ಪ್ರಧಾನಿ ಶಹಬಾಜ್ ಶರೀಫ್ ಹಾಗೂ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ಗೆ ಬೆದರಿಕೆ
- ಅಮೆರಿಕ- ಇಸ್ರೇಲ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಡಿ
- ಆಸೀಮ್ ಮುನೀರ್ ಹಾಗೂ ಶಹಬಾಜ್ ಶರೀಫ್ಗೆ ಕೊಲೆ ಬೆದರಿಕೆ ಹಾಕಿದ ಲಷ್ಕರ್ ಉಗ್ರ
- ಲಷ್ಕರ್-ಎ-ತೊಯ್ಬಾದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಇಂದ ಜೀವ ಬೆದರಿಕೆ
ಇಸ್ಲಾಮಾಬಾದ್: ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಹಾಗೂ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷೆಲ್ ಆಸಿಮ್ ಮುನೀರ್, ಅಮೆರಿಕ ಹಾಗೂ ಇಸ್ರೇಲ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ.
ಈ ಕೆಲಸ ಹೀಗೆ ಮುಂದುವರೆದರೆ ನಿಮ್ಮಿಬ್ಬರನ್ನು ಕೊಂದು ಹಾಕುವುತ್ತೇವೆಂದು ಭಯೋತ್ಪಾದನಾ ಸಂಘಟನೆ ಲಷ್ಕರ್-ಎ-ತೊಯ್ಬಾದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ (Saifullah Kasuri threats PM and Army Chief) ಬೆದರಿಕೆ ಹಾಕಿದ್ದಾರೆಂದು ವರದಿಯಾಗಿದೆ.
ಇಸ್ರೇಲ್ಗೆ ಬೆಂಬಲ ಕೊಟ್ಟರೆ ಕೊಲೆ!
ಈಗಿರುವ ಪಾಕಿಸ್ತಾನದ ನಾಯಕರಾದ ಪಿಎಂ ಶಹಬಾಜ್ ಶರೀಫ್ ಹಾಗೂ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇಸ್ರೇಲ್ ಜೊತೆ ಗುರುತಿಸಿ ಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ದೇಶ ಎಂದು ಕೂಡ ಒಪ್ಪಿಕೊಳ್ಳಬಹುದು. ಈ ರೀತಿಯ ಕೆಲಸವೇನಾದರೂ ನಡೆದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ಉಗ್ರ ಕಸೂರಿ ಎಚ್ಚರಿಕೆ ನೀಡಿದ್ದಾನೆ.
ಅಮೆರಿಕವನ್ನು ಬೆಂಬಲಿಸುವುದನ್ನು ನಿಲ್ಲಿಸಿ
ಪಾಕಿಸ್ತಾನದಲ್ಲಿ ಭಾಷಣ ಮಾಡಿರುವ ಉಗ್ರ ಸೈಫುಲ್ಲಾ ಕಸೂರಿ ಪಾಕಿಸ್ತಾನದ ಪ್ರಧಾನಿ ಮತ್ತು ಫೀಲ್ಡ್ ಮಾರ್ಷಲ್ ಅಮೆರಿಕದೊಂದಿಗೆ ಸ್ನೇಹವೃದ್ಧಿ ಮಾಡುವಲ್ಲಿ ತೊಡಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ನಮಗೆ ತೊಂದರೆಯಾಗಲಿದೆ ಎಂದು ಅವರು ಯೋಚನೆ ಮಾಡುತ್ತಿಲ್ಲ ಎಂದು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹೇಳಿದ್ದಾನೆ, (ಏಜನ್ಸೀಸ್).