ಬಾಂಬ್ ದಾಳಿಯ ದೃಶ್ಯ 
ವಿದೇಶ

ಉಕ್ರೇನ್ ಮೇಲೆ ತನ್ನ ಶಕ್ತಿಶಾಲಿ FAB-3000 ಗ್ಲೈಡ್ ಬಾಂಬ್​ನಿಂದ ದಾಳಿ ನಡೆಸಿದ ರಷ್ಯಾ | Russia attacks

ಮಾಸ್ಕೋ: ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಸಂಘರ್ಷ ಮತ್ತೊಂದು ಹಂತಕ್ಕೆ ಹೋಗಿದ್ದು, ರಷ್ಯಾ ಮಿಲಿಟರಿ(Russia attacks) ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಉಕ್ರೇನ್ ಮೇಲೆ ತನ್ನ ಶಕ್ತಿಶಾಲಿ FAB-3000 ಗ್ಲೈಡ್ ಬಾಂಬ್‌ ಪ್ರಯೋಗವನ್ನು ಮಾಡಿದೆ.
ತನ್ನ ಭೂಪ್ರದೇಶದ ಮೇಲೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಗೆ ಪ್ರತೀಕಾರವಾಗಿ, ರಷ್ಯಾ ಉಕ್ರೇನ್​ನ ಜಪೋರಿಝಿಯಾ ಪ್ರದೇಶದ ಓರಿಖಿವ್​ ಮೇಲೆ FAB-3000 ಗ್ಲೈಡ್ ಬಾಂಬ್‌ ಹಾಕಿದ್ದು, ಅದರ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಸುಮಾರು 3 ಟನ್ ತೂಕದ FAB-3000 ಗ್ಲೈಡ್ ಬಾಂಬ್‌ 1.4 ಟನ್ ಸ್ಪೋಟಕಗಳನ್ನು ಹೊತ್ತೊಯ್ದು ಸ್ಪೋಟಿಸಿದೆ. ಸಾವು ನೋವಿನ ಕುರಿತು ಇನ್ನೂ ಯಾವುದೇ ಮಾಹಿತಿ ಹೊರ ಬಂದಿಲ್ಲ. ಹಾಗೆಯೇ ಉಕ್ರೇನ್ ಸಹ ನಿರ್ಣಾಯಕ ಮೂಲಸೌಕರ್ಯ ಮತ್ತು ಕಪ್ಪು ಸಮುದ್ರ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ (ಏಜೆನ್ಸೀಸ್).