮೇಲೆ ವಾರೆಂಟ್ಅನ್ನು ಜಾರಿ ಮಾಡಲಾಗಿದೆ. ಆದರೆ ಪಾಕಿಸ್ತಾನದ ನೆಲದಲ್ಲಿ ನಡೆಯುತ್ತಿರುವ ಈ ಅಪರಿಚಿತ ಬಂದೂಕುಧಾರಿ ಕಾರ್ಯಾಚರಣೆಯಲ್ಲಿ ಭಾರತದ ಯಾವುದೇ ಪಾತ್ರವಿಲ್ಲ ಎಂದು ಗುಪ್ತಚರ ಇಲಾಖೆ ಸ್ಪಷ್ಟ ಪಡಿಸಿದೆ, (ಏಜನ್ಸೀಸ್).