ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಮಂಗಗಳ ಬಿಯರ್ ಕುಡಿಯುವ ದೃಶ್ಯ 
ವಿದೇಶ

ಬೀಚ್‌ನಲ್ಲಿ ನಡೆದ ಅಚ್ಚರಿ: ಪ್ರವಾಸಿಗರ ಬಿಯರ್ ಕುಡಿದ ಮಂಗಗಳು; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್! Monkey Drinks Beer

ಪ್ರಮುಖ ಮುಖ್ಯಾಂಶಗಳು

  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಮಂಗಗಳ ಬಿಯರ್ ಕುಡಿಯುವ ದೃಶ್ಯ
  • ಪ್ರವಾಸಿಗರು ಬಿಟ್ಟುಹೋದ ಬಿಯರ್ ಬಾಟಲಿಗಳು
  • ಇಂಡೋನೇಷ್ಯಾದ ಲಾಂಬೋಕ್ ದ್ವೀಪದ ಬೀಚ್‌ನಲ್ಲಿ ಸೆರೆಯಾದ ದೃಶ್ಯ
ವೈರಲ್​: ಇಂಡೋನೇಷ್ಯಾದ ಲಾಂಬೋಕ್ ದ್ವೀಪದಲ್ಲಿ ಪ್ರವಾಸಿಗರು ಕುಡಿದು ಎಸೆದು ಹೋಗಿದ್ದ ಬಿಯರ್​ ಬಾಟಲಿಗಳನ್ನು ಅಲ್ಲಿಗೆ ಬಂದ ಮಂಗಗಳು ಕೈಗೆತ್ತಿಕೊಂಡು ಬಿಯರ್ (Monkey Drinks Beer)​ ಕುಡಿಯಲು ಯತ್ನಿಸಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ಯಾರೋ ಕಿಡಿಗೇಡಿಗಳು ಬೀಚ್​ನಲ್ಲಿ ಬಿಯರ್​ ಕುಡಿದು ಅದನ್ನು ಅಲ್ಲೇ ಎಸೆದು ಹೋಗಿದ್ದಾರೆ.
ಸ್ವಲ್ಪ ಸಮಯದ ಬಳಿಕ, ಆ ಸ್ಥಳಕ್ಕೆ ಬಂದ ಎರಡು ಮಂಗಗಳು ಬಿಯರ್​ ಬಾಟಲಿಯನ್ನು ಎತ್ತಿಕೊಂಡು ಅದರಲ್ಲಿ ಮಿಕ್ಕಿರುವ ಚುರುಪಾರು ಬಿಯರ್​ನ್ನು ಕುಡಿದಿರುವ ದೃಶ್ಯ ಸೆರೆಯಾಗಿದೆ.

ಪ್ರಾಣಿ ಪ್ರೇಮಿಗಳ ಆಕ್ರೋಶ!

ಈ ವಿಡಿಯೋ ಎಲ್ಲಡೆ ವೈರಲ್​ ಆಗುತ್ತಿದ್ದಂತೆ ಪರಿಸರ ಹಾಗೂ ಪ್ರಾಣಿ ಪ್ರೇಮಿಗಳ ಕೋಪದ ಕಟ್ಟೆ ಒಡೆದಿದೆ. ಮೊದಲನೆದಾಗಿ ಬೀಚ್​ನಲ್ಲಿ ಬಿಯರ್​ ಕುಡಿದಿರುವುದು ತಪ್ಪು. ಆಯ್ತು ಏನೋ ಮೋಜಿಗೆ ಬಿಯರ್​ ಹೀರಿದ ನಂತರ ಅದನ್ನು ತಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ಅದನ್ನು ಬಿಟ್ಟು ಹೀಗೆ ಎಲ್ಲಿ ಬೇಕೋ ಅಲ್ಲಿ ಎಸೆದು ಹೋದರೆ ಹೇಗೆ? ಅದನ್ನು ಆ ಕೋತಿಗಳು ಕುಡಿದು ಅವುಗಳ ಜೀವಕ್ಕೆ ಏನಾದರೂ ಅನಾಹುತವಾದರೆ ಹೇಗೆ? ಇದಕ್ಕೆ ಯಾರು ಹೊಣೆ? ಎಂದು ಕಿಡಿಕಾರಿದ್ದಾರೆ.
ನೆಟ್ಟಿಗರ ಫನ್ನಿ ಕಮೆಂಟ್ಸ್​​!
ಒಂದು ಕಡೆ ಪ್ರಾಣಿ ಪ್ರೇಮಿಗಳು ಮತ್ತು ಪರಿಸರವಾದಿಗಳು ಈ ವಿಡಿಯೋಗೆ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೊಂದು ಕಡೆ ನೆಟ್ಟಿಗರು ಫನ್ನಿ ಕಮೆಂಟ್​ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಕೋತಿಗಳು ಪಾನಮತ್ತವಾಗಿ ತುಗಾಡುತ್ತಿದ್ದವು. ಆಗ ವಿಡಿಯೋ ಮಾಡಿದ್ದರೆ ಇನ್ನೂ ಮಜವಾಗಿರುತ್ತಿತ್ತು ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ.
ಮಂಗನಿಂದ ಮಾನವನಾದರೆ, ಈಗ ಮಾನವನ ಚಟವನ್ನು ಮಂಗಗಳು ಕಲಿಯುತ್ತಿವೆ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ. ಈಗ ಮಂಗಗಳಿಗೆ ಈ ಚಟ ಅಭ್ಯಾಸವಾದರೆ ನಾಳೆಯಿಂದ ಬಾಳೆಹಣ್ಣಿನ ಬದಲು ಬಿಯರ್​ನ್ನೇ ಕೇಳುತ್ತವೆ ಎಂದು ಮತ್ತೊಬ್ಬರು ಹೇಳಿದ್ದಾರೆ, (ಏಜನ್ಸೀಸ್​).