ನಾವು ಭಯೋತ್ಪಾದನೆಯನ್ನು ಬುಡಸಮೇತ ಕಿತ್ತಾಕುತ್ತೇವೆ: ಶಹಬಾಜ್​ ಶರೀಫ್​ 
ವಿದೇಶ

ಪಾಕ್​ ಸೈನಿಕರ ಮೇಲೆ ಆತ್ಮಾಹುತಿ ದಾಳಿ: ನಾವು ಭಯೋತ್ಪಾದನೆಯನ್ನು ಸಹಿಸಲ್ಲ; ಬೇರು ಸಮೇತ ಕಿತ್ತಾಕುತ್ತೇವೆ ಶಹಬಾಜ್​ ಶರೀಫ್​ ಎಚ್ಚರಿಕೆ! Shehbaz Sharif on Terrorism

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಬಾಂಬ್ ದಾಳಿ
  • 26 ಜನ ಸಾವು 100 ಕ್ಕೂ ಅಧಿಕ ಜನಕ್ಕೆ ಗಾಯ
  • ದಾಳಿಯ ಹೊಣೆಹೊತ್ತ ಬಲೂಚ್ ಲಿಬರೇಷನ್ ಆರ್ಮಿ
  • ನಾವು ಭಯೋತ್ಪಾದನೆಯನ್ನು ಬುಡಸಮೇತ ಕಿತ್ತಾಕುತ್ತೇವೆ: ಶಹಬಾಜ್​ ಶರೀಫ್​
ಪಾಕಿಸ್ತಾನ: ಭಾನುವಾರ (ಮೇ.24) ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಸೈನಿಕರು ಸಂಚರಿಸುತ್ತಿದ್ದ ರೈಲಿನಲ್ಲಿ ಆತ್ಮಾಹುತಿ ಬಾಂಬ್​ ದಾಳಿ ನಡೆದ ಹಿನ್ನಲೆ ಸುಮಾರು 26 ಜನ ಮೃತ ಪಟ್ಟಿದ್ದರೆ, 100 ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.
ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ಪಾಕ್​ ಪ್ರಧಾನಿ ಶಹಬಾಜ್​ ಶರೀಫ್(Shehbaz Sharif on Terrorism)​, ನಾನು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತನೆ ಮತ್ತು ಸಾಮಾನ್ಯ ಜನರನ್ನು ಹೀಗೆ ಕೊಲ್ಲುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಭಯೋತ್ಪಾದನೆಗೆ ನಾವು ಜಗ್ಗಲ್ಲ!

ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ ಶಹಬಾಜ್​ ಶರೀಫ್​, ಪಾಕಿಸ್ತಾನ ಈ ರೀತಿಯ ಭಯೋತ್ಪಾದಕ ದಾಳಿಗೆ ಹೆದರಲ್ಲ. ನಾವು ಈ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕಲು ಸಂಕಲ್ಪ ಮಾಡಿದ್ದೇವೆ ಎಂದು ಪ್ರಧಾನಿ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕ್ವೆಟ್ಟಾದಲ್ಲಿ ನಡೆದಿದ್ದೆನು?
ಭಾನುವಾರ (ಮೇ.24) ಮುಂಜಾನೆ ಕ್ವೆಟ್ಟಾದ ಚಮನ್​ ಪಟ್ಟಾಕ್​ ಬಳಿ ರೈಲು ಸಿಗ್ನಲ್​ ದಾಟುತ್ತಿದ್ದ ವೇಳೆ. ಸ್ಪೋಟಕ ತುಂಬಿದ್ದ ಕಾರು ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ರೈಲಿನ ಮೂರು ಬೋಗಿಗಳಲ್ಲಿ ಒಂದು ಬೋಗಿ ಸಂಪೂರ್ಣವಾಗಿ ಹಳಿತಪ್ಪಿದೆ. ಅದೇ ಪ್ರದೇಶದಲ್ಲಿದ್ದ 10ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಮಂಗಳವಾರದಿಂದ ಈದ್​ ಹಬ್ಬ ಪ್ರಾರಂಭವಾಗುತ್ತಿರುವ ಹಿನ್ನಲೆ ಸೇನಾ ಅಧಿಕಾರಿಗಳ ಜೊತೆಗೆ ಅವರ ಕುಟುಂಬಸ್ಥರು ಸಹ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅಷ್ಟರಲ್ಲಿ ಈ ಕೃತ್ಯ ನಡೆದಿದೆ. ಸ್ಫೋಟಕ ಪ್ರಕರಣದ ನಂತರ ಕ್ವೆಟ್ಟಾ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಪರಿಸ್ಥಿತಿ ನಿಭಾಯಿಸಲು ವೈದ್ಯರು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಈ ದಾಳಿ ನಡೆಸಿದ ಹೊಣೆಯನ್ನು ಬಲೂಚ್ ಲಿಬರೇಷನ್ ಆರ್ಮಿ (BLA) ಹೊತ್ತುಕೊಂಡಿದೆ,(ಏಜನ್ಸೀಸ್​).