Donald Trump | ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್
ನ್ಯೂಯಾರ್ಕ್: ಆ ಸುಂದರವಾದ ಮುಖ ಮತ್ತು ನಿಲ್ಲದ ತುಟಿಗಳೊಂದಿಗೆ, ಸಣ್ಣ ಮೆಷಿನ್ ಗನ್ ನಂತೆ ಎನ್ನುವ ಮೂಲಕ ತಮ್ಮ 28 ವರ್ಷದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ವಿಲಕ್ಷಣವಾಗಿ ಹೊಗಳಿದ್ದಾರೆ.
ತುಟಿಗಳು ಪುಟ್ಟ ಮೆಷಿನ್ ಗನ್ ತರಹ: ಟ್ರಂಪ್
ಈ ಬಗ್ಗೆ ಪೆನ್ಸಿಲ್ವೇನಿಯಾದಲ್ಲಿ ನಡೆದ ಱಲಿಯಲ್ಲಿ ಮಾತನಾಡಿದ ಟ್ರಂಪ್, ನಾವು ಇಂದು ನಮ್ಮ ಸೂಪರ್‌ಸ್ಟಾರ್ ಕ್ಯಾರೋಲಿನ್‌ಳನ್ನೂ ಕರೆತಂದಿದ್ದೇವೆ. ಅವರು ಅದ್ಭುತವಲ್ಲವೇ? ಕ್ಯಾರೋಲಿನ್ ಅದ್ಭುತವೇ? ಎಂದು ನೆರದಿದ್ದ ಗುಂಪನ್ನು ಉದ್ದೇಶಿಸಿ ಹೇಳಿದ್ದಾರೆ.
ನಂತರ, ಮುಂದುವರೆದು ಮಾತನಾಡಿದ ಟ್ರಂಪ್, ಲೀವಿಟ್ ಅವರ ನೋಟ ಮತ್ತು ಆತ್ಮವಿಶ್ವಾಸವನ್ನು ಹೊಗಳಿದ್ದಾರೆ. ಅವರು ತನಗಿಂತ 50 ವರ್ಷಗಳಿಗಿಂತ ಹೆಚ್ಚು ಚಿಕ್ಕವರು ಎಂಬ ಹೇಳಿಕೆ ಎಲ್ಲ ಗಮನ ಸೆಳೆದಿದೆ.
ನಿಮಗೆ ಗೊತ್ತಾ, ಲಿವಿಟ್ ದೂರದರ್ಶನದಲ್ಲಿ ಬಂದಾಗ, ಫಾಕ್ಸ್, ನನ್ನ ಪ್ರಕಾರ, ಅವರು ಪ್ರಾಬಲ್ಯ ಸಾಧಿಸುತ್ತಾರೆ. ಅಲ್ಲದೆ, ಅವಳು ಆ ಸುಂದರವಾದ ಮುಖ ಮತ್ತು ನಿಲ್ಲದ ತುಟಿಗಳೊಂದಿಗೆ, ಸಣ್ಣ ಮೆಷಿನ್ ಗನ್ ನಂತೆ ಮಾತನಾಡಿತ್ತಾಳೆ ಟ್ರಂಪ್ ವಿಲಕ್ಷಣವಾಗಿ ಶ್ಲಾಘಿಸಿದ್ದಾರೆ.
ಲಿವಿಟ್ಗೆ ಯಾವುದೇ ಭಯವಿಲ್ಲ. ಏಕೆಂದರೆ ನಮಗೆ ಸರಿಯಾದ ನೀತಿ ಇದೆ. ಮಹಿಳಾ ಕ್ರೀಡೆಗಳಲ್ಲಿ ಪುರುಷರಿಲ್ಲ. ನಾವು ಎಲ್ಲರಿಗೂ ಟ್ರಾನ್ಸ್ಜೆಂಡರ್‌ಗಳನ್ನು ಮಾರಾಟ ಮಾಡಬೇಕಾಗಿಲ್ಲ, ಮತ್ತು ಇಡೀ ಜಗತ್ತು ಜೈಲುಗಳಿಂದ ಮತ್ತು ಬೇರೆಡೆಯಿಂದ ನಮ್ಮ ದೇಶಕ್ಕೆ ಬರಲು ಅನುಮತಿಸಲಾದ ಮುಕ್ತ ಗಡಿಗಳನ್ನು ನಾವು ಮಾರಾಟ ಮಾಡಬೇಕಾಗಿಲ್ಲ. ಆದ್ದರಿಂದ ಅವಳಿಗೆ ಸ್ವಲ್ಪ ಸುಲಭವಾದ ಕೆಲಸವಿದೆ. ನಾನು ಇನ್ನೊಂದು ಬದಿಯ ಪತ್ರಿಕಾ ಕಾರ್ಯದರ್ಶಿಯಾಗಲು ಬಯಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಲೀವಿಟ್ ಬಗ್ಗೆ ಟ್ರಂಪ್ ಹಿಂದಿನ ಕಾಮೆಂಟ್‌ಗಳು
ಕಳೆದ ಆಗಸ್ಟ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಟ್ರಂಪ್ ಲೀವಿಟ್ ಬಗ್ಗೆ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಆ ಸಮಯದಲ್ಲಿ, ಟ್ರಂಪ್, ಇದು ಮುಖ, ಇದು ಮನಸ್ಸು, ಇದು ತುಟಿಗಳು, ಅವು ಚಲಿಸುವ ರೀತಿ, ಅವು ಮೆಷಿನ್ ಗನ್ ನಂತೆ ಚಲಿಸುತ್ತವೆ ಲಿವಿಟ್ಳನ್ನು ಉಲ್ಲೇಖಿಸಿ ಹೇಳಿದ್ದರು. ಅಲ್ಲದೆ, ಕ್ಯಾರೋಲಿನ್‌ಗಿಂತ ಉತ್ತಮ ಪತ್ರಿಕಾ ಕಾರ್ಯದರ್ಶಿಯನ್ನು ಯಾರೂ ಎಂದಿಗೂ ಕಂಡಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ತಿಳಿಸಿದ್ದರು.
ಕ್ಯಾರೋಲಿನ್ ಲೀವಿಟ್ ಬಗ್ಗೆ
ಟ್ರಂಪ್ ಮೊದಲ ಅವಧಿಯಲ್ಲಿ, 2019 ರಿಂದ 2021 ರವರೆಗೆ ಲೀವಿಟ್ ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, ನ್ಯೂ ಹ್ಯಾಂಪ್‌ಶೈರ್ ಮೂಲದ ಲೆವಿಟ್, ರಿಯಲ್ ಎಸ್ಟೇಟ್ ಡೆವಲಪರ್ ನಿಕೋಲಸ್ ರಿಕಿಯೊ ಅವರನ್ನು ವಿವಾಹವಾಗಿದ್ದಾರೆ. ಇವರು ನಿಕೊ ಎಂಬ ಮಗನನ್ನು ಹೊಂದಿದ್ದಾರೆ. ಅಲ್ಲದೆ, ಇತಿಹಾಸದಲ್ಲಿ ಅತ್ಯಂತ ಕಿರಿಯ ಶ್ವೇತಭವನ ಪತ್ರಿಕಾ ಕಾರ್ಯದರ್ಶಿಯಾದರು,(ಏಜೆನ್ಸೀಸ್).